• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿ ಅಷ್ಟಮಠಗಳ ಭಿನ್ನಾಭಿಪ್ರಾಯ ಮತ್ತೊಂದು ಮಜಲಿಗೆ

|

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ವಿವಾದಕಾರಿ ಹೇಳಿಕೆಯ ಹಿನ್ನಲೆಯಲ್ಲಿ ಉಡುಪಿಯ ಸೋದೆ ಮಠ ತಮ್ಮ ದ್ವಂದ್ವ ಮಠವಾದ ಶಿರೂರು ಮಠದ ಶ್ರೀಗಳಾದ ಲಕ್ಷ್ಮೀವರತೀರ್ಥರ ಮೇಲೆ ನೋಟಿಸ್ ಜಾರಿ ಮಾಡಿದೆ.

ಮಾರ್ಚ್ ಹದಿನೈದಕ್ಕೆ ನೋಟಿಸ್ ಜಾರಿಯಾಗಿದ್ದರೂ, ಶಿರೂರು ಶ್ರೀಗಳಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬರದ ಹಿನ್ನಲೆಯಲ್ಲಿ ಕಾದುನೋಡಿ ಮುಂದಿನ ನಿರ್ಧಾರಕ್ಕೆ ಬರಲು ಸೋದೆ ಮಠದ ನೇತೃತ್ವದಲ್ಲಿ ಅಷ್ಟಮಠಗಳ ಯತಿಗಳು ನಿರ್ಧರಿಸಿದ್ದಾರೆ.

ಸನ್ಯಾಸಿಯಾಗಿ ರಾಜಕಾರಣಕ್ಕೆ ಬರಬಾರದೆಂಬ ಉಲ್ಲೇಖವಿದೆಯೇ?: ಶೀರೂರು ಶ್ರೀ ಸಂದರ್ಶನ

ಏಕಾದಶಿ ವೃಥಾಚಾರಣೆ, ಜನ್ಮಾಷ್ಠಮಿ ಸೇರಿದಂತೆ ಹಲವು ವಿಷಯ ಮತ್ತು ಧಾರ್ಮಿಕ ವಿಚಾರಗಳಲ್ಲಿ ಉಡುಪಿ ಮಠಗಳ ಭಿನ್ನಾಭಿಪ್ರಾಯ ಸಾಕಷ್ಟು ಬಾರಿ ಬಹಿರಂಗಗೊಂಡಿತ್ತು. ಪೇಜಾವರ ಹಿರಿಯ ಶ್ರೀಗಳ ಸಮ್ಮುಖದಲ್ಲಿ ಅದಕ್ಕೆ ಹಲವು ಬಾರಿ ಪರಿಹಾರಕಂಡುಕೊಳ್ಲಲಾಗಿತ್ತು.

ಇತ್ತೀಚೆಗೆ ಕೃಷ್ಣಮಠದ ಪಾರ್ಕಿಂಗ್ ವಿಚಾರದಲ್ಲಿ ಶಿರೂರು ಶ್ರೀಗಳು, ಅನಧಿಕೃತವಾಗಿ ತಲೆಯೆತ್ತಿದ ಅಂಗಡಿಗಳನ್ನು ನೆಲಸಮ ಮಾಡಿಸಿ, ನೇರವಾಗಿ ಪೇಜಾವರ ಮಠದ ಮೇಲೆ ಆರೋಪ ಹೊರಿಸಿದ್ದರು. ಇದಾದ ನಂತರ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಅಷ್ಟಮಠದ ಶ್ರೀಗಳು ಚರ್ಚಿಸಿ, ಶಿರೂರು ಶ್ರೀಗಳಿಗೆ ಪಾರ್ಕಿಂಗ್ ಜಾಗದ ಜವಾಬ್ದಾರಿ ವಹಿಸಿದ್ದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೆಲವು ವರ್ಷಗಳ ಹಿಂದೆ ಶಿರೂರು ಶ್ರೀಗಳು ಮಾತನಾಡಿದ್ದ ದೃಶ್ಯ ಕನ್ನಡದ ಖಾಸಗಿ ಮಾಧ್ಯಮವೊಂದರಲ್ಲಿ ಕೆಲವು ದಿನಗಳ ಹಿಂದೆ ಪ್ರಸಾರವಾಗಿತ್ತು. ಇದರಲ್ಲಿ ಶಿರೂರು ಶ್ರೀಗಳು ಇತರ ಪೀಠಾಧಿಪತಿಗಳ ವೈಯಕ್ತಿಕ ವಿಚಾರದ ಬಗ್ಗೆ ಮಾತನ್ನಾಡಿದ್ದರು. ಇದು ಉಡುಪಿ ಭಾಗದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿತ್ತು. ಮುಂದೆ ಓದಿ..

ರಾಜಕೀಯಕ್ಕೆ ಎಂಟ್ರಿ ಕೊಡುವ ನಿರ್ಧಾರಕ್ಕೆ

ರಾಜಕೀಯಕ್ಕೆ ಎಂಟ್ರಿ ಕೊಡುವ ನಿರ್ಧಾರಕ್ಕೆ

ಕೆಲವು ದಿನಗಳ ಹಿಂದೆ ಶಿರೂರು ಶ್ರೀಗಳು ಇದ್ದಕ್ಕಿದ್ದಂತೇ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಬಿಜೆಪಿ ಟಿಕೆಟ್ ಕೊಟ್ಟರೆ ಆ ಪಕ್ಷದಿಂದ ಇಲ್ಲದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಶ್ರೀಗಳು ಹೇಳಿದ್ದರು. ಜೊತೆಗೆ, ಉಡುಪಿ ಜಿಲ್ಲಾ ಬಿಜೆಪಿ ಘಟಕದ ವಿರುದ್ದ ಕಿಡಿಕಾರಿದ್ದರೆ, ಜಿಲ್ಲಾ ಉಸ್ತುವಾರಿ ಪ್ರಮೋದ್ ಮಧ್ವರಾಜ್ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಆ ವಿಡಿಯೋ ಪ್ರಸಾರವಾಗಿತ್ತು.

ಉಡುಪಿ ಅಷ್ಟಮಠದ ಇತರ ಯತಿಗಳಿಗೂ ಮಕ್ಕಳಿದ್ದಾರೆ

ಉಡುಪಿ ಅಷ್ಟಮಠದ ಇತರ ಯತಿಗಳಿಗೂ ಮಕ್ಕಳಿದ್ದಾರೆ

ವಿಡಿಯೋದಲ್ಲಿ, 'ಸಣ್ಣ ವಯಸ್ಸಿನಲ್ಲೇ ಸನ್ಯಾಸತ್ವ ಸ್ವೀಕರಿಸಿರುತ್ತೇವೆ. ನಮಗೂ ಆಸೆ ಅನ್ನೋದು ಇರುವುದಿಲ್ಲವೇ? ನನಗೆ ಮಕ್ಕಳು ಇರುವುದು ಹೌದು, ಇದೇನು ಹೊಸದಲ್ಲ. ಉಡುಪಿ ಅಷ್ಟಮಠದ ಇತರ ಯತಿಗಳಿಗೂ ಮಕ್ಕಳಿದ್ದಾರೆ. ಕೆಲವರಿಗೆ ನಾಲ್ಕೈದು ಮಕ್ಕಳಿದ್ದಾರೆ. ಪರ್ಯಾಯ ಅನ್ನುವುದು ದುಡ್ಡುಮಾಡಲು ಇರುವಂತದ್ದು' ಎಂದು ಹೇಳಿರುವ ವಿಡಿಯೋ ಮಾಧ್ಯಮವೊಂದರಲ್ಲಿ ಪ್ರಸಾರವಾಗಿತ್ತು.

ಬಿಜೆಪಿಯನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿದ ಉಡುಪಿ ಶ್ರೀಗಳ ರಾಜಕೀಯ ಎಂಟ್ರಿ

ಶಿರೂರು ಶ್ರೀಗಳಿಗೆ ನೋಟಿಸ್ ನೀಡಿದ ಅಷ್ಟಮಠ

ಶಿರೂರು ಶ್ರೀಗಳಿಗೆ ನೋಟಿಸ್ ನೀಡಿದ ಅಷ್ಟಮಠ

ಕಳೆದ ಮಾರ್ಚ್ ಹದಿನೈದರಂದು ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ (ಪುತ್ತಿಗೆ ಶ್ರೀಗಳನ್ನು ಹೊರತು ಪಡಿಸಿ), ವಿಡಿಯೋದ ಬಗ್ಗೆ ಸ್ಪಷ್ಟನೆ ನೀಡುವಂತೆ ಶಿರೂರು ಶ್ರೀಗಳಿಗೆ ನೋಟಿಸ್ ನೀಡುವ ತೀರ್ಮಾನಕ್ಕೆ ಬಂದು ಅಂತೆಯೇ ನೋಟಿಸ್ ಜಾರಿ ಮಾಡಲಾಗಿತ್ತು. ಜೊತೆಗೆ, ಶ್ರೀಗಳ ವಿರುದ್ದ ಸೂಕ್ತ ಕ್ರಮತೆಗೆದುಕೊಳ್ಳುವ ನಿರ್ಧಾರಕ್ಕೆ ಬರಲಾಗಿತ್ತು.

ಸೋದೆ ಮಠದಿಂದ ನೋಟಿಸ್ ಜಾರಿ

ಸೋದೆ ಮಠದಿಂದ ನೋಟಿಸ್ ಜಾರಿ

ನೋಟಿಸ್ ನೀಡಿ ಎರಡು ವಾರ ಆಗುತ್ತಾ ಬಂದರೂ, ಶಿರೂರು ಶ್ರೀಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದುದರಿಂದ, ಅವರ ಮುಂದಿನ ನಡೆ ನೋಡಿ ನಿರ್ಧಾರ ತೆಗೆದುಕೂಳ್ಳುವ ತೀರ್ಮಾನಕ್ಕೆ ಅಷ್ಟಮಠದ ಯತಿಗಳು ಬಂದಿದ್ದಾರೆ. ಸೋದೆ ಮಠ, ಶಿರೂರು ಮಠದ ದ್ವಂದ್ವ ಮಠವಾಗಿರುವುದರಿಂದ ಕಾನೂನಾತ್ಮಕ ತೊಡಕು ಬರದಂತೆ ನೋಡಿಕೊಳ್ಳಲು ಸೋದೆ ಮಠದಿಂದ ನೋಟಿಸ್ ಜಾರಿ ಮಾಡಲಾಗಿದೆ.

ಅಷ್ಟಮಠಗಳಿಗೆ ಒಂದೊಂದಕ್ಕೂ ದ್ವಂದ್ವ ಮಠ

ಅಷ್ಟಮಠಗಳಿಗೆ ಒಂದೊಂದಕ್ಕೂ ದ್ವಂದ್ವ ಮಠ

ಉಡುಪಿ ಅಷ್ಟಮಠಗಳಿಗೆ ಒಂದೊಂದಕ್ಕೂ ದ್ವಂದ್ವ ಮಠಗಳಿರುತ್ತವೆ. ಮಠದ ಯತಿಗಳು ವೃಂದಾವನಸ್ಥವಾದರೆ ಅಥವಾ ಪಟ್ಟದ ದೇವರಿಗೆ ಪೂಜೆ ನಿಲ್ಲದಂತೆ ನೋಡಿಕೊಳ್ಳಲು ಈ ಪದ್ದತಿ ಜಾರಿಯಲ್ಲಿದೆ. ಶಿರೂರು-ಸೋದೆ, ಪಲಿಮಾರು-ಅದಮಾರು, ಕೃಷ್ಣಾಪುರ-ಪುತ್ತಿಗೆ, ಕಾಣಿಯೂರು-ಪೇಜಾವರ - ದ್ವಂದ್ವ ಮಠಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Notice has been served to Lakshmeevara Theertha seer of Shiroor Math over his alleged remarks on Udupi Swamiji's. Kannada news channel telecasted a video of Shiroor seer in that, Seer was telling I have a children and other astha math seer also has children's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more