ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಜಿಲ್ಲಾಧಿಕಾರಿ ಜೊತೆ ಮೋದಿ ಸಂವಾದ; ಮುಖ್ಯಾಂಶಗಳು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 18; ಕೋವಿಡ್ ಸೋಂಕಿನ 2ನೇ ಅಲೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಂಕು ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿದರು. ಕರ್ನಾಟಕದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೂ ಮೋದಿ ಮಾತುಕತೆ ನಡೆಸಿದರು.

ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಪ್ರಧಾನಿ ನರೇಂದ್ರ ಮೋದಿ ಜೊತೆ ಸಂವಾದ ನಡೆಸಿದರು. ಉಡುಪಿ ಜಿಲ್ಲೆಯಲ್ಲಿ ಮೇ 17ರ ಮಾಹಿತಿಯಂತೆ 897 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 6859.

ಉಡುಪಿ: ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯಿಂದ ವೃದ್ಧರಿಗೆ ಕೊರೊನಾ ಹೆಲ್ಪ್ ಲೈನ್ ಉಡುಪಿ: ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯಿಂದ ವೃದ್ಧರಿಗೆ ಕೊರೊನಾ ಹೆಲ್ಪ್ ಲೈನ್

ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ ಮೋದಿ, "ಜಿಲ್ಲಾಧಿಕಾರಿ ಕಮಾಂಡರ್ ಥರ ಕೆಲಸ ಮಾಡಬೇಕು. ಎಲ್ಲಾ ಮೇಲ್ವಿಚಾರಣೆ ಅವರ ಜವಾಬ್ದಾರಿಯಾಗಿರುತ್ತದೆ" ಎಂದು ಮೋದಿ ಹೇಳಿದರು.

ಉಡುಪಿ; ಕೇರಳದಿಂದ ಬರುವವರಿಗೆ ಕೋವಿಡ್ ವರದಿ ಕಡ್ಡಾಯ ಉಡುಪಿ; ಕೇರಳದಿಂದ ಬರುವವರಿಗೆ ಕೋವಿಡ್ ವರದಿ ಕಡ್ಡಾಯ

PM Modi Interaction With Udupi Deputy Commissioner

ಸಭೆಯಲ್ಲಿ ಚರ್ಚೆಯಾದ ಅಂಶಗಳು

* ಜನಪ್ರತಿನಿಧಿಗಳ ಕಮಿಟಿ ಮಾಡಿ. ಗ್ರಾಮ ಮಟ್ಟದಿಂದ ಟಾಸ್ಕ್ ಫೋರ್ಸ್ ಮಾಡಿ. ಕೊರೊನಾ ಜಾಗೃತಿ, ಲಸಿಕೆ ಸೇರಿದಂತೆ ಸಮಗ್ರ ಮಾಹಿತಿ ತಲುಪಬೇಕು. ಅಗತ್ಯ ಬಿದ್ದಲ್ಲಿ ಕಾರ್ ಆಂಬ್ಯುಲೆನ್ಸ್‌ ಸಿದ್ಧಪಡಿಸಿಟ್ಟುಕೊಳ್ಳಿ. ಆಂಬುಲೆನ್ಸ್ ಕೊರತೆ ಆಗದಂತೆ ನೋಡಿಕೊಳ್ಳಿ.

 ಕೊರೊನಾ ನಿರ್ವಹಣೆ; ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿ ಸಲಹೆಗಳಿವು... ಕೊರೊನಾ ನಿರ್ವಹಣೆ; ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿ ಸಲಹೆಗಳಿವು...

* ಕೊರೊನಾ ಮುಕ್ತ ಗ್ರಾಮ ನಿಮ್ಮ ಮೊದಲ ಆದ್ಯತೆಯಾಗಲಿ. ಪಂಚಾಯತ್ ಸದಸ್ಯನಿಂದ ಸಂಸದರ ತನಕ ಎಲ್ಲರೂ ಕೊರೊನಾ ವಿರುದ್ಧ ಹೋರಾಟಕ್ಕೆ ಶ್ರಮಿಸಬೇಕು.

* ಕಂಟೈನ್ಮೆಂಟ್ ಝೋನ್ ಹೆಚ್ಚು ಹೆಚ್ಚು ಮಾಡಿ. ಹೆಚ್ಚು ಪರೀಕ್ಷೆಗಳನ್ನು ಮಾಡಿ. ಸೋಂಕು ಹರಡುವಿಕೆ ತಡೆಯಿರಿ. ಫ್ರಂಟ್ ಲೈನ್, ಡಾಕ್ಟರ್, ಪೋಲೀಸ್, ಮಾಧ್ಯಮದ ಜೊತೆ ಚೆನ್ನಾಗಿ ಸಮನ್ವಯ ಮಾಡಿ. ಅವರು ಯಾವುದೇ ಕಾರಣಕ್ಕೆ ಧೈರ್ಯ ಕುಂದದಂತೆ ನೋಡಿಕೊಳ್ಳಿ.

* ನಿಮ್ಮ ಜಿಲ್ಲೆಯ ಪ್ರತಿ ಜೀವ ಮುಖ್ಯ. ಎಲ್ಲಾ ವಿಭಾಗದಲ್ಲೂ ವಿಫಲವಾದಂತೆ ಕಾರ್ಯನಿರ್ವಹಿಸಬೇಕು. ಅದರ ಜವಾಬ್ದಾರಿ ನಿಮ್ಮ ಮೇಲಿದೆ. ಆಕ್ಸಿಜನ್ ಬಳಕೆ ಸರಿಯಾಗಿ ಮಾಡಿ. ಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡೋದು ನಿಮ್ಮ ಜವಾಬ್ದಾರಿ.

Recommended Video

ಒಂದೇ ಒಂದು ಕ್ಷಣದಲ್ಲಿ ಬಚಾವಾದ ಮಹಿಳೆ | Oneindia Kannada

* ಕೋವಿಡ್ ಹತೋಟಿಗೆ ಬರುವವರೆಗೆ ವಿಶ್ರಾಂತಿ ಮಾಡಬೇಡಿ. ಕೊರೊನಾ ಜೊತೆ ಯುದ್ಧ ಘೋಷಣೆಯಾಗಿದೆ. ಇದು ವಿಶ್ರಾಂತಿ ಕಾಲ ಅಲ್ಲ. ಜನರ ಆರೋಗ್ಯ ಮುಖ್ಯ, ಕಾಳಜಿಯಿಂದ ಕೆಲಸ ಮಾಡಿ. ವಿರಮಿಸದೆ ಜವಾಬ್ದಾರಿ ನಿರ್ವಹಿಸಿ.

English summary
Prime Minister Narendra Modi interaction with deputy commissioners of districts in Karnataka. Here are the points of the discussion with Udupi deputy commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X