ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪದ್ಮಪ್ರಿಯಾ ಆತ್ಮಹತ್ಯೆ ಕೇಸ್: ಅತುಲ್ ರಾವ್ ಗೆ ಸುಪ್ರೀಂನಲ್ಲಿ ಹಿನ್ನಡೆ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 18: ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಆತ್ಮಹತ್ಯೆ ಕೇಸಿಗೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಅತುಲ್ ರಾವ್ ಅವರಿಗೆ ಸುಪ್ರೀಂಕೋರ್ಟಿನಲ್ಲಿ ಹಿನ್ನಡೆ ಉಂಟಾಗಿದೆ.

ಶಾಸಕ ಪತ್ನಿ ಜೊತೆಗೆ ಅನೈತಿಕ ಸಂಬಂಧವಿತ್ತು : ಅತುಲ್ಶಾಸಕ ಪತ್ನಿ ಜೊತೆಗೆ ಅನೈತಿಕ ಸಂಬಂಧವಿತ್ತು : ಅತುಲ್

ಈ ಕೇಸಿಗೆ ಸಂಬಂಧಿಸಿದಂತೆ ತನಿಖೆಗೆ ತಡೆಯಾಜ್ಞೆ ನೀಡಬೇಕೆಂದು ಅತುಲ್ ರಾವ್ ಅವರು ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಜಸ್ಟೀಸ್ ದೀಪಕ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಶುಕ್ರವಾರ(ಆಗಸ್ಟ್ 18)ದಂದು ಅರ್ಜಿಯನ್ನು ತಿರಸ್ಕರಿಸಿ, ತನಿಖೆ ಮುಂದುವರೆಸುವಂತೆ ಸೂಚಿಸಿದೆ.

Padmapriya suicide case : Supreme Court has rejects petition by Atul Rao

ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರ ಮೊದಲ ಪತ್ನಿ ಪದ್ಮಪ್ರಿಯಾ ಅವರು ಜೂನ್ 10, 2008ರಂದು ಮಾರುತಿ ವ್ಯಾಗನ್ ಕಾರಿನಲ್ಲಿ ಸ್ವತಃ ಡ್ರೈವ್ ಮಾಡಿಕೊಂಡು ತವರಿಗೆ ಹೊರಟ 32ರ ಹರೆಯದ ರಘುಪತಿ ಭಟ್ ಪತ್ನಿ ನಿಗೂಢವಾಗಿ ಕಣ್ಣರೆಯಾಗಿದ್ದರು. ಶಾಸಕರ ಪತ್ನಿ ನಾಪತ್ತೆಯಾಗಿರುವುದು ದೇಶಾದ್ಯಂತ ಭಾರೀ ಚರ್ಚೆಗೆ ಒಳಗಾಗಿತ್ತು. ದೆಹಲಿಯ ಅಪಾರ್ಟ್ಮೆಂಟ್ ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಾಜಿ ಶಾಸಕ ರಘುಪತಿ ಭಟ್ ಎರಡನೇ ಮದುವೆಮಾಜಿ ಶಾಸಕ ರಘುಪತಿ ಭಟ್ ಎರಡನೇ ಮದುವೆ

'ತನಗೆ ಅಡಿಕೆ ವ್ಯಾಪಾರ ಇದ್ದಿದ್ದರಿಂದ ಅಗಾಗ ಕಾರ್ಕಳಕ್ಕೆ ಹೋಗಿ ಬರುವ ಕೆಲಸವಿರುತ್ತಿತ್ತು. ಆಗ ತಾನು ಮತ್ತು ಪದ್ಮಪ್ರಿಯಾ 5-6 ಬಾರಿ ಖಾಸಗಿ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದೆವು. ತನಗೂ ಮತ್ತು ಪದ್ಮಪ್ರಿಯಾಗೂ ಅನೈತಿಕ ಸಂಬಂಧವಿದ್ದದ್ದು ನಿಜ ಎಂದು ಸಿಓಡಿಗೆ ಅತುಲ್ ರಾವ್ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ನನ್ನ ಪತ್ನಿ ಪದ್ಮಪ್ರಿಯಾಳ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಆಕೆಯನ್ನು ಕೊಲೆಯೂ ಮಾಡಿಲ್ಲ, ಮಾಡಿಸಿಯೂ ಇಲ್ಲ. ಹೀಗೆಂದು ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಮುಂದೆ ಲಿಖಿತವಾಗಿ ಪ್ರಮಾಣ ಮಾಡಿದ್ದೇನೆ ಎಂದು ರಘುಪತಿ ಭಟ್ ಹೇಳಿದ್ದರು. ನಂತರ ಎರಡನೇ ಮದುವೆಯಾದರು.

English summary
Padmapriya suicide case : Supreme Court today(Aug 18) rejected petition by Atul Rao to quash investigation against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X