ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಸ್ವಾರ್ಥ ಸೇವಕ ರವಿ ಕಟಪಾಡಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಜನಾಂದೋಲನ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 1: ರವಿ ಕಟಪಾಡಿ. ಬಹುಶಃ ಈ ಹೆಸರು ಕೇಳಿರದ ಕರಾವಳಿಗರು ತುಂಬಾ ಕಡಿಮೆ. ಪ್ರತೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಅನ್ನಾಹಾರ, ನೀರು ಬಿಟ್ಟು ವಿಶೇಷ ವೇಷ ಹಾಕಿ, ಅದರಲ್ಲಿ ಬರುವಂತಹ ಹಣವನ್ನು ಬಡವರಿಗೆ ಕೊಡುವುದು ರವಿ ಕಟಪಾಡಿಯವರ ವಿಶೇಷ ಗುಣ.

ಈವರಗೆ ಹೀಗೆ ವೇಷ ಹಾಕಿ ಸುಮಾರು 72 ಲಕ್ಷ ರೂಪಾಯಿ ಸಂಗ್ರಹಿಸಿ ರವಿ ಕಟಪಾಡಿ ಬಡವರಿಗೆ ನೆರವಾಗಿದ್ದಾರೆ. ರವಿ ಕಟಪಾಡಿ ಹೃದಯವಂತಿಕೆಗೆ ಕರಾವಳಿಯ ಜನರೆಲ್ಲಾ ತಲೆಬಾಗಿದ್ದು, ಇದೀಗ ರವಿಯವರಿಗೆ ಕೇಂದ್ರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕೆಂಬ ಆಂದೋಲನ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ.

ಪ್ರತಿವರ್ಷ ಅಷ್ಟಮಿ ಬಂದಾಗ ಉಡುಪಿಯಲ್ಲಿ ರವಿ ಕಟಪಾಡಿ ಯಾವ ವೇಷ ಹಾಕ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇರುತ್ತದೆ. ಏಕೆಂದರೆ ರವಿ ಕಟಪಾಡಿ ಪ್ರತಿವರ್ಷ ಧರಿಸುವ ವೇಷ ಬಹಳ ವಿಭಿನ್ನ, ವಿಭಿನ್ನ ಅಷ್ಟೇ ಅಲ್ಲ ವಿಶೇಷ ಆಕರ್ಷಕ. ಬಡ ರೋಗಿಗಳಿಗೆ ಸಹಾಯ ಮಾಡಬೇಕು ಎನ್ನುವ ಏಕ ಮಾತ್ರ ಗುರಿ ಹೊಂದಿರುವ ರವಿ ಇದಕ್ಕಾಗಿ ಅನ್ನಾಹಾರ ಬಿಟ್ಟು ಶ್ರಮ ವಹಿಸುತ್ತಾರೆ.

 ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ರವಿ

ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ರವಿ

ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ಆಗಿರುವ ರವಿಯವರು, ಕಳೆದ ಆರು ವರ್ಷಗಳಿಂದ ಅಷ್ಟಮಿ ಮತ್ತು ವಿಟ್ಲಪಿಂಡಿ ದಿನದಂದು ವೇಷ ಧರಿಸುತ್ತಾರೆ. ಊರೂರು ತಿರುಗಿ ಲಕ್ಷಾಂತರ ದೇಣಿಗೆ ಸಂಗ್ರಹಿಸಿದ್ದಾರೆ. ನಿಮಗೆ ನೆನಪಿರಲಿ, ಇವರೊಬ್ಬ ಸಾಮಾನ್ಯ ಕೂಲಿ ಕಾರ್ಮಿಕ. ಕಳೆದ ಏಳು ವರ್ಷಗಳಿಂದ ವಿವಿಧ ವೇಷ ಹಾಕಿ ಸುಮಾರು 72 ಲಕ್ಷ ರೂಪಾಯಿ ಸಂಗ್ರಹಿಸಿದ ಎಲ್ಲ ಹಣವನ್ನು ಬಡ ಅನಾರೋಗ್ಯ ಪೀಡಿತ 33 ಮಕ್ಕಳಿಗೆ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

 ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ

ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ

ಕೊರೊನಾ ಕಾರಣದಿಂದ ಅಷ್ಟಮಿ ವೇಷಕ್ಕೆ ಅವಕಾಶ ಇರಲಿಲ್ಲ, ಆದರೂ ವಿಭಿನ್ನ ಸಮಾಜ ಸೇವಕ ರವಿಯವರಿಗೆ ವಿಶೇಷ ಅವಕಾಶ ನೀಡಲಾಗಿತ್ತು. ಅವಕಾಶ ಬಳಸಿಕೊಂಡು ರವಿ, ಈ ಬಾರಿ ಹಾಲಿವುಡ್ ಸಿನಿಮಾದ ಫ್ಯಾಂಟಸಿ ವೇಷ ಡಾರ್ಕ್ ಅಲೈಟ್ ಆಗಿ ಎರಡು ದಿನಗಳ ಕಾಲ ರವಿ ಉಡುಪಿಯಲ್ಲಿ ಓಡಾಡಿ ಲಕ್ಷಾಂತರ ಹಣ ಸಂಗ್ರಹಿಸಿದ್ದಾರೆ. ಇದನ್ನೆಲ್ಲ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಸಂಗ್ರಹವಾಗುವ ಒಂದೊಂದು ರೂಪಾಯಿ ಕಷ್ಟದಲ್ಲಿರುವ ಕುಟುಂಬಗಳ ಪಾಲಾಗಲಿದೆ. ಹೀಗಾಗಿ ರವಿ ಅಂದರೆ ಉಡುಪಿ ಜನಕ್ಕೆ ವಿಶೇಷ ಪ್ರೀತಿಯಾಗಿದೆ.

 ಕೌನ್ ಬನೇಗಾ ಕರೋಡ್ ಪತಿಯಲ್ಲಿ ರವಿಗೆ ಅವಕಾಶ

ಕೌನ್ ಬನೇಗಾ ಕರೋಡ್ ಪತಿಯಲ್ಲಿ ರವಿಗೆ ಅವಕಾಶ

ಅಂದ ಹಾಗೆ ರವಿಯವರ ಮಾನವೀಯ ಕಾಳಜಿ ಗಮನಿಸಿ, ಬಾಲಿವುಡ್ ತಾರೆ ಅಮಿತಾಬ್ ಬಚ್ಚನ್ ನಡೆಸಿ ಕೊಡುವ ಕೌನ್ ಬನೇಗಾ ಕರೋಡ್ ಪತಿಯಲ್ಲಿ ರವಿ ಕಟಪಾಡಿಯವರಿಗೆ ಅವಕಾಶ ನೀಡಿದ್ದರು. ಅದರಲ್ಲಿ ಬಂದ ಎಂಟು ಲಕ್ಷ ರೂಪಾಯಿಯನ್ನು ಪೂರ್ತಿಯಾಗಿ ಕಷ್ಟದಲ್ಲಿರುವವರಿಗೆ ಕೊಟ್ಟು ರವಿ ಉದಾರತೆ ಮರೆದಿದ್ದರು.
ರವಿಯವರು ಈ ವೇಷ ಧರಿಸಲು ಹಲವು ದಿನಗಳ ತಯಾರಿ ಮಾಡುತ್ತಾರೆ. ವೇಷ ಹಾಕಿದ ಕ್ಷಣದಿಂದ 50 ಗಂಟೆಗಳ ಕಾಲ ರವಿಯವರು ನೀರು, ಆಹಾರ ಯಾವುದನ್ನೂ ಸೇವಿಸುವ ಹಾಗಿಲ್ಲ. ಇದರ ನಡುವೆಯೂ ಊರೂರು ತಿರುಗಿ ರವಿ, ಹಣ ಸಂಗ್ರಹ ಮಾಡಿ ಬಡವರಿಗೆ ನೆರವಾಗುತ್ತಾರೆ.

Recommended Video

ಶ್ರೀಲಂಕಾದಲ್ಲಿ ಆಹಾರಕ್ಕೆ ಹಾಹಾಕಾರ: ಆರ್ಥಿಕ ಬಿಕ್ಕಟ್ಟಿನಿಂದ ತುರ್ತುಪರಿಸ್ಥಿತಿ ಘೋಷಣೆ | Oneindia Kannada
 ಒಂದು ಪೈಸೆಯನ್ನೂ ಸ್ವಂತಕ್ಕೆ ಉಪಯೋಗಿಸಿಕೊಂಡಿಲ್ಲ

ಒಂದು ಪೈಸೆಯನ್ನೂ ಸ್ವಂತಕ್ಕೆ ಉಪಯೋಗಿಸಿಕೊಂಡಿಲ್ಲ

ರವಿ ಕಟಪಾಡಿ ಈವರೆಗೆ ಸುಮಾರು 72 ಲಕ್ಷ ರೂಪಾಯಿ ಸಂಗ್ರಹ ಮಾಡಿದರೂ, ಅದರಲ್ಲಿ ಒಂದು ಪೈಸೆಯನ್ನೂ ಸ್ವಂತಕ್ಕೆ ಉಪಯೋಗಿಸಿಕೊಂಡಿಲ್ಲ. ಈಗಲೂ ಕೂಲಿ ಕೆಲಸಕ್ಕೆ ಹೋಗುವ ರವಿ ಹಳೆಯ ಮನೆಯಲ್ಲೇ ವಾಸವಿದ್ದಾರೆ. ವ್ಯಕ್ತಿಗೆ ಹಣದ ಶ್ರೀಮಂತಿಕೆಗಿಂತ, ಹೃದಯ ಶ್ರೀಮಂತಿಕೆ ಮುಖ್ಯ ಅನ್ನುವುದನ್ನು ರವಿ ನಿರೂಪಿಸಿದ್ದಾರೆ.
ರವಿಯವರ ನಿಸ್ವಾರ್ಥ ಸೇವೆಗಾಗಿ ಕೇಂದ್ರ ಸರ್ಕಾರ ರವಿ ಸೇವೆ ಗುರುತಿಸಿ ಪದ್ಮಶ್ರೀ ಪುರಸ್ಕಾರ ಮಾಡಬೇಕು ಅನ್ನೋದು ಜನರ ಅಭಿಪ್ರಾಯವಾಗಿದೆ. ಕೇಂದ್ರ ಸರ್ಕಾರದ ಕಳೆದ ಏಳೂ ವರ್ಷಗಳಿಂದ ಪದ್ಮಶ್ರೀ ಪ್ರಶಸ್ತಿಯನ್ನು ಅರ್ಹ ವ್ಯಕ್ತಿಗಳಿಗೇ ನೀಡುತ್ತಿದ್ದು, ಈ ಬಾರಿ ಕೇಂದ್ರ ಸರ್ಕಾರದ ಮನ್ನಣೆ ರವಿ ಕಟಪಾಡಿ ಪಾಲಾಗಾಲಿ ಅನ್ನುವುದು ಕರಾವಳಿಗರ ಆಶಯವಾಗಿದೆ.

English summary
The campaign to honor the Selfless servant Ravi Katapadi with the Padma Shri award has started on the social networking site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X