• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿಯಲ್ಲಿ ಮರಳು ಸಮಸ್ಯೆ ಉಲ್ಬಣ:ವ್ಯಕ್ತಿಯಿಂದ ದಯಾಮರಣಕ್ಕೆ ಅರ್ಜಿ!

By ಉಡುಪಿ ಪ್ರತಿನಿಧಿ
|

ಉಡುಪಿ, ಮಾರ್ಚ್ 28: ಉಡುಪಿಯಲ್ಲಿ ಮರಳು ಸಮಸ್ಯೆ ತೀವ್ರಗೊಂಡಿದೆ. ಮರಳುಗಾರಿಕೆ, ಕಟ್ಟಡ ಉದ್ಯಮವನ್ನು ನೇರವಾಗಿ ಮತ್ತು ಪರೋಕ್ಷವಾಗಿ ನಂಬಿಕೊಂಡ ಕುಟುಂಬಗಳು ತತ್ತರಿಸಿ ಹೋಗಿವೆ.ಮರಳುಗಾರಿಕೆಯನ್ನೇ ನಂಬಿಕೊಂಡಿದ್ದ ಕುಟುಂಬವೊಂದು ತುತ್ತು ಅನ್ನಕ್ಕೂ ಗತಿ‌ ಇಲ್ಲದೆ ಜಿಲ್ಲಾಧಿಕಾರಿಗಳಿಗೆ ದಯಾಮರಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇವರು ರಾಘವೇಂದ್ರ.ಹೆಚ್ಚೆಂದರೆ ನಲವತ್ತರ ಆಸುಪಾಸಿನ ವಯಸ್ಸು.ಶಾಲೆಗೆ ಹೋಗುವ ಮಕ್ಕಳಿದ್ದಾರೆ.ಕಳೆದ ನಾಲ್ಕು ವರ್ಷಗಳ ಹಿಂದಿನ ತನಕವೂ ಇವರಿಗೆ ಮರಳುಗಾರಿಕೆ ಕಸುಬಾಗಿತ್ತು.ನಾಲ್ಕು ಟಿಪ್ಪರ್ ಗಳು ಮತ್ತು ಹನ್ನೆರಡು ಮಂದಿ ಕೆಲಸಗಾರರನ್ನಿಟ್ಟು ದುಡಿಸುವ ತಾಕತ್ತಿದ್ದವರು ರಾಘವೇಂದ್ರ.ಆದರೆ ಮೂರು ವರ್ಷಗಳಿಂದ ಉಡುಪಿಯಲ್ಲಿ ಮರಳು ಅಭಾವ‌ ತೀವ್ರಗೊಂಡಿದೆ.

ಮಂಗಳೂರಿನಿಂದ ಕೇರಳಕ್ಕೆ ಅಕ್ರಮ ಮರಳು ಸಾಗಾಟ: 4 ಲಾರಿ ವಶ

ಕಠಿಣ ಸಿಆರ್ ಝಡ್ ಕಾಯಿದೆ ರಾಘವೇಂದ್ರ ತರಹದ ಅನೇಕರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.ಮರಳುಗಾರಿಕೆಯನ್ನೇ ನಂಬಿರುವ ಜನ ಇದೀಗ ತತ್ತರಿಸಿ ಹೋಗಿದ್ದಾರೆ.ನಿ

ಮಗೆ ಆಶ್ಚರ್ಯವಾಗಬಹುದು, ಮರಳುಗಾರಿಕೆ ಇವತ್ತು ಶುರುವಾಗಬಹುದು, ನಾಳೆ ಶುರುವಾಗಬಹುದು ಎಂದು ಕಾಯುತ್ತಿದ್ದ ರಾಘವೇಂದ್ರ ಈಗ ತಮ್ಮ‌ಬಳಿ ಇದ್ದ ಮೂರು ಟಿಪ್ಪರ್ ಗಳನ್ನು ಮಾರಿ ಬೀದಿ ಪಾಲಾಗಿದ್ದಾರೆ. ಇರುವ ಇನ್ನೊಂದು ಟಿಪ್ಪರ್ ಮೇಲೆ ಏಳು ಲಕ್ಷ ಸಾಲ ಇದೆ. ಹೀಗಾಗಿ ಹೊಟ್ಟೆಪಾಡಿಗೆ ಬೇರೆ ದಾರಿಯೇ ಇಲ್ಲದೆ ಇವರು ಡಿಸಿಗೆ ಪತ್ರ ಬರೆದಿದ್ದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ನನಗೂ ನನ್ನ‌ ಕುಟುಂಬಕ್ಕೂ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಈ ವ್ಯಕ್ತಿ ಡಿಸಿಗೆ ಮನವಿ ಸಲ್ಲಿಸಿದ್ದಾರೆ!

 ಒಂದೇ ಸಮನೆ ಅತ್ತ ರಾಘವೇಂದ್ರ

ಒಂದೇ ಸಮನೆ ಅತ್ತ ರಾಘವೇಂದ್ರ

ಮರಳು ಉದ್ಯಮ ನಡೆಸುವ ವ್ಯಕ್ತಿಗಳ ಜೊತೆ ಪತ್ರಿಕಾಗೋಷ್ಠಿ ನಡೆಸಿದ ರಾಘವೇಂದ್ರ ಒಂದೇ ಸಮನೆ ಅತ್ತಿದ್ದಾರೆ.ನನಗೆ ಬದುಕಲು ಯಾವುದೇ ದಾರಿ ಉಳಿದಿಲ್ಲ, ಉಡುಪಿ ಜಿಲ್ಲಾಧಿಕಾರಿಯವರು ಒಂದೋ ಮರಳುಗಾರಿಕೆಗೆ ಅನುಮತಿ ಕೊಡಬೇಕು ಅಥವಾ ದಯಾಮರಣಕ್ಕೆ ಅವಕಾಶ ಕೊಡಬೇಕು ಎಂಬುದು ಈ ವ್ಯಕ್ತಿಯ ಆಗ್ರಹ.

 ಎಸ್ ಇ ಝಡ್ ಕಾಯಿದೆ ಸಡಿಲಿಸಲು ಒಪ್ಪುತ್ತಿಲ್ಲ

ಎಸ್ ಇ ಝಡ್ ಕಾಯಿದೆ ಸಡಿಲಿಸಲು ಒಪ್ಪುತ್ತಿಲ್ಲ

ಮರಳು ಸಮಸ್ಯೆ ಪರಿಹರಿಸಲು ಕೋರಿ ಉಡುಪಿಯಲ್ಲಿ ವರ್ಷಗಳಿಂದ ಪ್ರತಿಭಟನೆ, ಸತ್ಯಾಗ್ರಹ, ಧರಣಿಗಳಾಗಿವೆ.ಮರಳು ಲಾರಿಗಳು ಸಾವಿರ ಸಂಖ್ಯೆಗಳಲ್ಲಿ ರಸ್ತೆಯಲ್ಲಿ ನಿಂತು ಪ್ರತಿಭಟನೆಯಲ್ಲಿ ಭಾಗಿಯಾಗಿವೆ. ಉಡುಪಿ ಶಾಸಕರ ನೇತೃತ್ವದಲ್ಲೂ ಸತ್ಯಾಗ್ರಹಗಳಾಗಿವೆ.ಆದರೂ ಕೇಂದ್ರ ಸರಕಾರ ಮಾತ್ರ ಎಸ್ ಇ ಝಡ್ ಕಾಯಿದೆಯನ್ನು ಸಡಿಲಿಸಲು ಒಪ್ಪುತ್ತಿಲ್ಲ.

ಮರಳು ದಂಧೆ ಬಗ್ಗೆ ಮಾತನಾಡಿದ ಕೆ ಎಸ್ ಈಶ್ವರಪ್ಪ

 ಡಿಸಿಗೆ ಸಂಪೂರ್ಣ ಅಧಿಕಾರ

ಡಿಸಿಗೆ ಸಂಪೂರ್ಣ ಅಧಿಕಾರ

ಇನ್ನು ರಾಜ್ಯ ಸರಕಾರ ಡಿಸಿಗೆ ಸಂಪೂರ್ಣ ಅಧಿಕಾರ ನೀಡಿದೆ.ಆದರೆ ಜಿಲ್ಲಾಡಳಿತ ಜಪ್ಪಯ್ಯ ಅಂದ್ರೂ ಕಾನೂನಿನ ನೆಪ ಮುಂದಿಟ್ಟು ಈ ಹಿಂದಿನಂತೆ ಇದ್ದ ಮರಳುಗಾರಿಕೆಗೆ ಅನುಮತಿ ನೀಡುತ್ತಿಲ್ಲ. ಇದೆಲ್ಲದರ ಫಲವಾಗಿ ಉಡುಪಿಯಲ್ಲಿ ಅಕ್ರಮ ಮರಳುಗಾರಿಕೆ ತೀವ್ರಗೊಂಡಿದೆ.

 ಇದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ಘಂಟೆ

ಇದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ಘಂಟೆ

ಜಿಲ್ಲಾಡಳಿತ ಮತ್ತು ಮರಳು ಉದ್ಯಮದ ನಡುವಿನ ಸಂಘರ್ಷ ಮೂರು ವರ್ಷಗಳ ಬಳಿಕವೂ ನಿಲ್ಲುವ ಸೂಚನೆ ಕಾಣಿಸುತ್ತಿಲ್ಲ.ಪರಿಣಾಮವಾಗಿ ಮರಳುಗಾರಿಕೆಯನ್ನೇ ನಂಬಿದ ರಾಘವೇಂದ್ರರಂತಹ ಸಾವಿರಾರು ವ್ಯಕ್ತಿಗಳು ಹೊಟ್ಟೆಪಾಡಿಗೂ ಪರದಾಡುವಂತಾಗಿದೆ. ಮರಳುಗಾರಿಕೆಯನ್ನೇ ನಂಬಿದ ಈ ವ್ಯಕ್ತಿ ದಯಾಮರಣದ ಮೊರೆ ಹೋಗಿರುವುದು ಜಿಲ್ಲಾಡಳಿತಕ್ಕೆ ಒಂದು ಎಚ್ಚರಿಕೆ ಘಂಟೆ ಎಂಬುದರಲ್ಲಿ ಎರಡು ಮಾತಿಲ್ಲ.

ಅಕ್ರಮ ಮರಳುಗಾರಿಕೆ ತಡೆಯಲು ಸಿಬ್ಬಂದಿಗಳ ಕೊರತೆ: ಅಭಿನವ್ ಖರೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sand problem in Udupi is exacerbated.From this one person has applied for euthanasia. Read the report about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more