ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಯಂ ಕಟ್ಟಳೆಯಿಂದ ಹಬ್ಬ ಆಚರಿಸಲು ಪೇಜಾವರ ಶ್ರೀಗಳ ಸಲಹೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 16: ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಕೋವಿಡ್ 19 ನಿರ್ಬಂಧಗಳನ್ನು ಒಂದಷ್ಟು ಸಡಿಲಿಸಿ ಸರಕಾರ ಪುಣ್ಯಕ್ಷೇತ್ರಗಳ ದರ್ಶನ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ. ಹಾಗಂತ ನಾವು ಮೈಮರೆಯುವಂತಿಲ್ಲ. ಸಾಮಾಜಿಕ ಅಂತರ , ಮಾಸ್ಕ್ ಧರಿಸುವುದು ಮೊದಲಾದ ಸರಕಾರದ ಎಲ್ಲ ಮಾರ್ಗಸೂಚಿಗಳನ್ನು ಅವಶ್ಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು.

ಕೊರೊನಾದಿಂದ ದೇಶವನ್ನು ಮುಕ್ತಗೊಳಿಸಲು ಕೆಲವು ಸ್ವಯಂ ನಿರ್ಬಂಧಗಳನ್ನು ಅನುಸರಿಸಿಕೊಂಡು ಕ್ಷೇತ್ರ ದರ್ಶನ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಿ ಕೊರೊನಾ ಮುಕ್ತಿಗಾಗಿ, ಲೋಕದ ಒಳಿತಿಗಾಗಿ ವಿಶೇಷವಾಗಿ ಪ್ರಾರ್ಥಿಸಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣ ಕೇವಲ‌ ಸರ್ಕಾರದ ಹೊಣೆಯಲ್ಲ. ಎಲ್ಲರ ಕರ್ತವ್ಯ ಎಂದು ತಿಳಿಸಿದರು.

Udupi: Pejawara Shree Advice To People On Festival Celebration

 ಉಡುಪಿಯಲ್ಲಿ ಬಹೂಪಯೋಗಿ ಬಿಲ್ವಗಿಡ ವಿತರಣೆ ಅಭಿಯಾನ ಉಡುಪಿಯಲ್ಲಿ ಬಹೂಪಯೋಗಿ ಬಿಲ್ವಗಿಡ ವಿತರಣೆ ಅಭಿಯಾನ

Recommended Video

ಫ್ರಾನ್ಸಿನಲ್ಲಿ corona ಅಟ್ಟಹಾಸ | Curfew in France | Oneindia Kannada

ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಂದೇಶ ನೀಡಿರುವ ಶ್ರೀಗಳು, ಸ್ವಯಂ ಕಟ್ಟಳೆ ಹಾಕಿಕೊಂಡು, ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಂಡು ಹಬ್ಬಗಳನ್ನು ಆಚರಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡೋಣ ಎಂದು ಭಕ್ತರಿಗೆ ಸಂದೇಶ ನೀಡಿದ್ದಾರೆ.

English summary
Government has allowed to carry out religious rituals inbetween coronavirus with some restrictions. But we should not take it easy. we should be in our safety adviced pejawara shree
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X