ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಮತ್ತೊಂದು ಸಾವು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 30: ಮಹಾಮಾರಿ ಕೊರೊನಾ ವೈರಸ್ ಸೋಂಕು ಉಡುಪಿಯಲ್ಲಿ ಮತ್ತೊಂದು ಬಲಿ ಪಡೆದಿದ್ದು, ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಮಾರಕ ಸೋಂಕಿಗೆ ಮೂವರು ಬಲಿಯಾದಂತಾಗಿದೆ.

ಕೊರೊನಾ ವೈರಸ್ ನಿಂದಾಗಿ ಬೈಂದೂರು ತಾಲೂಕಿನ ಕಾಲ್ತೋಡುವಿನ 48 ವರ್ಷ ವಯಸ್ಸಿನ ವ್ಯಕ್ತಿಯು ಸಾವನ್ನಪ್ಪಿದ್ದಾರೆ. ಶನಿವಾರವಷ್ಟೇ ಮಹಾರಾಷ್ಟ್ರದಿಂದ ತವರಿಗೆ ವಾಪಾಸಾಗಿದ್ದ ಈ ವ್ಯಕ್ತಿ, ಬಹುವಿಧದ ಕಾಯಿಲೆಯಿಂದ ಬಳಲುತ್ತಿದ್ದರು.

ಉಡುಪಿಯಲ್ಲಿ ಮತ್ತೋರ್ವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್ಉಡುಪಿಯಲ್ಲಿ ಮತ್ತೋರ್ವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್

One More Coronavirus Infected Case Death In Udupi

ಇವರು ಭಾನುವಾರ ಸ್ವಗ್ರಾಮದಲ್ಲಿ ಕೊನೆಯುಸಿರೆಳೆದಿದ್ದು, ಮಹಾರಾಷ್ಟ್ರದಿಂದ ಬಂದ ಕಾರಣ ಗಂಟಲು ದ್ರವ ಮಾದರಿ ಟೆಸ್ಟ್ ಮಾಡಲಾಗಿತ್ತು. ಇಂದು ಬಂದಿರುವ ವರದಿಯಲ್ಲಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಇರುವುದು ದೃಢಗೊಂಡಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಗೆ ಸಾವನ್ನಪ್ಪಿರುವವರ ಸಂಖ್ಯೆ ಮೂರಕ್ಕೇರಿದಂತಾಗಿದೆ.

English summary
A 48 year old man from Byndoor taluk has died due to coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X