ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯಾಟ್ ಪರೀಕ್ಷೆಯಲ್ಲಿ ಕನ್ನಡಿಗ ನಿರಂಜನ್ ಪ್ರಸಾದ್ ಟಾಪರ್

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 07: ಸಾಮಾನ್ಯ ಪ್ರವೇಶ ಪರೀಕ್ಷೆ (ಕ್ಯಾಟ್) ಫಲಿತಾಂಶ ಪ್ರಕಟಗೊಂಡಿದ್ದು, ಮಣಿಪಾಲದ ನಿರಂಜನ್ ಪ್ರಸಾದ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಬೆಂಗಳೂರು ವಿವಿಯಲ್ಲಿ ಪರೀಕ್ಷೆ ಮುಗಿದು 1 ಗಂಟೆಯಲ್ಲಿ ಫಲಿತಾಂಶಬೆಂಗಳೂರು ವಿವಿಯಲ್ಲಿ ಪರೀಕ್ಷೆ ಮುಗಿದು 1 ಗಂಟೆಯಲ್ಲಿ ಫಲಿತಾಂಶ

ಪರೀಕ್ಷೆ ಬರೆದ ದೇಶದ 2.9 ಲಕ್ಷ ವಿದ್ಯಾರ್ಥಿಗಳಲ್ಲಿ 11 ಮಂದಿ ಮಾತ್ರ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ನಿರಂಜನ್ ಕರ್ನಾಟಕದ ಏಕೈಕ ವಿದ್ಯಾರ್ಥಿ ಎಂಬುದು ವಿಶೇಷ. ದೇಶದ ಪ್ರತಿಷ್ಠಿತ ಐಐಎಂ ಮತ್ತು ಬಿಸ್ನೆಸ್ ಸ್ಕೂಲ್‌ಗಳಲ್ಲಿ ಪ್ರವೇಶ ಪಡೆಯಲು 2018 ನವೆಂಬರ್‌ನಲ್ಲಿ ಕಲ್ಕತ್ತ ಐಐಎಂ ಕ್ಯಾಟ್ ಪರೀಕ್ಷೆ ನಡೆಸಿತ್ತು.

 ಚೆನ್ನಾಗಿ ಓದಿದರೆ ಮಕ್ಕಳಿಗೆ ಮಾತ್ರವಲ್ಲ ಇನ್ಮುಂದೆ ಶಿಕ್ಷಕರಿಗೂ ಅಂಕ ಚೆನ್ನಾಗಿ ಓದಿದರೆ ಮಕ್ಕಳಿಗೆ ಮಾತ್ರವಲ್ಲ ಇನ್ಮುಂದೆ ಶಿಕ್ಷಕರಿಗೂ ಅಂಕ

ಮಣಿಪಾಲದ ಲಕ್ಷ್ಮೀಂದ್ರ ನಗರದ ನಿವಾಸಿ ನಿರಂಜನ್ ಮದ್ರಾಸ್ ಐಐಟಿಯಲ್ಲಿ ಮೆಕಾನಿಕಲ್ ಡ್ಯುಯೆಲ್ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದಾರೆ.

Niranjan Prasad M scored a 100 percentile in CAT 2018

ನಿರಂಜನ್ ಪ್ರಸಾದ್, ಮೂಡುಬಿದಿರೆ ಮೈಟ್ ಇನ್ಸ್ ಟ್ಯೂಟ್‌ನಲ್ಲಿ ಎಂಬಿಎ ವಿಭಾಗ ಮುಖ್ಯಸ್ಥರಾದ ಜಯಪ್ರಸಾದ್ ಮೊಳೆಯಾರ್, ಮಣಿಪಾಲ ಮಾಹೆಯಲ್ಲಿ ಪ್ರಾಧ್ಯಾಪಕಿ ಕೀರ್ತನಾ ದಂಪತಿಗಳ ಪುತ್ರ. ಬ್ರಹ್ಮಾವರ ಲಿಟಲ್‌ ರಾಕ್ ಶಾಲೆಯಲ್ಲಿ 10 ಮತ್ತು 12 ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿ ಪದವಿ ಶಿಕ್ಷಣಕ್ಕೆ ಮದ್ರಾಸ್‌ ಐಐಟಿಗೆ ನಿರಂಜನ್ ಸೇರಿದ್ದರು.

English summary
Niranjan Prasad M. from Udupi district, scored a 100 percentile in Common Admission Test (CAT) 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X