ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಅಕ್ರಮ ಗೋಸಾಗಾಟಗಾರರಿಗೆ ಪೊಲೀಸರ ಖಡಕ್ ಎಚ್ಚರಿಕೆ

|
Google Oneindia Kannada News

ಉಡುಪಿ, ಜುಲೈ 16: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಗೋವುಗಳ ಕಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಗೋಗಳ್ಳತನ ಪ್ರಕರಣಗಳ 102 ಆರೋಪಿಗಳ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದರು.

ಈಗ ಉಡುಪಿ ಜಿಲ್ಲೆಯಲ್ಲಿ ಗೋವುಗಳ ಕಳ್ಳತನ ಹಾಗೂ ಅಕ್ರಮ ಗೋಸಾಗಾಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಪರೇಡ್ ನಡೆಸಿ ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಗೋಗಳ್ಳತನ ಹಾಗು ಅಕ್ರಮ ಗೋಸಾಗಾಟ ಪ್ರಕರಣಗಳ 157 ಮಂದಿ ಹಳೆಯ ಆರೋಪಿಗಳ ಪರೇಡ್ ನಡೆಸಿ ವಾರ್ನಿಂಗ್ ನೀಡಲಾಗಿದೆ.

 ಅಕ್ರಮ ಗೋ ಸಾಗಾಟಗಾರರಿಗೆ ಮಂಗಳೂರು ಪೊಲೀಸರ ವಾರ್ನಿಂಗ್ ಅಕ್ರಮ ಗೋ ಸಾಗಾಟಗಾರರಿಗೆ ಮಂಗಳೂರು ಪೊಲೀಸರ ವಾರ್ನಿಂಗ್

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಆರೋಪಿಗಳ ಪರೇಡ್ ನಡೆಸಿ, ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದು. ಅಕ್ರಮ ಗೋಸಾಗಾಟ, ಕಳ್ಳತನ ಮುಂದುವರೆಸಿದಲ್ಲಿ ಗಡಿಪಾರು ಅಥವಾ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

police warned illegal cattle transporters in udupi

ಗೋಕಳ್ಳತನ, ಅಕ್ರಮ ಗೋಸಾಗಾಟ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ತಾಲೂಕು ದಂಡಾಧಿಕಾರಿಗೆ ಈಗಾಗಲೇ ವರದಿ ಸಲ್ಲಿಸಿದ್ದು, ಸನ್ನಡತೆಗಾಗಿ ಅಧಿಕ ಮೊತ್ತದ ಬಾಂಡ್ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.

English summary
Udupi police commissioner Nisha Jems warned illegal cattle transporters in udupi, they conducted a parade of accused of illegal cow transport case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X