ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೆರಿಕಾದಿಂದ ಉಡುಪಿಗೆ ಬಂದು ಬ್ರೇನ್ ಕ್ವೆಸ್ಟ್ ನಡೆಸುವ ಪೂರ್ಣಿಮಾ, ಏನಿದರ ಕಥೆ?

By ಉಡುಪಿ ಪ್ರತಿನಿಧಿ
|
Google Oneindia Kannada News

ನಮ್ಮಲ್ಲಿ ಅನೇಕರು ವಿದೇಶಗಳಲ್ಲಿ ದುಡಿಯುತ್ತಾರೆ. ಊರಿಗೆ ಬಂದು ತಾವಿರುವ ದೇಶವನ್ನು ಹೊಗಳುತ್ತಾ, ಭಾರತವನ್ನು ದೂಷಿಸುವ ಕೆಲಸ ಮಾಡ್ತಾರೆ. ಆದರೆ ಪೂರ್ಣಿಮಾ ಕಾಮತ್ ಇದಕ್ಕೆ ಅಪವಾದ. ಅವರಲ್ಲಿನ ಮಕ್ಕಳ ಕುರಿತ ಪ್ರೀತಿ ಮತ್ತು ಮಮಕಾರ ಪ್ರಶ್ನಾರ್ಹ. ಅಮೆರಿಕಾದಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಬರುವ ನೌಕರಿ ಇದೆ. ಪತಿ ಕೂಡ ಇಂಜಿನಿಯರ್. ಆದರೆ ಇವರಿಗೆ ಊರ ಮಕ್ಕಳೆಂದರೆ ಬಲುಪ್ರೀತಿ. ಆ ಮಕ್ಕಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿಗೆ ಹೇಳಿಕೊಡಬೇಕು ಎಂಬ ಆಸೆ. ಈ ಆಸೆಯ ಫಲವೇ ವರ್ಷಂಪ್ರತಿ ಉಡುಪಿಯಲ್ಲಿ ನಡೆಯುವ ಬ್ರೈನ್ ಕ್ವೆಸ್ಟ್.

 ಪ್ರತಿ ವರ್ಷ ನಡೆಯುವ ಬ್ರೈನ್ ಕ್ವೆಸ್ಟ್

ಪ್ರತಿ ವರ್ಷ ನಡೆಯುವ ಬ್ರೈನ್ ಕ್ವೆಸ್ಟ್

ಅದೊಂದು ಬೇರೆಯದೇ ಲೋಕ. ಅಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಲಕರಣೆಗಳೇ ತುಂಬಿರುತ್ತವೆ. ನೂರಾರು ಮಕ್ಕಳ ಕಲರವ. ಮಕ್ಕಳ ಮಧ್ಯೆ ಒಬ್ಬ ಮಹಿಳೆ. ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಉಡುಪಿಯ ಈ ಮಹಿಳೆ ಹೆಸರು ಪೂರ್ಣಿಮಾ ಕಾಮತ್. ಮಕ್ಕಳ ಮೇಲೆ ಅದೆಂಥ ಮಮಕಾರ ಅಂತೀರಾ ಅವರಿಗೆ. ವರ್ಷಂಪ್ರತಿ ವಿದ್ಯಾರ್ಥಿಗಳಿಗಾಗಿಯೇ ಬ್ರೈನ್ ಕ್ವೆಸ್ಟ್ ಎಂಬ ಪ್ರದರ್ಶನ ನಡೆಸಲು ದೂರದ ಅಮೆರಿಕದಿಂದ ತಪ್ಪದೇ ಊರಿಗೆ ಬರುತ್ತಾರೆ. ಇಲ್ಲಿನ ಮಕ್ಕಳ ಜ್ಞಾನವನ್ನು ಒರೆಗೆ ಹಚ್ಚಲು ಅವಕಾಶ ಮಾಡಿಕೊಡುತ್ತಾರೆ. ಉಡುಪಿಯ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಇಲ್ಲಿ ಸೇರುತ್ತಾರೆ. ತಮ್ಮದೇ ವೈಜ್ಞಾನಿಕ ಮಾದರಿಗಳನ್ನು ತಂದು ವಿಜ್ಞಾನದ ಬಗೆಗಿನ ಜ್ಞಾನವನ್ನು ಹಂಚಿಕೊಳ್ಳುತ್ತಾರೆ.

ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಯುವ ಚಿಂತನ ವಿಶೇಷ ಕಾರ್ಯಕ್ರಮಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಯುವ ಚಿಂತನ ವಿಶೇಷ ಕಾರ್ಯಕ್ರಮ

 ಹದಿನೈದು ವರ್ಷಗಳಿಂದ ಆಯೋಜನೆ

ಹದಿನೈದು ವರ್ಷಗಳಿಂದ ಆಯೋಜನೆ

ಸತತ ಹದಿನೈದು ವರ್ಷಗಳಿಂದಲೂ ಬ್ರೈನ್ ಕ್ವೆಸ್ಟ್ ನಡೆದುಕೊಂಡು ಬಂದಿದೆ. ಹದಿನೈದು ವರ್ಷಗಳಲ್ಲಿ ಪೂರ್ಣಿಮಾ ಕಾಮತ್ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗೆಗೆ ಹೊಸತನ್ನು ಕಲಿಸಿದ್ದಾರೆ. ಹೊಸ ಶೋಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ಕೊಟ್ಟು ಪ್ರೋತ್ಸಾಹಿಸಿದ್ದಾರೆ. ಹದಿನೈದು ವರ್ಷ ಇಂತಹ ಪ್ರದರ್ಶನ ನಡೆಸಲು ಲಕ್ಷಾಂತರ ರೂ ಖರ್ಚು ಮಾಡಿದ್ದಾರೆ. ಪರಿಣಾಮ, ಪೂರ್ಣಿಮಾ ಕಾಮತ್ ಎಂದರೆ ಉಡುಪಿಯ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಈ ಸಲ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಪೂರ್ಣಿಮಾ ಎಂದಿನಂತೆ ಲವಲವಿಕೆಯಿಂದ ಓಡಾಡುತ್ತಾ ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳನ್ನು ನೋಡುತ್ತಾ, ಅವರಲ್ಲಿ ಮಾಹಿತಿ ಪಡೆಯುತ್ತಾ, ಅವರ ಬೆನ್ನು ತಟ್ಟುವ ಕೆಲಸ ಮಾಡಿದ್ದಾರೆ.

 ಅಮೆರಿಕದಿಂದ ಬಂದ ರೋಬೊಗಳು

ಅಮೆರಿಕದಿಂದ ಬಂದ ರೋಬೊಗಳು

ಪ್ರತಿವರ್ಷ ನಡೆಸುವ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರದರ್ಶನ ಬ್ರೈನ್ ಕ್ವೆಸ್ಟ್, ವಿಜ್ಞಾನದ ಲೋಕವನ್ನೇ ತೆರೆದಿಡುತ್ತದೆ. ವಸ್ತುಪ್ರದರ್ಶನದಲ್ಲಿ ಇನ್ನೂರಕ್ಕೂ ಅಧಿಕ ವಿಜ್ಞಾನ ಸಂಬಂಧಿ ಸಲಕರಣೆಗಳು, ನಲ್ವತ್ತಕ್ಕೂ ಹೆಚ್ಚಿನ ವಿಜ್ಞಾನದ ಮಾದರಿಗಳು ಪ್ರದರ್ಶನಗೊಳ್ಳುತ್ತವೆ. ಈ ಬಾರಿ ಪರಿಸರ, ಸ್ವಚ್ಛತೆ ಕುರಿತ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಮೆರಿಕದ ಬಗೆಬಗೆಯ ರೋಬೋಟ್ ಗಳು, ಆಟಿಕೆಗಳು, ಸಲಕರಣೆಗಳು, ಯಂತ್ರೋಪಕರಣದ ಮಾದರಿಗಳು ಪ್ರತಿಯೊಂದನ್ನೂ ಪೂರ್ಣಿಮಾ ಉಡುಪಿಯ ಮಕ್ಕಳಿಗಾಗಿ ಪ್ರೀತಿಯಿಂದ ತಂದು ತೋರಿಸಿದ್ದಾರೆ.

11 ವರ್ಷದ ಈ ತಮಿಳು ಹುಡುಗಿ ಬುದ್ಧಿಮತ್ತೆ ಐನ್ ಸ್ಟೀನ್ ಗಿಂತ ಹೆಚ್ಚು11 ವರ್ಷದ ಈ ತಮಿಳು ಹುಡುಗಿ ಬುದ್ಧಿಮತ್ತೆ ಐನ್ ಸ್ಟೀನ್ ಗಿಂತ ಹೆಚ್ಚು

 ಜ್ಞಾನ ವಿಸ್ತಾರಕ್ಕೆ ಮೆಟ್ಟಿಲಾಗುವ ಪೂರ್ಣಿಮಾ ಹಂಬಲ

ಜ್ಞಾನ ವಿಸ್ತಾರಕ್ಕೆ ಮೆಟ್ಟಿಲಾಗುವ ಪೂರ್ಣಿಮಾ ಹಂಬಲ

"ನಾವು ಅಮೆರಿಕದಲ್ಲಿ ಬೇಕಾದಷ್ಟು ದುಡಿಯುತ್ತೇವೆ. ಅಲ್ಲಿ ಸ್ವಂತ ಮನೆಯನ್ನೂ ಮಾಡಿದ್ದೇವೆ. ಆದರೆ ದೇಶದ ವಿದ್ಯಾರ್ಥಿಗಳಿಗಾಗಿ ಏನಾದರೂ ಉಪಯೋಗ ಆಗುವಂತಹದ್ದನ್ನು ಮಾಡಬೇಕೆಂದು ನಿರ್ಧರಿಸಿದೆವು. ಮಕ್ಕಳೆಂದರೆ ನನಗೆ ತುಂಬ ಪ್ರೀತಿ. ಆದ್ದರಿಂದ ಅವರ ಜ್ಞಾನವನ್ನು ವಿಸ್ತಾರ ಮಾಡುವ ಮೂಲಕ ಅವರನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದೇ ನನ್ನ ಉದ್ದೇಶ. ಕಳೆದ ಹದಿನೈದು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ ಮತ್ತು ಇದರಲ್ಲಿ ನನಗೆ ಸಂತೋಷ, ತೃಪ್ತಿ ಸಿಕ್ಕಿದೆ" ಎನ್ನುತ್ತಾರೆ ಪೂರ್ಣಿಮಾ ಕಾಮತ್.

English summary
Poornima Kamath, who lives in America, comes to udupi once a year and organise Brain Quest for children here. It will increase the knowledge of science and technology of children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X