ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಬಹೂಪಯೋಗಿ ಬಿಲ್ವಗಿಡ ವಿತರಣೆ ಅಭಿಯಾನ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 4: ಶಿವ ಪೂಜೆಗೆ ಬಿಲ್ವಪತ್ರೆ ಮುಖ್ಯ ಎಂಬುದು ನಮಗೆಲ್ಲ ತಿಳಿದಿರುವ ವಿಷಯ. ಬಿಲ್ವಪತ್ರೆ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಹೋಮ-ಹವನಗಳಿಗೂ ಬಿಲ್ವ ಗಿಡದ ಕಡ್ಡಿಗಳು ಬಳಕೆಯಾಗುತ್ತವೆ.

Recommended Video

BBMP Election ಮುಂದೂಡಲು ಪಾಲಿಕೆ ಪಾಲಿಟಿಕ್ಸ್!! | Oneindia Kannada

ಬಿಲ್ವಪತ್ರೆ ಕಾಯಿಯ ಸೇವನೆಯಿಂದ ಮಧುಮೇಹ ಕಡಿಮೆಯಾಗುತ್ತದೆ. ಜೊತೆಗೆ ಇದರಿಂದ ಹಲವು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಆಯುರ್ವೇದ ಹೇಳುತ್ತದೆ.

ಉಡುಪಿ ಮಲ್ಲಿಗೆಗೆ ಕುದುರಿದ ಬೇಡಿಕೆ: ಕೃಷಿಕರ ಮೊಗದಲ್ಲಿ ಮಂದಹಾಸಉಡುಪಿ ಮಲ್ಲಿಗೆಗೆ ಕುದುರಿದ ಬೇಡಿಕೆ: ಕೃಷಿಕರ ಮೊಗದಲ್ಲಿ ಮಂದಹಾಸ

ಉಡುಪಿಯ ಶ್ರೀಕೃಷ್ಣ ಮಠದಲ್ಲೂ ಇದರ ಬಳಕೆ ಹೇರಳವಾಗಿದ್ದು, ಉಡುಪಿಯಲ್ಲಿ ಇದೇ ತಿಂಗಳ ಹತ್ತು ಮತ್ತು ಹನ್ನೊಂದನೇ ತಾರೀಕಿಗೆ ನಡೆಯುವ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವದ ಸಂದರ್ಭ ಭಕ್ತರಿಗೆ ಬಿಲ್ವಪತ್ರೆಯ ಗಿಡಗಳನ್ನು ವಿತರಿಸಲಾಗುತ್ತಿದೆ.

Pejawara Mutt Planning To Distribute Bilwa Plants To Devotees On the Occasion Of Krishna Janmashtami

ಪೇಜಾವರ ಮಠದ ವತಿಯಿಂದ ಬಿಲ್ವಗಿಡ ವಿತರಿಸುವ ಪ್ರಕ್ರಿಯೆ ಸೆಪ್ಟೆಂಬರ್ ೬ರಿಂದ ಆರಂಭವಾಗಿದೆ. ಉಡುಪಿ ಸಾಮಾಜಿಕ ಅರಣ್ಯ ವಿಭಾಗ 2019-20 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಲ್ವಪತ್ರೆ ಗಿಡ ವಿತರಿಸುವ ಅಭಿಯಾನವನ್ನು ಆರಂಭ ಮಾಡಿತ್ತು. ಸುಮಾರು 2000 ಬಿಲ್ವಪತ್ರೆ ಸಸಿ ಬೆಳೆಸಲಾಗಿತ್ತು.

Pejawara Mutt Planning To Distribute Bilwa Plants To Devotees On the Occasion Of Krishna Janmashtami

ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಉಡುಪಿ ನಗರವಾಸಿಗಳಿಗೆ, ಸುತ್ತಮುತ್ತಲ ಗ್ರಾಮದ ಜನರಿಗೆ ವಿತರಣೆ ಆಗಲಿದೆ. ಅತಿಸಾರ, ಜ್ವರ ಮೂತ್ರ ಸಂಬಂಧಿತ ಕಾಯಿಲೆಗಳಿಗೂ ಕೂಡ ಬಿಲ್ವಪತ್ರೆ ರಾಮಬಾಣವಾಗಿದೆ.

Pejawara Mutt Planning To Distribute Bilwa Plants To Devotees On the Occasion Of Krishna Janmashtami

ಚರ್ಮದ ಸಮಸ್ಯೆಗಳು ಕೂಡ ತಲೆಗೆ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಧಾರ್ಮಿಕವಾಗಿ ಆಯುರ್ವೇದ ಔಷಧ ಬಳಕೆಗಾಗಿ ಬಿಲ್ವ ಉಪಯೋಗ ಆಗಲಿದೆ ಎಂದು ಪೇಜಾವರ ಮಠದ ವಿದ್ವಾಂಸ ವಾಸುದೇವ್ ಪೆರಂಪಳ್ಳಿ ಹೇಳಿದ್ದಾರೆ.

English summary
The Bilwapatre Plants will be distributing to devotees During the Krishna Janmashtami and Vitlapindi festival, which will be held on the 10th and 11th Of September month In Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X