ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಗೆ ಬಂತು ಕೇರಳ ಮಾದರಿಯ ಬೋಟ್ ಹೌಸ್

ಬೊಟ್ ಹೌಸ್ ಪ್ರವೇಶಿಸುತ್ತಿದ್ದಂತೆಯೇ ವೆಲ್ ಕಮ್ ಡ್ರಿಂಕ್ಸ್ , ಸೌತ್ ಇಂಡಿಯನ್ ತಿಂಡಿ ತಿನಸುಗಳು , ಪಲ್ಯ ಅನ್ನದ ಜತೆ ಮೀನು, ಚಿಕನ್ ಸಾಂಬಾರು ಹೀಗೆ ಹಲವಾರು ಭಕ್ಷ್ಯಗಳು ಭೋಜನ ಪ್ರಿಯರಿಗಾಗಿ ಸಿದ್ಧವಾಗಿದೆ.

|
Google Oneindia Kannada News

ಉಡುಪಿ, ಮಾರ್ಚ್ 23 : ಇದೀಗ ಕೇರಳದ ಬೊಟ್ ಹೌಸ್ ಕರ್ನಾಟಕಕ್ಕೂ ಪ್ರವೇಶಿಸಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಬೋಟ್ ಹೌಸ್ ಪರಿಚಯಿಸಲಾಗಿದೆ. ಹೌದು ಉಡುಪಿ ಜಿಲ್ಲೆಯ ಕೆಮ್ಮಣ್ಣು, ಕೊಡಿ ಬೆಂಗ್ರೆಯ ಸ್ವರ್ಣ ನದಿಯಲ್ಲಿ ಬೋಟ್ ಹೌಸ್ ತೇಲಲು ತಯಾರಾಗಿದೆ.

ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು, ಶೀಘ್ರದಲ್ಲೇ ಎಲ್ಲಾ ಪರೀಕ್ಷೆಗಳೂ ಮುಗಿದು ರಜಾ ಪರ್ವ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಓಡಾಟ ಹೆಚ್ಚು. ಕಡಲ ತಡಿಯ ಸೌಂದರ್ಯದ ಜತೆಗೆ, ಇಲ್ಲಿನ ಜಲಮಾರ್ಗಗಳಲ್ಲಿ ಸಂಚರಿಸಿದರೆ ಸಾಕು, ನೀವು ಆ ಕ್ಷಣಗಳನ್ನು ಜೀವಮಾನದಲ್ಲಿ ಮತ್ತೀನೆಂದೂ ಮರೆಯಲಾರಿರಿ. ಬೆಂಗ್ರೆಯ ಸ್ವರ್ಣ ನದಿಯಲ್ಲಿ ಬೋಟ್ ಹೌಸ್ ಹಿನ್ನೀರಿನ ಸವಿ ಸವಿಯಲು ಸನ್ನದ್ಧಗೊಂಡಿದೆ.

Now enjoy the boat house beauty in udupi from april 8th

ಬೋಟ್ ಹೌಸ್ ನಲ್ಲಿ ಏನೆಲ್ಲಾ ಇದೆ ಗೊತ್ತಾ?
ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಬೆಳಗ್ಗೆ, ಸಂಜೆ ಹಾಗೂ ರಾತ್ರಿ ಯಾನ ಎನ್ನುವ ೩ ವಿಭಾಗ ಮಾಡಲಾಗಿದೆ. ೩೫ ರಿಂದ ೪೦ ಜನರ ಸಾಮರ್ಥ್ಯ ಹೊಂದಿರುವ ಈ ಬೋಟ್ ಹೌಸ್ ನಲ್ಲಿ ಶೌಚಾಲಯ, ಅಡುಗೆಕೋಣೆಯ ವ್ಯವಸ್ಥೆ ಕೂಡಾ ಮಾಡಲಾಗಿದೆ. ಇದಲ್ಲದೆ ಮೀಟಿಂಗ್, ವರ್ಕ್ ಶಾಪ್, ಬರ್ತ್ ಡೇ ಆಯೋಜನೆ ಮಾಡಲು ಸ್ಥಳಾವಕಾಶವನ್ನು ಹೊಂದಿದೆ. ಪಾಂಚಜನ್ಯ ಕ್ರೂಸ್ ನ ಬೋಟ್ ಹೌಸ್ ಪ್ರವಾಸಿಗರಿಗಾಗಿ ಕಾಯುತ್ತಿದೆ.

ಬೊಟ್ ಹೌಸ್ ಪ್ರವೇಶಿಸುತ್ತಿದ್ದಂತೆಯೇ ವೆಲ್ ಕಮ್ ಡ್ರಿಂಕ್ಸ್ , ಸೌತ್ ಇಂಡಿಯನ್ ತಿಂಡಿ ತಿನಸುಗಳು , ಪಲ್ಯ ಅನ್ನದ ಜತೆ ಮೀನು, ಚಿಕನ್ ಸಾಂಬಾರು ಹೀಗೆ ಹಲವಾರು ಭಕ್ಷ್ಯಗಳು ಭೋಜನ ಪ್ರಿಯರಿಗಾಗಿ ಸಿದ್ಧವಾಗಿದೆ. ಇದಲ್ಲದೆ ಬೋಟ್ ನಲ್ಲಿಯೇ ರಾತ್ರಿಯನ್ನು ಕಳೆಯಬೇಕೆನಿಸಿದವರಿಗೆ ಮಂದ ಬೆಳಕಿನ ವ್ಯವಸ್ಥೆಯನ್ನು ಹೊಂದಿದೆ. ಪ್ರವಾಸಿಗರ ಸುರಕ್ಷತೆಗೆ ನುರಿತ ಈಜು ತಜ್ಞರಿದ್ದಾರೆ.

Now enjoy the boat house beauty in udupi from april 8th

ಇದೇ ಬರುವ ಏಪ್ರಿಲ್ ೮ ರಂದು ಬೋಟ್ ಹೌಸ್ ಉದ್ಘಾಟನೆಯಾಗಲಿದ್ದು, ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ. ಕೇರಳದಲ್ಲಿ ಬೋಟ್ ಹೌಸ್ ದರ ದಿನಕ್ಕೆ ೧೦೦೦೦ ಸಾವಿರ ರೂ ಎಂದು ನಿಗದಿ ಮಾಡಲಾಗಿದೆ. ಆದರೆ ಉಡುಪಿಯ ಬೋಟ್ ಹೌಸ್ ಇನ್ನಷ್ಟೇ ಉದ್ಘಾಟನೆಯಾಗಲಿದ್ದು, ದರ ನಿಗದಿಯಾಗಿಲ್ಲ.

ಮನೋರಂಜನೆ ಮಾಡುವುದರ ಜತೆ ಸ್ವರ್ಣ ನದಿಯಲ್ಲಿ ೮ ರಿಂದ ೧೦ ಕಿ ಮೀ ಹೋಗಿ ಬರಲು ಅವಕಾಶವಿದೆ.ಪರಿಸರದ ಸೊಬಗನ್ನು ಬೋಟ್ ಹೌಸ್ ನಲ್ಲಿ ನೀವು ತೇಲುತ್ತಲೇ ನೋಡಬಹುದು. ನೀವೇ ಹೇಳಿ ಇದು ನಿಜವಾಗಿಯೂ ಆಕರ್ಷಣೆಯಲ್ಲವೇ? ನಿಮಗೂ ಇಂತಹ ಬೋಟ್ ಹೌಸ್ ನ ಅನುಭವ ಆಗಬೇಕೆಂದೆನಿಸಿದರೆ ನೀವು ಒಂದು ಬಾರಿ ಭೇಟಿ ನೀಡಿ.

English summary
As Kerala is more familiar with Boat House, even karnataka for the first time has implemented the same Boat house to udupi. The Boat House will come on the Swarna river bank from 8th April. This is done to attract more number of tourist to Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X