ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂದಾಪುರದಲ್ಲಿ ಸಿಕ್ಕಿಬಿದ್ದರು ಚಿನ್ನ‌ ಸಾಗಾಟ ಮಾಡುತ್ತಿದ್ದ ಹನ್ನೊಂದು ಮಂದಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಫೆಬ್ರವರಿ 27: ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣದಿಂದ ಭಟ್ಕಳಕ್ಕೆ ಚಿನ್ನವನ್ನು ಅಕ್ರಮ ಸಾಗಾಟ ಮಾಡುತ್ತಿದ್ದ 11 ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಭಟ್ಕಳ ಮೂಲದ ನವೀದ್ (23), ಮಹಮ್ಮದ್ ಕಲೀಲ್ ಕಾಝಿಯಾ (62), ಮಹಮ್ಮದ್ ಅಸೀಮ್ (23), ಫೈಝ್ ಅಹಮ್ಮದ್ ಮವಾನ್ (29), ಮಹಮ್ಮದ್ ಅದ್ನಾನ್ (25) ಬಂಧಿತರು. ಬಂಧಿತರಿಂದ 1152.47 ಗ್ರಾಂ ತೂಕದ ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ.

ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಪತ್ತೆಯಾಯ್ತು 3,350 ಟನ್ ಚಿನ್ನ!ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಪತ್ತೆಯಾಯ್ತು 3,350 ಟನ್ ಚಿನ್ನ!

ಉಳಿದ ಆರೋಪಿಗಳಾದ ಮುಜ್ತಾಬಾ ಕಾಸೀಮ್, ಉಮೈರ್ ಅಹಮ್ಮದ್, ವಾಸಿಫ್ ಅಹಮದ್, ಮುಝಾಮಿಲ್, ಜಮೀಲ್, ಮೀರಾ ಸಮೀರ್ ಎನ್ನುವವರನ್ನು ವಿಚಾರಣೆ ಸಲುವಾಗಿ ಮಂಗಳೂರಿನ ಕಮಿಷನರ್ ಆಫ್ ಕಸ್ಟಮ್ಸ್ ಗೆ ಹಸ್ತಾಂತರ ಮಾಡಲಾಗಿದೆ. ಸ್ವಾಧೀನಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ 46 ಲಕ್ಷವಾಗಿದ್ದು, ವಾಹನಗಳ ಒಟ್ಟು ಮೌಲ್ಯ 10 ಲಕ್ಷ.

Police Arrested 11 For Smuggling Gold In Kundapura

ಉತ್ತರ ಪ್ರದೇಶದಲ್ಲಿ ಚಿನ್ನದ ಕಥೆ: ವಾಸ್ತವ ಸಂಗತಿಯೇನು?ಉತ್ತರ ಪ್ರದೇಶದಲ್ಲಿ ಚಿನ್ನದ ಕಥೆ: ವಾಸ್ತವ ಸಂಗತಿಯೇನು?

ದುಬೈನಿಂದ ಕ್ಯಾಲಿಕಟ್ ಏರ್ ಪೋರ್ಟಿಗೆ ಬಂದ ಭಟ್ಕಳ ಮೂಲದ ವ್ಯಕ್ತಿಗಳು ಕ್ಯಾಲಿಕಟ್ ನಿಂದ ಮಂಗಳೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ಭಟ್ಕಳಕ್ಕೆ ಕಾರಿನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದರು. ಈ ಸಂಬಂಧ ಖಚಿತ ಮಾಹಿತಿ ಪಡೆದ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಸಿಪಿಐ ಗೋಪಿಕೃಷ್ಣ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.

English summary
Kundapur police have arrested 11 persons who were smuggling gold from Kerala's Calicut airport to Bhatkal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X