ಉಡುಪಿಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಮತ್ತೊಂದು ಸಾವು
ಉಡುಪಿ, ಜೂನ್ 30: ಮಹಾಮಾರಿ ಕೊರೊನಾ ವೈರಸ್ ಸೋಂಕು ಉಡುಪಿಯಲ್ಲಿ ಮತ್ತೊಂದು ಬಲಿ ಪಡೆದಿದ್ದು, ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಮಾರಕ ಸೋಂಕಿಗೆ ಮೂವರು ಬಲಿಯಾದಂತಾಗಿದೆ.
ಕೊರೊನಾ ವೈರಸ್ ನಿಂದಾಗಿ ಬೈಂದೂರು ತಾಲೂಕಿನ ಕಾಲ್ತೋಡುವಿನ 48 ವರ್ಷ ವಯಸ್ಸಿನ ವ್ಯಕ್ತಿಯು ಸಾವನ್ನಪ್ಪಿದ್ದಾರೆ. ಶನಿವಾರವಷ್ಟೇ ಮಹಾರಾಷ್ಟ್ರದಿಂದ ತವರಿಗೆ ವಾಪಾಸಾಗಿದ್ದ ಈ ವ್ಯಕ್ತಿ, ಬಹುವಿಧದ ಕಾಯಿಲೆಯಿಂದ ಬಳಲುತ್ತಿದ್ದರು.
ಉಡುಪಿಯಲ್ಲಿ ಮತ್ತೋರ್ವ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್
ಇವರು ಭಾನುವಾರ ಸ್ವಗ್ರಾಮದಲ್ಲಿ ಕೊನೆಯುಸಿರೆಳೆದಿದ್ದು, ಮಹಾರಾಷ್ಟ್ರದಿಂದ ಬಂದ ಕಾರಣ ಗಂಟಲು ದ್ರವ ಮಾದರಿ ಟೆಸ್ಟ್ ಮಾಡಲಾಗಿತ್ತು. ಇಂದು ಬಂದಿರುವ ವರದಿಯಲ್ಲಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಇರುವುದು ದೃಢಗೊಂಡಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಗೆ ಸಾವನ್ನಪ್ಪಿರುವವರ ಸಂಖ್ಯೆ ಮೂರಕ್ಕೇರಿದಂತಾಗಿದೆ.
Comments
coronavirus death hospital health department kannada news udupi ವೈರಸ್ ಸಾವು ಆಸ್ಪತ್ರೆ ಆರೋಗ್ಯ ಇಲಾಖೆ ಕನ್ನಡ ಸುದ್ದಿ ಉಡುಪಿ
English summary
A 48 year old man from Byndoor taluk has died due to coronavirus.
Story first published: Tuesday, June 30, 2020, 21:14 [IST]