ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಪ್ಲಿ ಗಣೇಶ್ ಸಿಗ್ತಾರೆ ಬಿಡ್ರಿ ,ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ: ಜಯಮಾಲಾ

|
Google Oneindia Kannada News

ಉಡುಪಿ ಜನವರಿ 26 : ಶಾಸಕ ಆನಂದ್ ಸಿಂಗ್ ಅವರ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗಣೇಶ್ ನಾಪತ್ತೆ ಪ್ರಕರಣದ ಕುರಿತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಜಯಮಾಲಾ ಪ್ರತಿಕ್ರಿಯಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗೊಳಂದಿಗೆ ಮಾತನಾಡಿದ ಅವರು ಶಾಸಕ ಗಣೇಶ್ ಸಿಕ್ಕೇ ಸಿಗ್ತಾರೆ, ಅಧಿಕಾರಿಗಳು ಕೆಲ್ಸ ಮಾಡ್ತಿದಾರೆ. ನಾನು ಆ ದಿನ ರೆಸಾರ್ಟ್ ನಲ್ಲಿ ಇರ್ಲಿಲ್ಲ. ಮತ್ತೇನು ನನ್ನ ಕೇಳ್ಬೇಡಿ ಎಂದು ಅವರು ನುಣುಚಿ ಕೊಂಡರು.

ಶಾಸಕ ಆನಂದ್ ಸಿಂಗ್ ಚೆನ್ನಾಗಿದ್ದಾರೆ:ಸಚಿವೆ ಜಯಮಾಲಾ ಸ್ಪಷ್ಟನೆ ಶಾಸಕ ಆನಂದ್ ಸಿಂಗ್ ಚೆನ್ನಾಗಿದ್ದಾರೆ:ಸಚಿವೆ ಜಯಮಾಲಾ ಸ್ಪಷ್ಟನೆ

ನಿಮಗೆ ಆತುರ ಅಷ್ಟೇ. ಶಾಸಕ ಗಣೇಶ್ ಸಿಕ್ತಾರೆ ಬಿಡ್ರಿ . ಇಂದು ಗಣರಾಜ್ಯೋತ್ಸವ, ಖುಷಿಯಾಗಿದೀನಿ ಬಿಡ್ರಿ ಎಂದು ಹೇಳಿದರು . ಯಡಿಯೂರಪ್ಪ ಕಾಟಾಚಾರದ ಬರ ಪ್ರವಾಸದ ಪ್ರಶ್ನೆಗೆ ಮೌನಕ್ಕೆ ಶರಣಾದ ಜಯಮಾಲಾ ಅವರ ಬಗ್ಗೆ ನನಗಿಂತ ಚೆನ್ನಾಗಿ ನಿಮಗೇ ಗೊತ್ತಿದೆ ಎಂದು ಹೇಳಿದರು .

Officials will trace out MLA Ganesh

ಸಚಿವ ಕೃಷ್ಣ ಬೈರೇಗೌಡ ಅವರ ಬರ ಪ್ರವಾಸ ಸಮರ್ಥಿಸಿಕೊಂಡ ಸಚಿವೆ ಜಯಮಾಲಾಬರ ಪ್ರವಾಸಕ್ಕೆ ಹೋದಾಗ ಅರಣ್ಯದ ಸೌಂದರ್ಯ ನೋಡ್ಕೋಂಡು ಬಂದಿರ್ತಾರೆ. ಬರ ಪರಿಹಾರ ಕೆಲಸ ಮಾಡೋಕೆ ವಿಪಕ್ಷ ಏನೂ ಹೇಳ್ಬೇಕಾಗಿಲ್ಲ. ಎಲ್ಲಾ ನಮ್ಮ ಸರ್ಕಾರವೇ ಮಾಡುತ್ತೆ, ನಮಗೆ ಜವಾಬ್ದಾರಿ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬರ ಪ್ರವಾಸ ಮಾಡದೆ ಮಗನ ಸಿನಿಮಾದಲ್ಲಿ ಸಿಎಂ ಬ್ಯುಸಿ ಆರೋಪಕ್ಕೆ ಉತ್ತರಿಸಿದ ಜಯಮಾಲ , ನಾನು ಕಲಾವಿದೆ, ನನ್ನ ಮಾತು ಕೇಳಿ. ಎಲ್ಲಕ್ಕೂ ಒಂದು ಸಮಯ ಇದೆ. ಊಟ, ನಿದ್ರೆ, ಕೆಲಸಕ್ಕೆ ಟೈಂ ಟೇಬಲ್ ಇದೆ.

ಆನಂದ್ ಸಿಂಗ್ ಮೇಲೆ ಹಲ್ಲೆ: ಅಜ್ಞಾತ ಸ್ಥಳದಿಂದ ಶಾಸಕ ಗಣೇಶ್ ಹೇಳಿಕೆ ಬಿಡುಗಡೆ ಆನಂದ್ ಸಿಂಗ್ ಮೇಲೆ ಹಲ್ಲೆ: ಅಜ್ಞಾತ ಸ್ಥಳದಿಂದ ಶಾಸಕ ಗಣೇಶ್ ಹೇಳಿಕೆ ಬಿಡುಗಡೆ

ಅವರ ಮಗ ಮಾಡಿದ ಒಂದು ಸಿನಿಮಾ ನೋಡೋಕೂ ಟೈಂ ಲೆಕ್ಕಾಚಾರ ಹಾಕ್ಬೇಡಿ. ಹಾಗಾದ್ರೆ ಮಕ್ಕಳ ಬೆಳವಣಿಗೆ ಬೇಡ್ವಾ? ಆ ಮಗು ಸಿನಿಮಾ ಮಾಡಿಲ್ವಾ ? ಅವರಪ್ಪ ಅದನ್ನು ನೋಡೊದು ಬೇಡ್ವಾ? ಎಂದು ಅವರು ಪ್ರಶ್ನಿಸಿದರು.

ಬರ ಅಂತೇಳಿ ಊಟ ಮಾಡದೆ ಇರ್ತೀರಾ? ಸಿಎಂ ಬರ ಪ್ರವಾಸ ಮಾಡಿರ್ತಾರೆ, ನೀವು ಸುಮ್ನಿರಿ. ಬಜೆಟ್ ತಯಾರಿಸೋದ್ರಲ್ಲಿ ಸಿಎಂ ಬ್ಯುಸಿಯಾಗಿದ್ದಾರೆ. ನಾನು ನನ್ನ ಮಗಳ ಸಿನಿಮಾ ಬೇಕಾದಷ್ಟು ಸಲ ನೋಡಿದೀನಿ ಎಂದು ಅವರು ಸಮರ್ಥಿಸಿ ಕೊಂಡರು .

English summary
speaking to media persons in Udupi district incharge minister Jayamala said that Officers working on MLA Ganesh issue. They will trace out him very soon .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X