ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಡುಬಿದ್ರೆ ಬೀಚ್ ಗೆ ಶೀಘ್ರದಲ್ಲೇ ಅಂತರ ರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ: ಡಿಸಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 18: ಉಡುಪಿ ಜಿಲ್ಲೆಯ ಪಡುಬಿದ್ರೆ ಬೀಚ್ ಗೆ ಅಂತರ ರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆಗೆ ಇನ್ನು ಒಂದು ಹೆಜ್ಜೆ ಮಾತ್ರ ಇದ್ದು, ಶೀಘ್ರದಲ್ಲಿಯೇ ಪಡುಬಿದ್ರೆ ಬೀಚ್ ಗೆ ಬ್ಲೂ ಫ್ಲಾಗ್ ಸರ್ಟಿಫಿಕೇಶನ್ ದೊರೆಯಲಿದೆ ಎಂದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ವಿಶ್ವಾಸ ವ್ಯಕ್ತಪಡಿಸಿದರು.

ಪಡುಬಿದ್ರೆಯ ಬ್ಲೂ ಫ್ಲಾಗ್ ಬೀಚ್ ನಲ್ಲಿ, ಕೇಂದ್ರ ಸರ್ಕಾರದ ಸ್ವಚ್ಛತಾ ಅಭಿಯಾನದ ಮುಂದುವರೆದ ಭಾಗವಾಗಿ ನಡೆದ "ಐ ಆಮ್ ಸೇವಿಂಗ್ ಮೈ ಬೀಚ್" ಧ್ವಜಾರೋಹಣ ಕಾರ್ಯಕ್ರಮದಲ್ಲಿ ಇಂದು ಈ ಕುರಿತು ಮಾತನಾಡಿದರು. ಪಡುಬಿದ್ರೆ ಬೀಚ್ ಗೆ ಅಂತರರಾಷ್ಟ್ರೀಯ ಮನ್ನಣೆ ಸಿಗುವ ಕುರಿತು ಇನ್ನಷ್ಟು ವಿವರವಾಗಿ ಮಾಹಿತಿ ನೀಡಿದರು.

 ರಾಷ್ಟ್ರೀಯ ಆಯ್ಕೆ ಸಮಿತಿಗೆ 8 ಬೀಚ್ ಗಳ ಆಯ್ಕೆ

ರಾಷ್ಟ್ರೀಯ ಆಯ್ಕೆ ಸಮಿತಿಗೆ 8 ಬೀಚ್ ಗಳ ಆಯ್ಕೆ

ದೇಶದ 13 ಬೀಚ್ ಗಳನ್ನು ಅಂತರ ರಾಷ್ಟ್ರೀಯ ಬ್ಲೂ ಫ್ಲಾಗ್ ಗೆಂದು ಮಾನ್ಯತೆಗೆ ಅಭಿವೃದ್ಧಿಪಡಿಸಿದ್ದು, ಅದರಲ್ಲಿ ಎಲ್ಲಾ ಅಗತ್ಯ ನಿಯಮಗಳ ಪಾಲನೆ ಮತ್ತು ಗುಣಮಟ್ಟ ಹೊಂದಿರುವ 8 ಬೀಚ್ ಗಳನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡಿ ಅಂತರರಾಷ್ಟ್ರೀಯ ಜ್ಯೂರಿಗೆ ಕಳುಹಿಸಲಾಗಿದೆ. ಅದರಲ್ಲಿ ನಮ್ಮ ಹೆಮ್ಮೆಯ ಪಡುಬಿದ್ರೆ ಬ್ಲೂ ಫ್ಲಾಗ್ ಬೀಚ್ ಸಹ ಸೇರಿದೆ ಎಂದು ತಿಳಿಸಿದರು.

ಗಮನಸೆಳೆದ ಪಡುಬಿದ್ರೆ ಗಣಪತಿ ದೇವಸ್ಥಾನದ ವಿಶೇಷ ಅಪ್ಪ ಸೇವೆಗಮನಸೆಳೆದ ಪಡುಬಿದ್ರೆ ಗಣಪತಿ ದೇವಸ್ಥಾನದ ವಿಶೇಷ ಅಪ್ಪ ಸೇವೆ

 ಸದ್ಯದಲ್ಲಿಯೇ ಅಂತರರಾಷ್ಟ್ರೀಯ ತಂಡ ಆಗಮನ

ಸದ್ಯದಲ್ಲಿಯೇ ಅಂತರರಾಷ್ಟ್ರೀಯ ತಂಡ ಆಗಮನ

ಈ ಬೀಚ್ ಗಳಿಗೆ ಸದ್ಯದಲ್ಲಿಯೇ ಅಂತರರಾಷ್ಟ್ರೀಯ ಜ್ಯೂರಿ ತಂಡ ಪರಿಶೀಲನೆಗೆ ಆಗಮಿಸಲಿದ್ದು, ಪಡುಬಿದ್ರೆ ಬೀಚ್ ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಬ್ಲೂ ಫ್ಲ್ಯಾಗ್ ಬೀಚ್ ಸರ್ಟಿಫಿಕೇಶನ್ ದೊರೆಯುವ ವಿಶ್ವಾಸ ಇದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಭರವಸೆ ನೀಡಿದರು.

 ಪಡುಬಿದ್ರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಪ್ರಸ್ತಾವನೆ

ಪಡುಬಿದ್ರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಪ್ರಸ್ತಾವನೆ

ಸ್ವಚ್ಛತೆ, ಸುರಕ್ಷತೆ, ಪರಿಸರ ರಕ್ಷಣೆ, ನೀರಿನ ಗುಣಮಟ್ಟ ಮುಂತಾದ ಷರತ್ತುಗಳಿಗೊಳಪಟ್ಟು ಬ್ಲೂ ಫ್ಲಾಗ್ ಮಾನ್ಯತೆ ದೊರೆಯಲಿದೆ. ಪಡುಬಿದ್ರೆಯ ಬೀಚ್ ಈ ಎಲ್ಲಾ ಷರತ್ತುಗಳ ಆಧಾರದಲ್ಲಿ ಅಭಿವೃದ್ಧಿ ಹೊಂದಿದ್ದು, ಇಲ್ಲಿನ ಸಮುದ್ರದ ನೀರಿನ ಗುಣಮಟ್ಟ ಅತ್ಯಂತ ಶುದ್ಧ ಎಂಬ ವರದಿ ಬಂದಿದೆ. ಈ ಪ್ರದೇಶವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ರಾಜ್ಯ ಸರ್ಕಾರಕ್ಕೆ 5 ಕೋಟಿ ರೂ ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

ಪಡುಬಿದ್ರಿ ಬಾಲ ಗಣಪತಿ ಶೋಭಾಯಾತ್ರೆಯಲ್ಲಿ ಇತ್ತಂಡಗಳ ಹೊಡೆದಾಟ; ಒಬ್ಬನಿಗೆ ಗಂಭೀರ ಗಾಯಪಡುಬಿದ್ರಿ ಬಾಲ ಗಣಪತಿ ಶೋಭಾಯಾತ್ರೆಯಲ್ಲಿ ಇತ್ತಂಡಗಳ ಹೊಡೆದಾಟ; ಒಬ್ಬನಿಗೆ ಗಂಭೀರ ಗಾಯ

Recommended Video

Islam ಧರ್ಮಕ್ಕೆ ಗೆ ಮತಾಂತರ ಆಗಿದ್ದಾರೆಯೇ Sanjjanaa Galrani | Oneindia Kannada

"ಪ್ರವಾಸೋದ್ಯಮದ ಜೊತೆ ಉದ್ಯೋಗ ಸೃಷ್ಟಿ"

ಈ ಬೀಚ್ ಅಭಿವೃದ್ಧಿಯಿಂದ ಸ್ಥಳೀಯರು ಆತಂಕ ಪಡುವ ಅಗತ್ಯವಿಲ್ಲ. ಇಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ಜೊತೆಗೆ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಲಿದೆ ಎಂದು ಡಿಸಿ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿ.ಪಂ ಸದಸ್ಯ ಶಶಿಕಾಂತ ಪಡುಬಿದ್ರೆ, ತಾಲೂಕು ಪಂಚಾಯತ್ ಸದಸ್ಯೆ ನೀತಾ ಗುರುರಾಜ್ , ಕಾಪು ತಹಸೀಲ್ದಾರ್ ಮೊಹಮದ್ ಇಸಾಕ್, ಎಸಿಟಿ ಯ ಮನೋಹರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

English summary
Very soon padu bidre beach will get international blue flag certification said Udupi DC Jagadish
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X