ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಉಪ ಚುನಾವಣೆ; ಅಭ್ಯರ್ಥಿ ಬಗ್ಗೆ ಚರ್ಚೆಯೇ ಆಗಿಲ್ಲ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 31; "ಅಭ್ಯರ್ಥಿ ಯಾರು ಅನ್ನೋದು ಚರ್ಚೆಯಾಗಿಲ್ಲ" ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆಳಗಾವಿ ಉಪ ಚುನಾವಣೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಸುರೇಶ್ ಅಂಗಡಿ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ.

ಭಾನುವಾರ ಉಡುಪಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ದಿ. ಸುರೇಶ್ ಅಂಗಡಿ ಪುತ್ರಿ ಸ್ವತಂತ್ರ ಸ್ಪರ್ಧೆ ವಿಚಾರದ ಕುರಿತು ಪ್ರತಿಕ್ರಿಯಿಸಿದರು. "ಸದ್ಯ ಅಂತ ಯಾವುದೇ ಪ್ರಶ್ನೆ ಉದ್ಭವ ಆಗಿಲ್ಲ. ಅಭ್ಯರ್ಥಿ ಯಾರು ಅನ್ನೋದು ಕೂಡ ಚರ್ಚೆಯಾಗಿಲ್ಲ. ಅಂಗಡಿಯವರ ಮನೆತನ ಪಕ್ಷಕ್ಕೆ ನಿಷ್ಠವಾಗಿದೆ" ಎಂದರು.

2023ರ ಚುನಾವಣೆ; ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದ ಎಚ್‌ಡಿಕೆ! 2023ರ ಚುನಾವಣೆ; ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದ ಎಚ್‌ಡಿಕೆ!

"ರಾಜ್ಯದಿಂದ ಕೆಲವೊಂದು ಹೆಸರುಗಳನ್ನು ಕಳಿಸುವ ಪ್ರಕ್ರಿಯೆ ಆಗುತ್ತದೆ. ಚುನಾವಣೆಗೆ ಇನ್ನೂ ಕೂಡ ದಿನಾಂಕ ಘೋಷಣೆಯಾಗಿಲ್ಲ. ಭಾರತೀಯ ಜನತಾ ಪಕ್ಷ ಗೆಲ್ಲಬೇಕು ಅಂದರೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು" ಎಂದರು.

ಬೆಳಗಾವಿ ಮಹಾರಾಷ್ಟ್ರಕ್ಕೆ; ಸರ್ಕಾರಿ ಬಸ್ ಮೇಲೆ ಮರಾಠಿ ಪೋಸ್ಟರ್ ಬೆಳಗಾವಿ ಮಹಾರಾಷ್ಟ್ರಕ್ಕೆ; ಸರ್ಕಾರಿ ಬಸ್ ಮೇಲೆ ಮರಾಠಿ ಪೋಸ್ಟರ್

No Discussion On Belagavi Candidate Yet Lakshman Savadi

ಶಿವಾಜಿ ನಮ್ಮವನೇ: "ಹೌದು, ಶಿವಾಜಿ ನಮ್ಮವನೇ. ಎಂಟು ತಲೆಮಾರು ಪೂರ್ವದಲ್ಲಿ ಶಿವಾಜಿ ವಂಶಸ್ಥರು ಕರ್ನಾಟದಲ್ಲಿದ್ದರು. ಗದಗ ಜಿಲ್ಲೆಯವರಾಗಿದ್ದು, ತದನಂತರ ಅವರು ಬೇರೆ ರಾಜ್ಯಕ್ಕೆ ಹೋಗಿದ್ದಾರೆ. ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಅವಿವೇಕತನದ ಹೇಳಿಕೆ ನೀಡುತ್ತಿದ್ದಾರೆ" ಎಂದು ಲಕ್ಷ್ಮಣ ಸವದಿ ಹೇಳಿದರು.

"ಬೆಳಗಾವಿ, ನಿಪ್ಪಾಣಿ , ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ. ನಮ್ಮ ರಾಜ್ಯದ 2ನೇ ರಾಜಧಾನಿ ಬೆಳಗಾವಿ ಅನ್ನೋದು ಹೆಮ್ಮೆ. ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿದೆ ಕನ್ನಡ ಸೀರಿಯಲ್ ಮನೆಯೊಂದು ಮೂರು ಬಾಗಿಲು ಥರ ಆಗಿದೆ. ಎತ್ತು ಏರಿಗೆಳೆದರೆ ಕೋಣ ಕೆರೆಗೆ ಎಳೆಯಿತು ಎಂಬಂತಾಗಿದೆ. ಅಸ್ಥಿರತೆ ಉಂಟಾದಾಗ ಜನರ ಗಮನ ಬೇರೆಡೆ ಸೆಳೆಯಲು ಹೀಗೆಲ್ಲ ಮಾತನಾಡುತ್ತಾರೆ" ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

ಬೆಳಗಾವಿ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪ್ರಕಟಿಸುವ ದಿನ ಯಾವಾಗ ಗೊತ್ತಾ?ಬೆಳಗಾವಿ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪ್ರಕಟಿಸುವ ದಿನ ಯಾವಾಗ ಗೊತ್ತಾ?

ಬಿಜೆಪಿಗೆ ಪಾಟೀಲ್; "ಅರವಿಂದ ಪಾಟೀಲ್ ಬಿಜೆಪಿಗೆ ಬರುತ್ತೇನೆ ಅಂತ ಚರ್ಚೆ ಮಾಡಿದ್ದಾರೆ. ಬರುವುದಾದರೆ ಬನ್ನಿ ಅಂತಾನೂ ಆಹ್ವಾನ ನೀಡಿದ್ದೇವೆ. ಅವರು ಅಭ್ಯರ್ಥಿಯಾಗಬೇಕೋ?, ಬೇಡವೋ? ಅನ್ನೋದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಬಿಜೆಪಿಗೆ ಬರುವವರನ್ನು ವಿರೋಧ ಮಾಡುವುದು ಸರಿಯಲ್ಲ" ಎಂದು ಲಕ್ಷ್ಮಣ ಸವದಿ ಹೇಳಿದರು.

Recommended Video

Union Budget : ನಮ್ಮ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ಆಗತ್ತೆ | R Ashok | Oneindia Kannada

ಭವಿಷ್ಯಕಾರ ಅಲ್ಲ; "ಶೀಘ್ರ ವಿಧಾನಸಭಾ ಚುನಾವಣೆ" ನಡೆಯಲಿದೆ ಎಂಬ ಸಿ. ಎಂ. ಇಬ್ರಾಹೀಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, "ಇಬ್ರಾಹಿಂ ಭವಿಷ್ಯಕಾರರಲ್ಲ, ಅಂತಹಾ ಜ್ಞಾನಿಯೂ ಅಲ್ಲ. ಅವರೊಬ್ಬ ಭಾಷಣಕಾರ. ಮಾತನಾಡುವಾಗ ಹೀಗೆಲ್ಲಾ ಮಾತಾಡುತ್ತಾರೆ ಅಷ್ಟೇ" ಎಂದರು.

English summary
Deputy chief minister Lakshman Savadi said that there is no discussion yet on the Belagavi by election candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X