ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಅಭಯ ಹಸ್ತ ನೀಡಿದ ನಿರ್ಮಲಾ ಸೀತಾರಾಮನ್

|
Google Oneindia Kannada News

ಉಡುಪಿ, ಮಾರ್ಚ್ 26: ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮಲ್ಪೆ ಮೀನುಗಾರರು ನಾಪತ್ತೆಯಾಗಿ ಸರಿಸುಮಾರು 3 ತಿಂಗಳು ಕಳೆದಿದೆ. ಆದರೆ ಶೋಧಕಾರ್ಯ ಮುಂದು ವರೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಳೆದ ಡಿಸೆಂಬರ್ 13 ರಂದು ಮಲ್ಪೆಯ ಮೀನುಗಾರಿಕಾ ಬಂದರಿನಿಂದ ಸುವರ್ಣ ತ್ರಿಭುಜ ಬೋಟ್ ನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮೀನುಗಾರರು ನಿಗೂಢವಾಗಿ ನಾಪತ್ತೆಯಾಗಿದ್ದರು.

ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​

ಮೀನುಗಾರರಿಗಾಗಿ ಹಾಗೂ ಸುವರ್ಣ ತ್ರಿಭುಜ ಬೋಟ್ ಗಾಗಿ ಉಡುಪಿ ಪೋಲೀಸರು, ಕರಾವಳಿ ಕಾವಲು ಪಡೆಯ ಪೊಲೀಸರು, ಭಾರತೀಯ ತಟರಕ್ಷಣಾ ಪಡೆ , ಭಾರತೀಯ ನೌಕಾಪಡೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು . ಆದರೆ ಈವರೆಗೆ ಮೀನುಗಾರರ ಬಗ್ಗೆಯಾಗಲಿ ಅವರು ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಬಗ್ಗೆಯಾಗಲಿ ಸುಳಿವು ದೊರೆತಿಲ್ಲ.

Nirmala Sitharaman visited missing fisherman house

ನಮ್ಮ ಪ್ರಧಾನಿಗೆ ಸರಿಸಾಟಿ ಯಾರಿದ್ದಾರೆ;ನಿರ್ಮಲಾ ಸೀತಾರಾಮನ್ ಪ್ರಶ್ನೆನಮ್ಮ ಪ್ರಧಾನಿಗೆ ಸರಿಸಾಟಿ ಯಾರಿದ್ದಾರೆ;ನಿರ್ಮಲಾ ಸೀತಾರಾಮನ್ ಪ್ರಶ್ನೆ

ಈ ನಡುವೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿಗೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ನಾಪತ್ತೆಯಾದ ಮೀನುಗಾರರ ಮನೆಗೂ ಭೇಟಿ ನೀಡಿದರು. ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಮಲ್ಪೆಗೆ ತೆರಳಿದ ನಿರ್ಮಲಾ ಸೀತಾರಾಮನ್ , ನಾಪತ್ತೆಯಾಗಿರುವ 7 ಮಂದಿ ಮೀನುಗಾರರ ಪೈಕಿ ಮಲ್ಪೆಯಲ್ಲಿರುವ ಚಂದ್ರಶೇಖರ್ ಮತ್ತು ದಾಮೋದರ್ ಅವರ ಮನೆಗೆ ಭೇಟಿ ನೀಡಿದರು.

Nirmala Sitharaman visited missing fisherman house

ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ನಲ್ಲಿದ್ದ ಬಾಕ್ಸ್ ಗಳು ಪತ್ತೆ!ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ನಲ್ಲಿದ್ದ ಬಾಕ್ಸ್ ಗಳು ಪತ್ತೆ!

ಚಂದ್ರಶೇಖರ್ ಹಾಗೂ ದಾಮೋದರ್ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಚಂದ್ರಶೇಖರ್ ಹಾಗೂ ದಾಮೋದರ್ ಅವರ ಪತ್ನಿಯರಿಗೆ ಸಾಂತ್ವನ ಹೇಳಿದರು. ಮೀನುಗಾರರ ಶೋಧದ ವಿಚಾರದಲ್ಲಿ ನೌಕಾಪಡೆ, ಏರ್ ಫೋರ್ಸ್ ಜೊತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

English summary
Defence Minister Nirmala Sitharaman visited missing fisherman house. Nirmala visited Chandra Shekhar and Damodhar's house in Malpe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X