ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಲೆಯೇ ಇಲ್ಲದ ಜೆಡಿಎಸ್ ನಿಂದ ಸ್ಪರ್ಧಿಸಿ ಈ ಪಾಟಿ ಸೋಲುವುದು ಬೇಕಿತ್ತಾ, ಪ್ರಮೋದ್ ಮಧ್ವರಾಜ್?

|
Google Oneindia Kannada News

ಅವರದ್ದು ಕಟ್ಟಾ ಕಾಂಗ್ರೆಸ್ ಕುಟುಂಬ ಎಂದೇನೂ ಅಲ್ಲ, ಅವರ ತಾಯಿ ಮನೋರಮಾ ಮಧ್ವರಾಜ್ ಹಿಂದೊಮ್ಮೆ, ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದವರು. ಅವರ ಪುತ್ರ, ಪ್ರಮೋದ್ ಮಧ್ವರಾಜ್, ಸಿದ್ದರಾಮಯ್ಯನವರ ಸರಕಾರದಲ್ಲಿ ಸಚಿವರೂ ಆಗಿದ್ದವರು.

ಅಸಲಿಗೆ, ಸಿದ್ದರಾಮಯ್ಯನವರ ಸರಕಾರ ಪೂರ್ಣಾವಧಿ ಮುಗಿಸುವ ಕೆಲವು ತಿಂಗಳ ಹಿಂದೆ, ಪ್ರಮೋದ್ ಮಧ್ವರಾಜ್, ಬಿಜೆಪಿಗೆ ಸೇರುವ ಮತ್ತು ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸುವ, ಅದೂ ಆಗದಿದ್ದಲ್ಲಿ, ಲೋಕಸಭಾ ಚುನಾವಣೆಗೆ ಕಮಲದ ಟಿಕೆಟಿನಿಂದ ಸ್ಪರ್ಧಿಸುವ ಬಗ್ಗೆ ಗುಸುಗುಸು ಸುದ್ದಿ ಹರಿದಾಡುತ್ತಿತ್ತು. ಅದಕ್ಕೆ, ಪ್ರಮೋದ್ ಅವರ ನಗುವೇ ಉತ್ತರವಾಗಿತ್ತು.

ಆದರೆ, ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವುದಕ್ಕೆ ಉಡುಪಿ ಬಿಜೆಪಿ ಘಟಕದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ, ಅವರು ಕಾಂಗ್ರೆಸ್ ನಲ್ಲೇ ಮುಂದುವರಿದರು, ರಘುಪತಿ ಭಟ್ ಅವರು ಪ್ರಮೋದ್ ವಿರುದ್ದ ಉತ್ತಮ ಅಂತರದಿಂದ ಗೆಲುವು ಸಾಧಿಸಿದರು. ಇತ್ತ, ಹಲವು ವಿರೋಧದ ನಡೆವೆಯೂ ಶೋಭಾ ಕರಂದ್ಲಾಜೆ ಲೋಕಸಭಾ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಮೀನುಗಾರಿಕಾ ದೋಣಿ ನಾಪತ್ತೆ : ಪ್ರಮೋದ್ ಮಧ್ವರಾಜ್ ಸ್ಫೋಟಕ ಮಾಹಿತಿ ಮೀನುಗಾರಿಕಾ ದೋಣಿ ನಾಪತ್ತೆ : ಪ್ರಮೋದ್ ಮಧ್ವರಾಜ್ ಸ್ಫೋಟಕ ಮಾಹಿತಿ

ರಾಜಕಾರಣದಲ್ಲಿ ಸಕ್ರಿಯವಾಗಿ ಇರಬೇಕಲ್ಲವೇ ಎಂದು, ಅತ್ತ ಕಾಂಗ್ರೆಸ್ಸಿಗೂ ಇತ್ತ ಜೆಡಿಎಸ್ಸಿಗೂ ಬೇಡವಾದ ಉಡುಪಿ - ಚಿಕ್ಕಮಗಳೂರು ಕ್ಷೇತ್ರವನ್ನು ಮೈತ್ರಿಧರ್ಮದ ಆಧಾರದಲ್ಲಿ ಜೆಡಿಎಸ್ಸಿಗೆ ಬಿಟ್ಟುಕೊಡಲಾಯಿತು. ಮೊಮ್ಮಕ್ಕಳು ಪ್ರಜ್ವಲ್, ನಿಖಿಲ್ ಮುನ್ನವಾಗಿಯೇ ಪ್ರಮೋದ್ ಮಧ್ವರಾಜ್ ಜೆಡಿಎಸ್ 'ಬಿಫಾರಂ' ಪಡೆದುಕೊಂಡು ಬಿಟ್ಟರು.

ಪ್ರಮೋದ್ ಮಧ್ವರಾಜ್ ಮಾಡಿದ ತಪ್ಪು ಇಲ್ಲೇ

ಪ್ರಮೋದ್ ಮಧ್ವರಾಜ್ ಮಾಡಿದ ತಪ್ಪು ಇಲ್ಲೇ

ದಾನಧರ್ಮದಲ್ಲಿ ಎತ್ತಿದ ಕೈ ಎಂದೇ ಹೆಸರಾಗಿರುವ ಪ್ರಮೋದ್ ಮಧ್ವರಾಜ್ ಮಾಡಿದ ತಪ್ಪು ಇಲ್ಲೇ. ಜೆಡಿಎಸ್ಸಿಗೆ ಏನು ಇಲ್ಲಿ ನೆಲೆಯೇ ಇಲ್ಲವೋ, ಅಲ್ಲಿಂದ ಟಿಕೆಟ್ ಪಡೆದುಕೊಂಡರು. ಮೊದಲೇ ಅಭ್ಯರ್ಥಿಯ ಕೊರತೆಯಲ್ಲಿದ್ದ ದೇವೇಗೌಡರಿಗೆ ಮೈತ್ರಿಧರ್ಮದ ಹೆಸರಿನಲ್ಲಿ ಸಿಕ್ಕಿದ್ದೇ ಸೀರುಂಡೆ ಎಂದು ಬಿಫಾರಂ ವಿತರಿಸಿ ಬಿಟ್ಟರು. ಉಡುಪಿ - ಚಿಕ್ಕಮಗಳೂರು ಎನ್ನುವ ಕೇಸರಿ ಬೆಲ್ಟ್ ನಲ್ಲಿ ಗೆಲುವು ಸಾಧ್ಯವೇ ಎನ್ನುವುದನ್ನು ಪ್ರಮೋದ್ ಯೋಚಿಸಲೇ ಇಲ್ಲ.

ಬಿಜೆಪಿ,ಕಾಂಗ್ರೆಸ್ ವಾಕ್ಸಮರಕ್ಕೆ ಸಾಕ್ಷಿಯಾಗುತ್ತಿದೆ ಉಡುಪಿ ಚಿಕ್ಕಮಗಳೂರು ಕ್ಷೇತ್ರ ಬಿಜೆಪಿ,ಕಾಂಗ್ರೆಸ್ ವಾಕ್ಸಮರಕ್ಕೆ ಸಾಕ್ಷಿಯಾಗುತ್ತಿದೆ ಉಡುಪಿ ಚಿಕ್ಕಮಗಳೂರು ಕ್ಷೇತ್ರ

ಲೋಕಸಭಾ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದಾರೆ

ಲೋಕಸಭಾ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದಾರೆ

ಆಗರ್ಭ ಶ್ರೀಮಂತರಾಗಿರುವ ಪ್ರಮೋದ್ ಮಧ್ವರಾಜ್, ಲೋಕಸಭಾ ಚುನಾವಣೆಯಲ್ಲಿ ಸಿಕ್ಕಾಪಟ್ಟೆ ಪ್ರಚಾರವನ್ನು ಮಾಡಿದರು, ಕುಮಾರಸ್ವಾಮಿಯೂ ಬಂದು ಭಾಷಣ ಮಾಡಿ ಹೋದರು. ಆದರೆ, ಬಿಜೆಪಿಯವರು 'ಮೋದಿಯ ಮುಖವನ್ನು ನೋಡಿ ಓಟ್ ಮಾಡಿ' ಎನ್ನುವ ಪ್ರಚಾರ, ಪಕ್ಷಕ್ಕೆ ಭರ್ಜರಿ ಫಸಲು ತಂದುಕೊಟ್ಟಿತು. ಅಸಲಿಗೆ, ಉಡುಪಿ ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದಾರೆ.

ಕೈ, ತೆನೆ ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ ಪ್ರಮೋದ್ ಮಧ್ವರಾಜ್ ಕೈ, ತೆನೆ ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ ಪ್ರಮೋದ್ ಮಧ್ವರಾಜ್

ಶೋಭಾ ಗೋಬ್ಯಾಕ್ ಅಭಿಯಾನವೂ ನಡೆದು ಹೋಯಿತು

ಶೋಭಾ ಗೋಬ್ಯಾಕ್ ಅಭಿಯಾನವೂ ನಡೆದು ಹೋಯಿತು

ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿದ್ದವು. ಶೋಭಾ ಗೋಬ್ಯಾಕ್ ಅಭಿಯಾನವೂ ನಡೆದು ಹೋಯಿತು. ಒಂದು ಕಡೆ ಜಯಪ್ರಕಾಶ್ ಹೆಗ್ಡೆ ಇನ್ನೊಂದು ಕಡೆ ಯಶಪಾಲ್ ಸುವರ್ಣ ಕೂಡಾ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಮೋದಿ ಎನ್ನುವ ಹೆಸರಿನ ಮುಂದೆ ಮತದಾರನೂ ಕನ್ಫ್ಯೂಸ್ ಆಗಲಿಲ್ಲ, ಜೊತೆಗೆ ಬಿಜೆಪಿಯವರೂ ಒಗ್ಗಟ್ಟಾಗಿ ಪ್ರಚಾರವನ್ನು ಮಾಡಿದರು.

ಕರ್ನಾಟಕದ ಬಿಜೆಪಿಗೆ ಕನ್ಫರ್ಮ್ ಸೀಟುಗಳಲ್ಲಿ ಉಡುಪಿ - ಚಿಕ್ಕಮಗಳೂರು ಕ್ಷೇತ್ರ ಕೂಡಾ ಒಂದು

ಕರ್ನಾಟಕದ ಬಿಜೆಪಿಗೆ ಕನ್ಫರ್ಮ್ ಸೀಟುಗಳಲ್ಲಿ ಉಡುಪಿ - ಚಿಕ್ಕಮಗಳೂರು ಕ್ಷೇತ್ರ ಕೂಡಾ ಒಂದು

ಕರ್ನಾಟಕದ ಬಿಜೆಪಿಗೆ ಕನ್ಫರ್ಮ್ ಸೀಟುಗಳಲ್ಲಿ ಉಡುಪಿ - ಚಿಕ್ಕಮಗಳೂರು ಕ್ಷೇತ್ರ ಕೂಡಾ ಒಂದು. ಇಲ್ಲಿ ಗೆಲುವಿನ ಅಂತರವಷ್ಟೇ ಕುತೂಹಲವಾಗಿ ಉಳಿದದ್ದು. ಇನ್ನೊಂದು ವಿಚಾರ, ಪ್ರಮೋದ್ ಮಧ್ವರಾಜ್ ಉಡುಪಿ ನಗರ ಹೊರತಾಗಿ ಅಷ್ಟೇನೂ ಜನಪ್ರಿಯ ಮುಖಂಡರಲ್ಲ. ಕಳೆದ ಬಾರಿ ಯಾವ ಅಂತರದಿಂದ ಗೆದ್ದಿದ್ದರೋ ಅದರ ಬಹುತೇಕ್ ಡಬಲ್ ಲೀಡ್ ನಲ್ಲಿ ಶೋಭಾ ಗೆದ್ದಿದ್ದಾರೆ.

ಶೋಭಾ ಕರಂದ್ಲಾಜೆ ಗೆಲುವಿನ ಅಂತರ 349,599

ಶೋಭಾ ಕರಂದ್ಲಾಜೆ ಗೆಲುವಿನ ಅಂತರ 349,599

ಕಳೆದ ಬಾರಿ 181,643 ಮತಗಳ ಅಂತರದಿಂದ ಗೆದ್ದಿದ್ದ ಶೋಭಾ ಕರಂದ್ಲಾಜೆಯ ಈ ಬಾರಿಯ ಗೆಲುವಿನ ಅಂತರ 349,599. ಶೋಭಾಗೆ ಬಿದ್ದ ಒಟ್ಟು ಮತಗಳು 718,916, ಪ್ರಮೋದ್ ಮಧ್ವರಾಜ್ ಪಡೆದ ಮತಗಳು 369,317. ಅಲ್ಲಿಗೆ ಶೋಭಾ ಸತತವಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ, ಉಡುಪಿ - ಚಿಕ್ಕಮಗಳೂರು ಭದ್ರ ಕೇಸರಿ ಕೋಟೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದನ್ನರಿಯದ ಪ್ರಮೋದ್ ಮಧ್ವರಾಜ್ ಸುಖಾಸುಮ್ಮನೆ ಹೀನಾಯ ಸೋಲು ಎದುರಿಸಬೇಕಾಯಿತು.

English summary
JDs - INC candidate Pramod Madhwaraj faced humiliated defeat in Udupi Chikkamagaluru constituency against his nearest BJP candidate Shobha Karandlaje.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X