ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ನೆರೆ: 10 ಲಕ್ಷ ರೂ. ದೇಣಿಗೆ ನೀಡಿದ ಪೇಜಾವರ ಶ್ರೀಗಳು

By ಉಡುಪಿ ಪ್ರತಿನಿಧಿ
|
Google Oneindia Kannada News

Recommended Video

ಪೇಜಾವರ ಮಠದಿಂದ ನಿರಾಶ್ರಿತರಿಗೆ ಧನಸಹಾಯ | Oneindia Kannada

ಉಡುಪಿ, ಆಗಸ್ಟ್.23: ಮಹಾ ಮಳೆಯಿಂದ ತತ್ತರಿಸಿರುವ ಕೊಡಗು ಜಿಲ್ಲೆ ಹಾಗೂ ಸುಳ್ಯದಲ್ಲಿ ಜನರ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗಾಗಿ ಪೇಜಾವರ ಮಠದ ಟ್ರಸ್ಟ್ ವತಿಯಿಂದ ಶ್ರೀ ವಿಶ್ವೇಶತೀರ್ಥರು 10 ಲಕ್ಷ ರೂ.ಗಳ ದೇಣಿಗೆ ಘೋಷಿಸಿ ಮುಂದೆ ಇನ್ನಷ್ಟು ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಚಾರ್ತುಮಾಸ್ಯದಲ್ಲಿರುವ ಪೇಜಾವರ ಶ್ರೀಗಳು ಪ್ರತಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಕನ್ನಡ ನಾಡಿನ ಅತ್ಯಂತ ರಮಣೀಯ ಸ್ಥಳವಾದ ಕೊಡಗು ಮತ್ತು ಸುಳ್ಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಜನರು ಅನುಭವಿಸುತ್ತಿರುವ ನೋವು ಅವರ್ಣನೀಯ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಈ ಸಂದರ್ಭದಲ್ಲಿ ಅವರಿಗೆ ಸ್ಪಂದಿಸುವುದು ಅವಶ್ಯವಿದ್ದು, ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಮ್ಮ ಮಠದ ಟ್ರಸ್ಟ್ ನಿಂದ ಸದ್ಯಕ್ಕೆ ಹತ್ತು ಲಕ್ಷ ರೂ. ಗಳನ್ನು ಬಿಡುಗಡೆ ಮಾಡಿದ್ದೇನೆ.

Pejawar Sri donated Rs 10 lakh to Kodagu flood victims

ಚಾರ್ತುಮಾಸ್ಯವಾದ್ದರಿಂದ ನಮಗೆ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಚಾರ್ತುಮಾಸ್ಯ ಮುಗಿದ ಕೂಡಲೇ ಅಲ್ಲಿಗೆ ಹೋಗಿ ಪರಿಸ್ಥಿತಿಯನ್ನು ಪರಿಶೀಲಿಸಿ ಜನತೆಗೆ ವಿಶೇಷ ಸಹಾಯದ ಜೊತೆಗೆ ಮಠದ ಟ್ರಸ್ಟ್ ನಿಂದ ಇನ್ನೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುತ್ತೇವೆ.

ಭೂಮಿ ವೆಬ್‌ಸೈಟ್‌ನಲ್ಲಿ ಕೊಡಗು ನೆರೆ ಸಂತ್ರಸ್ತರಿಗೆ ನೆರವುಭೂಮಿ ವೆಬ್‌ಸೈಟ್‌ನಲ್ಲಿ ಕೊಡಗು ನೆರೆ ಸಂತ್ರಸ್ತರಿಗೆ ನೆರವು

ಅಲ್ಲಿಯ ಜನತೆಗೆ ನೇರವಾಗಿ ತಲುಪುವಂತೆ ಪರಿಹಾರ ಕಾರ್ಯವನ್ನು ನಡೆಸಲಾಗುವುದೆಂದು ಶ್ರೀಗಳು ತಿಳಿಸಿದ್ದಾರೆ.

English summary
Pejawar Sri donated Rs 10 lakh to Kodagu flood victims. In Bangalore Pajavar Sree is in Chaturmasya. Sri told this news through a press release.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X