ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ನಲ್ಲಿದ್ದ ಬಾಕ್ಸ್ ಗಳು ಪತ್ತೆ!

|
Google Oneindia Kannada News

ಉಡುಪಿ ಜನವರಿ 07: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ಮೀನುಗಾರರು ಹಾಗೂ ಅವರು ತೆರಳಿದ್ದ ಬೋಟ್ ಕಣ್ಮರೆ ಪ್ರಕರಣ ದಿನೇ ದಿನೆ ಜಟಿಲಗೊಳ್ಳುತ್ತಿದೆ. ದಿನ ಕಳೆದಂತೆ ಮೀನುಗಾರರಲ್ಲಿ ಆತಂಕ ಹೆಚ್ಚಿಸುತ್ತಿದೆ. ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಆದರೆ 24 ದಿನವಾದರೂ ಮೀನುಗಾರರ ಅಥವಾ ಬೋಟ್ ನ ಯಾವುದೇ ಸುಳಿವು ಸಿಕ್ಕಿಲ್ಲ.

ನಾಪತ್ತೆಯಾದ ಮೀನುಗಾರರು ಸುರಕ್ಷಿತವಾಗಿ ಬರುತ್ತಾರೆ ಎಂಬ ನಂಬಿಕೆಯಿದೆ: ಜಯಮಾಲನಾಪತ್ತೆಯಾದ ಮೀನುಗಾರರು ಸುರಕ್ಷಿತವಾಗಿ ಬರುತ್ತಾರೆ ಎಂಬ ನಂಬಿಕೆಯಿದೆ: ಜಯಮಾಲ

ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆಹಚ್ಚುವಂತೆ ಒತ್ತಾಯಿಸಿ ನಿನ್ನೆ ಭಾನುವಾರ ಜ.06 ರಂದು ಉಡುಪಿಯಲ್ಲಿ ಕರಾವಳಿ ಕರ್ನಾಟಕದ ಮೀನುಗಾರರು ತೀವ್ರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಮಧ್ಯೆ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ನಲ್ಲಿದ್ದ ಬಾಕ್ಸುಗಳು ಎಂದು ಹೇಳಲಾಗುವ ಪ್ಲಾಸ್ಟಿಕ್ ಬಾಕ್ಸ್ ಗಳು ಅರಬ್ಬೀ ಸಮುದ್ರದಲ್ಲಿ ಪತ್ತೆಯಾಗಿವೆ. ಇದು ಮೀನುಗಾರರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

 ನಾಪತ್ತೆಯಾದ 7 ಮೀನುಗಾರರ ಪತ್ತೆಗೆ ಒತ್ತಾಯಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಾಪತ್ತೆಯಾದ 7 ಮೀನುಗಾರರ ಪತ್ತೆಗೆ ಒತ್ತಾಯಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ

ಎಸ್.ಟಿ ಎಂದು ಬರೆದಿರುವ ಈ ಬಾಕ್ಸ್ ಗಳು ಸುವರ್ಣ ತ್ರಿಭುಜ ಬೋಟ್ ನದ್ದೇ ಎಂಬುದು ಖಚಿತವಾಗಿಲ್ಲ. ಆದರೆ ಈ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

Plastic box of missing boat found?

ಈ ಕುರಿತು ಮಾತನಾಡಿರುವ ಸಂಸದೆ ಶೋಭಾ ಕರಂದ್ಲಾಜೆ, ಬೋಟ್ ನಲ್ಲಿದ್ದ ಮೀನು ತಂಬಿಸಿಡುವ ಪ್ಲಾಸ್ಟಿಕ್ ಬಾಕ್ಸ್ ಗಳು ಮಹಾರಾಷ್ಟ್ರ ಗಡಿಯಲ್ಲಿ ಪತ್ತೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಇದು ಸುವರ್ಣ ತ್ರಿಭುಜಕ್ಕೆ ಸೇರಿದ ಬಾಕ್ಸ್ ಗಳು ಎಂದು ನಾಪತ್ತೆಯಾದ ಮೀನುಗಾರನ ಸಹೋದರ ಹೇಳಿದ್ದಾಗಿ ಸಂಸದರು ಹೇಳಿದ್ದಾರೆ.

 ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು? ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?

ಅಷ್ಟೇ ಅಲ್ಲ, ನಾಪತ್ತೆಯಾದ ಬೋಟ್ ಶೋಧಕ್ಕೆ ಕೇಂದ್ರ ಸರಕಾರ ಸಾಕಷ್ಟು ಪ್ರಯತ್ನ ನಡೆಸಿದೆ. ಅವರೆಲ್ಲ ಶೀಘ್ರ ವಾಪಾಸ್ ಬರುವಂತಾಗಲಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

English summary
2 plastic box found in Arabian sea on January 06. These two plastic box belongs to missing Boat Suvarna Thribuja's. But it is not confirmed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X