• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುತ್ರ ವ್ಯಾಮೋಹ ತೊರೆದ ಮೊಯ್ಲಿಯಿಂದ ಕಾರ್ಕಳದಲ್ಲಿ ಹೊಸ ಲಾಬಿ?

|

ಕರಾವಳಿಯ ರಾಜಕೀಯವನ್ನು ಬಹುಮಟ್ಟಿಗೆ ಪ್ರಭಾವಿಸಬಲ್ಲ ಉಡುಪಿಯಲ್ಲಿ ಚುನಾವಣೆ ಕಣ ರಂಗೇರಿದೆ. ಇಲ್ಲಿನ ಐದು ವಿಧಾನಸಭೆ ಕ್ಷೇತ್ರದ ಪೈಕಿ ಗಮನ ಸೆಳೆಯುತ್ತಿರುವ ಕ್ಷೇತ್ರ ಕಾರ್ಕಳ ವಿಧಾನಸಭಾ ಕ್ಷೇತ್ರ. ಕಾರಣ, ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಸಂಸದ, ಕಾಂಗ್ರೆಸ್ಸಿನ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಮಾಡಿರೋ ಟ್ವೀಟ್! ಮೊಯ್ಲಿ ಟ್ವೀಟಿಗೂ, ಕಾರ್ಕಳ ಕ್ಷೇತ್ತಕ್ಕೂ ಎತ್ತಣಿಂದತ್ತಣ ಸಂಬಂಧ ಅಂತೀರಾ?

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಮೊದಲನೆಯದಾಗಿ ಕಾರ್ಕಳ, ವೀರಪ್ಪ ಮೊಯ್ಲಿಯವರ ರಾಜಕೀಯ ಕರ್ಮಭೂಮಿ. ಮೊಯ್ಲಿ ಶಾಸಕರಾಗಿ , ಮುಖ್ಯಮಂತ್ರಿಯಾಗಿ ಆಯ್ಕೆಯಾದದ್ದು ಇದೇ ಕ್ಷೇತ್ರದಿಂದ. ಇದೀಗ ಮೊಯ್ಲಿ ಬೇರೆ ಕ್ಷೇತ್ರಕ್ಕೆ ವಲಸೆ ಹೋಗಿರಬಹುದು, ಆದ್ರೆ ತಮ್ಮ ಪುತ್ರ ಹರ್ಷ ಮೊಯ್ಲಿಯನ್ನು ಇದೇ ಕ್ಷೇತ್ರದ ಮೂಲಕ ರಾಜಕೀಯವಾಗಿ ಬೆಳೆಸುವ ಬಯಕೆ ಮೊಯ್ಲಿಯವರದ್ದು.

ಹಣಕ್ಕಾಗಿ ಟಿಕೆಟ್ ಮಾರಾಟ, ಇಲ್ಲಿ ಯಾರು ಸಭ್ಯರು ನೀವೇ ಹೇಳಿ

ಕಳೆದ ಕೆಲ ತಿಂಗಳಿನಿಂದ ವೀರಪ್ಪ ಮೊಯ್ಲಿ ಮಗ ಹರ್ಷ ಮೊಯ್ಲಿ ಕಾರ್ಕಳ ಕ್ಷೇತ್ರದ ತುಂಬ ಓಡಾಡಿ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದರು. ಮಾಜಿ ಶಾಸಕ ಗೋಪಾಲ್ ಭಂಡಾರಿ ಮತ್ತು ಗುತ್ತಿಗೆದಾರ ಮುನಿಯಾಲು ಉದಯಕುಮಾರ್ ಶೆಟ್ಟಿ ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಗಳು.

ಆದ್ರೆ ಯಾವಾಗ ಹರ್ಷ ಮೊಯ್ಲಿ ಎಂಟ್ರಿ ಕೊಟ್ಟರೋ ,ಈ ಕ್ಷೇತ್ರದ ಚಿತ್ರಣವೇ ಬದಲಾಗಿ ಹೋಗಿತ್ತು. ಇದೇ ಹೊತ್ತಿಗೆ ಮೊಯ್ಲಿ ಮಾಡಿದ ಟ್ವೀಟ್ ಒಂದು ಎಐಸಿಸಿ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ ಮಾಡಿತ್ತು. ಅದೇನಂದ್ರೆ ಕಾಂಗ್ರೆಸ್ ನಲ್ಲಿ ಗುತ್ತಿಗೆದಾರರಿಗೆ ಮಣೆ ಹಾಕಲಾಗುತ್ತೆ. ಲೋಕೋಪಯೋಗಿ ಮಂತ್ರಿ ಗುತ್ತಿಗೆದಾರರ ಪರ ಇದ್ದಾರೆ. ಕಾಂಗ್ರೆಸ್ ನಲ್ಲಿ ಹಣ ಬಲ ನಿರ್ಣಾಯಕ ಪಾತ್ರ ವಹಿಸುತ್ತೆ ಎಂಬರ್ಥದ ಮೊಯ್ಲಿಯವರ ಟ್ವೀಟ್ ಕಾಂಗ್ರೆಸ್ ವರಿಷ್ಠರ ಕಣ್ಣು ಕೆಂಪು ಮಾಡಿತ್ತು.

ಕಾರ್ಕಳ ಕ್ಷೇತ್ರ ದಿಂದ ಕಣಕ್ಕಿಳಿಯಲಿದ್ದಾರೆ ಹರ್ಷ ಮೊಯ್ಲಿ?

ಹೀಗೆ ತಮ್ಮ ಪುತ್ರನಿಗೆ ಶತಾಯಗತಾಯ ಟಿಕೆಟ್ ಕೊಡಿಸಲು ಲಾಬಿ ಮಾಡುತ್ತಿದ್ದ ವೀರಪ್ಪ ಮೊಯ್ಲಿ, ಟ್ವೀಟ್ ವಿವಾದದ ಬಳಿಕ ತಣ್ಣಗಾದ್ರು. ತಮ್ಮ ಪುತ್ರ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಅಂತ ಚುನಾವಣೆ ಸಮಿತಿ ಮುಂದೆಯೇ ಹೇಳಿಕೊಂಡರು.

ವೀರಪ್ಪ ಮೊಯ್ಲಿ ಟ್ವೀಟಾಸ್ತ್ರ ಸ್ವಾಗತಿಸಿದ ಶಾಸಕ ಸುರೇಶ್ ಕುಮಾರ್

ಈಗ ಲೇಟೆಸ್ಟ್ ಸುದ್ದಿ ಏನಂದ್ರೆ , ವೀರಪ್ಪ ಮೊಯ್ಲಿಯವರು ಮಾಜಿ ಶಾಸಕ ಗೋಪಾಲ್ ಭಂಡಾರಿಯವರಿಗೆ ಟಕೆಟ್ ಕೊಡಿಸಲು ಇನ್ನಿಲ್ಲದ ಲಾಬಿ ಮಾಡುತ್ತಿದ್ದಾರೆ. ಹೌದು, ತಮ್ಮ ಪುತ್ರನಿಗೆ ಸಿಗದಿದ್ದರೂ ಚಿಂತೆ ಇಲ್ಲ. ಆದ್ರೆ ಇನ್ನೋರ್ವ ಪ್ರಬಲ ಆಕಾಂಕ್ಷಿ ಗುತ್ತಿಗೆದಾರ ಮುನಿಯಾಲು ಉದಯಕುಮಾರ್ ಶೆಟ್ಟರಿಗೆ ಟಿಕೆಟ್ ಸಿಗದಂತೆ ಮಾಡಲು ಮೊಯ್ಲಿಯವರು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ ಎನ್ನುವ ಸುದ್ದಿಯಿದೆ.

ಹೀಗಾಗಿ ಕಾರ್ಕಳದ ಮಟ್ಟಿಗೆ ಹೇಳೋದಾದರೆ, ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಿ ಪರಿಣಮಿಸಿದೆ. ಟಿಕೆಟ್ ಆಸೆ ಕೈಬಿಟ್ಟಿದ್ದ ಮಾಜಿ ಶಾಸಕ ಗೋಪಾಲ್ ಭಂಡಾರಿ, ಮೊಯ್ಲಿ ತಮ್ಮ ಪರ ನಿಂತಿರೋದರಿಂದ ಖುಷಿಗೊಂಡಿದ್ದಾರೆ. ಒಟ್ಟಾರೆ ಹೇಳೋದಾದರೆ ಎಐಸಿಸಿ ಮಟ್ಟದಲ್ಲಿ ಮೊಯ್ಲಿ ತಮ್ಮ ಪ್ರಭಾವ ಇನ್ನೂ ಉಳಿಸಿಕೊಂಡಿದ್ದಾರೆಯೇ ಎಂಬುದು ಕೆಲ ದಿನಗಳಲ್ಲೇ ಗೊತ್ತಾಗಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New political lobby in Karkala in Udupi district by senior Congress leader Veerappa Moily. There are two leaders fighting for the congress ticket in Karkala constituency one is Muniyal Uday Kumar Shetty and another one is Gopal Bhandary. Moily supporting and fighting for the ticket to Gopal Bhandary.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more