ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಹಂದಿ ಎಫೆಕ್ಟ್: ವಧುವಿನ ಒಂದೇ ಕುಟುಂಬದ 7 ಮಂದಿಗೆ ಕೊರೊನಾ ಸೋಂಕು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 15: ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚುತ್ತಲೇ ಇದೆ. ಪ್ರತಿನಿತ್ಯ ಐವತ್ತರಿಂದ ಅರವತ್ತು ಪ್ರಕರಣಗಳು ಪತ್ತೆಯಾಗುತ್ತಿದ್ದು, ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ಅಲ್ಲದೇ ಈ ಕೊರೊನಾ ವೈರಸ್ ಸೋಂಕು ಸಮುದಾಯಕ್ಕೆ ಹಬ್ಬುತ್ತಿದೆಯಾ ಎಂಬ ಭೀತಿ ಎದುರಾಗಿದೆ. ಇದಕ್ಕೆ ಕಾರಣ ಕಾಪು ತಾಲ್ಲೂಕಿನಲ್ಲಿ ನಡೆದ ಘಟನೆ. ಕಾಪು ತಾಲೂಕಿನ ನವವಧುವಿನ ಒಂದೇ ಕುಟುಂಬದ ಏಳು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಪಿಯು ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಉಡುಪಿಯ ಅಭಿಜ್ಞಾ ರಾವ್ ರಾಜ್ಯಕ್ಕೆ ಪ್ರಥಮಪಿಯು ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಉಡುಪಿಯ ಅಭಿಜ್ಞಾ ರಾವ್ ರಾಜ್ಯಕ್ಕೆ ಪ್ರಥಮ

ಕಾಪು ತಾಲೂಕು ಮಲ್ಲಾರಿನ ಕೊಂಬಗುಡ್ಡೆಯಲ್ಲಿ ಈ ಕುಟುಂಬ ಇದ್ದು, ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ಯುವಕನ ಜೊತೆ ಮದುವೆ ಆಗಿರುವ ವಧುವಿನ ಕುಟುಂಬ ಇದಾಗಿದೆ.

Udupi: Newly Married Bride Familys 7 Members Tests Positive For Coronavirus

ನವವಧುವಿಗೆ ಜು.6 ರಂದು ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. ಎಂಬತ್ತಕ್ಕೂ ಹೆಚ್ಚು ಮಂದಿ ಮೆಹಂದಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೃಷ್ಣನಗರಿಯಲ್ಲಿ ಹಲವು ದಿನಗಳ ನಂತರ ಕೊರೊನಾ ಪ್ರಕರಣ ಹೆಚ್ಚಳಕೃಷ್ಣನಗರಿಯಲ್ಲಿ ಹಲವು ದಿನಗಳ ನಂತರ ಕೊರೊನಾ ಪ್ರಕರಣ ಹೆಚ್ಚಳ

ಇದೀಗ 3 ಮಕ್ಕಳು, 3 ಮಹಿಳೆಯರ ಸಹಿತ ಏಳು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಸೋಂಕು ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇತರರಿಗೂ ಹರಡುವ ಭೀತಿ ಎದುರಾಗಿದೆ.

English summary
Coronavirus is increasing day by day in Udupi district. Around fifty to sixty cases are being detected, which is a cause for concern for the people of the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X