ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಣಿಪಾಲದಲ್ಲಿ ನೈಜೀರಿಯಾ ಪ್ರಜೆ ಬಂಧನ

|
Google Oneindia Kannada News

ಉಡುಪಿ, ಅಕ್ಟೋಬರ್ 17: ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲಿ ವಾಸವಾಗಿದ್ದ ಆರೋಪದಡಿ ನೈಜೀರಿಯಾಯ ಯುವಕನೋರ್ವನನ್ನು ಉಡುಪಿಯ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಮಣಿಪಾಲ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಲೈಡ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದ ರಾಜಿ ರಕೀಬ್ ಬಬತುಂಡೆ ಎಂಬವರನ್ನು ಬಂಧಿಸಲಾಗಿದೆ.

Nigerian national arrested in Manipal for overstaying in the country

ಮಣಿಪಾಲ ವಿವಿ ಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಭಾರತ ವೀಸಾ ಪಡೆದುಕೊಂಡಿದ್ದ ರಾಜಿ ರಕೀಬ್ ವೀಸಾ ಅವಧಿ ಮುಗಿದರೂ ತನ್ನ ತವರು ದೇಶ ನೈಜೀರಿಯಾಕ್ಕೆ ಮರಳಿರಲಿಲ್ಲ. ಬದಲಾಗಿ ವೀಸಾ ಅವಧಿ ವಿಸ್ತರಣೆ ಮಾಡದೆ ಮಣಿಪಾಲದ ಬಾಡಿಗೆ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಪೊಲೀಸರು ರಕೀಬ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಅಕ್ಟೋಬರ್ 30 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ವಿದ್ಯಾರ್ಥಿಯಾಗಿದ್ದ ರಾಜಿ ರಕೀಬ್ ಅವರ ಸಬ್ಜೆಕ್ಟ್ ಬಾಕಿ ಇರುವ ಕಾರಣ ನೈಜೀರಿಯಾಕ್ಕೆ ಮರಳದೆ ಮಣಿಪಾಲದಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ.

English summary
The Udupi police on monday October 16 arrested a Nigerian student in Manipal for overstaying in the country. The accused is identified as Raji Roqeeb Babatunde (25) from Nigeria. It is said that he was pursuing masters in occupational therapy in Manipal School of Allied Health Sciences.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X