ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಬ್ಬಬ್ಬಾ.ಗಿನ್ನೆಸ್ ದಾಖಲೆ ಮಾಡಿ ಹೂನಗೆ ಚೆಲ್ಲಿದ ಒಂಬತ್ತರ ಪೋರಿ !

|
Google Oneindia Kannada News

ಸಾಧಿಸುವ ಛಲದ ಮುಂದೆ ವಯಸ್ಸು ಅಡ್ಡಿ ಬರೋದಿಲ್ಲ ಎಂಬುದನ್ನು ಬಾಲೆಯೊಬ್ಬಳು ಸಾಧಿಸಿ ತೋರಿಸಿದ್ದಾಳೆ. ಆಕೆಯಿನ್ನೂ ಒಂಬತ್ತರ ಬಾಲೆ, ಆದ್ರೂ ವಿಶ್ವದಾಖಲೆಯೊಂದನ್ನು ನೀರು ಕುಡಿದಷ್ಟೇ ಸಲೀಸಾಗಿ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ.

ಈ ಬಾಲೆಗೆ ಇನ್ನೂ ಒಂಬತ್ತರ ಹರೆಯ. ಅದೆಂಥ ಉತ್ಸಾಹ , ಅದೆಂಥ ಲವಲವಿಕೆ. ಉಡುಪಿ ಜಿಲ್ಲೆಯ ಉದ್ಯಾವರದವಳು ಈಕೆ. ಯೋಗವನ್ನೇ ಉಂಡು, ಉಟ್ಟು ಉಸಿರಾಡುವ ಈ ಪೋರಿ, ಸಲೀಸಾಗಿ ಗಿನ್ನೆಸ್ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದಿದ್ದಾಳೆ.

ಒಂದು ನಿಮಿಷದಲ್ಲಿ ಯೋಗ ಭಂಗಿಯೊಂದನ್ನು ಅತೀ ಹೆಚ್ಚು ಬಾರಿ ಮಾಡುವ ಮೂಲಕ ಗಿನ್ನೆಸ್‌ ದಾಖಲೆಗೆ ಭಾಜನಳಾಗಿದ್ದಾಳೆ. ಎದೆಭಾಗ ಸ್ಥಿರವಿರಿಸಿ ದೇಹದ ಉಳಿದ ಭಾಗಗಳನ್ನು ನಿಮಿಷಕ್ಕೆ 42 ಬಾರಿ ಚಲನೆಗೊಳಪಡಿಸುವ ನಿರಾಲಂಭ ಪೂರ್ಣ ಚಕ್ರಾಸನ ಭಂಗಿಯನ್ನು ಪ್ರದರ್ಶಿಸುವ ಮೂಲಕ ಗಿನ್ನೆಸ್ ಪುಸ್ಥಕದಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದಾಳೆ.

Nine year old girl entered into Guinness book of record, performed Yoga

ಈ ಮೊದಲು ಪ್ಯಾಲೆಸ್ತೀನ್‌ನ 13 ವರ್ಷದ ಬಾಲಕ ಮೊಹಮ್ಮದ್‌ ಆಲ್‌ ಶೇಖ್‌ ಹೆಸರಿನಲ್ಲಿ ಈ ದಾಖಲೆಯಿತ್ತು. ಆತ ನಿಮಿಷಕ್ಕೆ 38 ಬಾರಿ ಈ ಭಂಗಿಯನ್ನು ಮಾಡಿದ್ದ. ಇದನ್ನು ಮುರಿದು ತನ್ನ ಹೆಸರಿನಲ್ಲಿ ದಾಖಲೆ ಬರೆಯಲು ತನುಶ್ರೀ ಸಾಕಷ್ಟು ತಯಾರಿ ನಡೆಸಿದ್ದಳು.

ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಸಾಕಷ್ಟ ಜನ ಸೇರಿದ್ದರು. ಅವರೆಲ್ಲರ ಸಮ್ಮುಖ ಈ ಪೋರಿ ವಿಶ್ವದಾಖಲೆ ಮಾಡಿ ಹೂನಗೆ ಚೆಲ್ಲಿದ್ದಾಳೆ. ತನುಶ್ರೀ ಒಂದು ನಿಗದಿತ ಆಸನವನ್ನು ವಿಡಿಯೋದಲ್ಲಿ ವೀಕ್ಷಿಸಿ ತಾಯಿಯ ಮಾರ್ಗದರ್ಶನದಲ್ಲಿ ನಿತ್ಯ ಅಭ್ಯಸಿಸಿ ಈಗ ಸಾಧನೆ ಮಾಡಿದ್ದಾಳೆ.

Nine year old girl entered into Guinness book of record, performed Yoga

ತಂದೆ ಉದಯ ಕುಮಾರ್‌ ಮತ್ತು ತಾಯಿ ಸಂಧ್ಯಾ ಅವರ ಗರಡಿಯಲ್ಲಿ ಮನೆಯಲ್ಲಿಯೇ ಅಭ್ಯಾಸ ಮಾಡಿದ ಹೆಗ್ಗಳಿಕೆ ಈಕೆಯದ್ದು. ಉಡುಪಿಯ ಸೈಂಟ್‌ ಸಿಸಿಲೀಸ್‌ ಶಾಲೆಯಲ್ಲಿ 4ನೇ ತರಗತಿಯ ವಿದ್ಯಾರ್ಥಿನಿಯಾಗಿರೋ ಈ ಪೋರಿ ಈಗ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾಳೆ. ಶಹಬ್ಬಾಸ್ ತನುಶ್ರೀ...

English summary
Tanushree, a Nine year old girl from Udupi entered her name into Guinness book of records. Tanushree, performed 'Niralamba Poorna Chakrashana' pose of Yoga 42 times in a spam of just 1 minute. Well done Tanushree, all the best.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X