ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುರು ಹಾದಿಯಲ್ಲಿ ಶಿಷ್ಯರ ಹೆಜ್ಜೆ; ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ

|
Google Oneindia Kannada News

ಉಡುಪಿ, ಡಿಸೆಂಬರ್ 21: ಹಿಂದೂ ಸಮಾಜದಲ್ಲಿದ್ದ ಅಸೃಶ್ಯತೆಯನ್ನು ನಿವಾರಿಸಿ ಸಶಕ್ತ ಸುದೃಢಗೊಳಿಸುವ ನಿಮಿತ್ತ ದೇಶದ ಹಲವೆಡೆ ದಲಿತರ ಕೇರಿಗಳಿಗೆ ಭೇಟಿ ನೀಡಿ ಕ್ರಾಂತಿಕಾರ್ಯ ನಡೆಸಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಸಂಚಲನ ಮೂಡಿಸಿದ್ದರು.

ಇದೀಗ ಅವರ ಶಿಷ್ಯ ವಿಶ್ವಪ್ರಸನ್ನ ತೀರ್ಥರೂ ಗುರುವಿನ ದಾರಿಯಲ್ಲಿ ಹೆಜ್ಜೆ ಹಾಕುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಭಾನುವಾರ ಉಡುಪಿಯ ಕೊಡವೂರು ಗ್ರಾಮದ ಪಾಳೆಕಟ್ಟೆ ಎಂಬಲ್ಲಿ ದಲಿತರ ಕೇರಿಗೆ ಮೊದಲ ಬಾರಿಗೆ ಭೇಟಿ ನೀಡಿ ಹಿಂದೂ ಸಮಾಜ ಸಂಘಟನೆಗೆ ತಾವೂ ಸಿದ್ಧ ಎಂದಿದ್ದಾರೆ.

ಬ್ರಿಟನ್ನಿನಿಂದ 15ನೇ ಶತಮಾನದ ರಾಮ, ಸೀತಾ ಮತ್ತು ಲಕ್ಷ್ಮಣ ರಿಟರ್ನ್ ಬ್ರಿಟನ್ನಿನಿಂದ 15ನೇ ಶತಮಾನದ ರಾಮ, ಸೀತಾ ಮತ್ತು ಲಕ್ಷ್ಮಣ ರಿಟರ್ನ್

ಅಯೋಧ್ಯೆ ರಾಮ ಮಂದಿರ ನಿರ್ಮಾಣವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಭಾರತದಲ್ಲಿ ಹಿಂದೂ ಸಮಾಜವನ್ನು ಸಂಘಟನಾತ್ಮಕವಾಗಿ ಸಶಕ್ತ ಮತ್ತು ಸುದೃಢಗೊಳಿಸಬೇಕಾಗಿದೆ. ಈ ಆಶಯದೊಂದಿಗೆ ಸುಮಾರು 120 ಮನೆಗಳನ್ನು ಹೊಂದಿರುವ ಕೇರಿಗೆ ಭೇಟಿ ನೀಡಿದರು. ದಲಿತ ಬಂಧುಗಳಲ್ಲಿ ಹಿಂದವಃ ಸೋದರಾ ಸರ್ವೇ ಎಂಬ ಗುರು ವಿಶ್ವೇಶತೀರ್ಥ ಸಂದೇಶದಂತೆ ವಿಶ್ವಾಸ ತುಂಬಿದರು.

 ದಲಿತ ಕೇರಿಗೆ ಗ್ರಾಮ ದೇವತೆ ಮೆರವಣಿಗೆ ಆಹ್ವಾನಿಸಿದ್ದಕ್ಕೆ 60 ಸಾವಿರ ದಂಡ ದಲಿತ ಕೇರಿಗೆ ಗ್ರಾಮ ದೇವತೆ ಮೆರವಣಿಗೆ ಆಹ್ವಾನಿಸಿದ್ದಕ್ಕೆ 60 ಸಾವಿರ ದಂಡ

ಸ್ವಾಮೀಜಿಗಳು ಆಗಮಿಸುವ ಬಗ್ಗೆ ಸ್ಥಳೀಯ ನಗರಸಭಾ ಸದಸ್ಯ ಮತ್ತು ಸಂಘ ಪರಿವಾರದ ಸ್ವಯಂ ಸೇವಕ ವಿಜಯ ಕೊಡವೂರು ಮತ್ತು ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಎರಡು ದಿನಗಳ ಮೊದಲೇ ಕೇರಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದರು.

ಚಿಕ್ಕಮಗಳೂರು: ದಲಿತ ಯುವಕರ ಮೇಲೆ ಪಿಎಸ್ಐ ದರ್ಪ ಖಂಡಿಸಿ ಪ್ರತಿಭಟನೆಚಿಕ್ಕಮಗಳೂರು: ದಲಿತ ಯುವಕರ ಮೇಲೆ ಪಿಎಸ್ಐ ದರ್ಪ ಖಂಡಿಸಿ ಪ್ರತಿಭಟನೆ

ಕುಶಲೋಪರಿ ನಡೆಸಿದ ಸ್ವಾಮೀಜಿ

ಕುಶಲೋಪರಿ ನಡೆಸಿದ ಸ್ವಾಮೀಜಿ

ಉತ್ಸಾಹ ಮತ್ತು ಸಂತೋಷದಿಂದ ನಿವಾಸಿಗಳು ರಸ್ತೆಗಳಲ್ಲಿ ತಳಿರು, ತೋರಣ, ರಂಗೋಲಿ ಹಾಕಿ ಸಿಂಗರಿಸಿದ್ದರು. ಸಾಮೂಹಿಕ ಭಜನೆಯೊಂದಿಗೆ ಶ್ರೀಗಳನ್ನು ಬರಮಾಡಿಕೊಂಡರು. ಬಳಿಕ ಅಲ್ಲಿನ ಮೂರು ಮನೆಗಳಿಗೆ ಭೇಟಿ ನೀಡಿ ರಾಮದೀಪಗಳನ್ನು ಬೆಳಗಿಸಿ ಮನೆ ಮಂದಿಯೊಂದಿಗೆ ಕುಶಲೋಪರಿ ನಡೆಸಿದ ಸ್ವಾಮೀಜಿಗಳು ಶ್ರೀರಾಮ ಜಯರಾಮ ಜಯಜಯರಾಮ ಮಂತ್ರದೀಕ್ಷೆ ಕೊಟ್ಟು ನಿತ್ಯ ಶುದ್ಧ ಮನಸ್ಸಿನಿಂದ ಈ ಮಂತ್ರ ಜಪಿಸುವಂತೆ ತಿಳಿಸಿದರು.

ರಾಮದೀಪ ಬೆಳಗಿಸಲಾಯಿತು

ರಾಮದೀಪ ಬೆಳಗಿಸಲಾಯಿತು

ಮೂರು ಮನೆಯವರು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ಫಲಪುಷ್ಟ ಸಹಿತ ಭಕ್ತಿ ಗೌರವ ಅರ್ಪಿಸಿದರು.‌ ಮಠದ ವತಿಯಿಂದ ಎಲ್ಲಾ ಮನೆಗಳಿಗೆ ದೀಪ ಒದಗಿಸಿ ರಾಮದೀಪ ಬೆಳಗಿಸಲಾಯಿತು. ಅಲ್ಲಿಂದ ಬಡಾವಣೆಯ ಶ್ರೀ ಮೂಕಾಂಬಿಕಾ ಭಜನಾ ಮಂದಿರಕ್ಕೆ ಬಂದು ಶ್ರೀ ದೇವಿಯ ಮುಂಭಾಗದಲ್ಲಿ ದೀಪ ಹಚ್ಚಿ ಮಂಗಳಾರತಿ ಬೆಳಗಲಾಯಿತು.‌

ಸ್ವಾಮೀಜಿಗಳ ಸಂದೇಶ

ಸ್ವಾಮೀಜಿಗಳ ಸಂದೇಶ

ಸಮಸ್ತ ನಿವಾಸಿಗಳಿಗೆ ಸಂದೇಶ ನೀಡಿದ ವಿಶ್ವಪ್ರಸನ್ನ ಸ್ವಾಮೀಜಿ, "ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸಮಸ್ತ ಹಿಂದೂ ಸಮಾಜದ ಸಹಕಾರ ಸಹಭಾಗಿತ್ವ ಪಡೆಯಲು ಎಲ್ಲ ಸ್ತರಗಳ ಹಿಂದೂ ಬಂಧುಗಳನ್ನು ಭೇಟಿಯಾಗುತ್ತಿದ್ದೇವೆ. ಅದರಂತೆ ಇಲ್ಲಿಗೆ ಆಗಮಿಸಿದ್ದೇವೆ. ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆದು ಇಡೀ ದೇಶಕ್ಕೆ ರಾಮನ ಕೃಪೆಯಾಗಿ ಶಾಂತಿ, ಸುಭಿಕ್ಷೆ, ಸಮೃದ್ಧಿ ನೆಲೆಸಲು ನಾವೆಲ್ಲ ಪ್ರತಿನಿತ್ಯ ಮನೆಮನೆಗಳಲ್ಲಿ ರಾಮನಿಗಾಗಿ ದೀಪ ಬೆಳಗಿ ರಾಮಂತ್ರ ಜಪ, ರಾಮ ಭಜನೆ ನಡೆಸಬೇಕು" ಎಂದು ಕರೆ ನೀಡಿದರು.

Recommended Video

ಭಿಕ್ಷುಕನಿಗೆ ಒಲಿದ ಅದೃಷ್ಟ !! | Oneindia Kannada
ಮಠವನ್ನು ಮುನ್ನಡೆಸುತ್ತಿದ್ದಾರೆ

ಮಠವನ್ನು ಮುನ್ನಡೆಸುತ್ತಿದ್ದಾರೆ

ವಿಜಯ್ ಕೊಡವೂರು ಮಾತನಾಡಿ, "ವಿಶ್ವೇಶ ತೀರ್ಥ ಶ್ರೀಗಳು ವಿಧಿವಶರಾಗಿ ವರ್ಷ ತುಂಬುವ ಮೊದಲು ಶ್ರೀ ಮಠದ ಎಲ್ಲಾ ಜವಾಬ್ದಾರಿಗಳನ್ನು ವಿಶ್ವಪ್ರಸನ್ನ ಶ್ರೀಗಳು ವಹಿಸಿಕೊಂಡು, ಹಿರಿಯ ಗುರುಗಳ ಸಾಮಾಜಿಕ ಕಾರ್ಯಗಳನ್ನು ಮುಂದುವರೆಸುತ್ತಿದ್ದಾರೆ" ಎಂದರು.

English summary
Udupi Pejawar mutt Vishwaprasanna Tirtha swamiji visited dalit colony at Kodavuru village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X