ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶಕ್ಕೆ ಉಡುಪಿ ನೀಡಿದ ಕೊಡುಗೆಯನ್ನು ಹಾಡಿ ಹೊಗಳಿದ ನರೇಂದ್ರ ಮೋದಿ

By Manjunatha
|
Google Oneindia Kannada News

ಉಡುಪಿ, ಮೇ 01: ನರೇಂದ್ರ ಮೋದಿ ಅವರೆಂತ ಸಂಹವನಕಾರ ಎಂಬುದನ್ನು ಹೇಳಬೇಕಾಗಿಲ್ಲ ಅದು ಅವರ ವಿರೋಧಿಗಳೂ ಒಪ್ಪಿಕೊಳ್ಳುವ ವಿಷಯ. ಅವರ ಸಂವಹನಾ ಚತುರತೆಯನ್ನು ಅವರು ಮತ್ತೆ ಸಾಬೀತು ಮಾಡುತ್ತಲೇ ಇರುತ್ತಾರೆ. ಇಂದು ಕೂಡಾ ಹಾಗೆಯೇ ಆಯಿತು.

ಉಡುಪಿಯಲ್ಲಿ ಬಿಜೆಪಿಯ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಭಾಷಣ ಕೇಳಲು ಬಂದಿದ್ದ ಜನ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಉಡುಪಿಯ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ವೈವಿಧ್ಯವನ್ನು ತೆರೆದಿಟ್ಟರು.

ಉಡುಪಿಯಲ್ಲಿ ಶ್ರೀಕೃಷ್ಣನ ಜಪ ಮಾಡಿ ಕಾಂಗ್ರೆಸ್‌ ಅನ್ನು ಜರಿದ ಮೋದಿಉಡುಪಿಯಲ್ಲಿ ಶ್ರೀಕೃಷ್ಣನ ಜಪ ಮಾಡಿ ಕಾಂಗ್ರೆಸ್‌ ಅನ್ನು ಜರಿದ ಮೋದಿ

ಉಡುಪಿ ಸಂಸ್ಕೃತಿಯ ಭಾಗವೇ ಆಗಿರುವ ತುಳು ಭಾಷೆಯಲ್ಲಿ ಮಾತು ಪ್ರಾರಂಭಿಸಿದ ಮೋದಿ, ಮೊದಲಿಗೆ ನೆನೆದದ್ದು ಶ್ರೀಕೃಷ್ಣನನ್ನು, ಅದರ ನಂತರ ಕನಕದಾಸರನ್ನು. ಇವೆರಡೂ ಉಡುಪಿಯರ ಪಾಲಿಗೆ ಕೇವಲ ಹೆಸರುಗಳಲ್ಲ ಉಡುಪಿಯ ಅಸ್ಮಿತೆ ಎಂಬುದನ್ನು ಮೋದಿ ಅರಿತುಕೊಂಡಿದ್ದಾರೆ.

ಚಿತ್ರಗಳಲ್ಲಿ ನೋಡಿ: ಕರ್ನಾಟಕದಲ್ಲಿ ಶುರುವಾಯ್ತು ಮೋದಿ ಮೋಡಿ

ಅದರ ನಂತರ ಪರಶುರಾಮನ ಸೃಷ್ಟಿಯ ಭೂಮಿ ಕರಾವಳಿ, ಅಷ್ಟಮಠದ ಯತಿ ಪರಂಪರೆಗೆ ಪ್ರಣಾಮಗಳು, ಮಧ್ವಾಚಾರ್ಯರಿಗೆ ನನ್ನ ಪ್ರಣಾಮಗಳು, ಅಷ್ಟಮಠದ ಗುರು ಪರಂಪರೆಗೆ ಭಕ್ತಿ ಪೂರ್ವಕ ನಮನ ಹೀಗೆ ಉಡುಪಿಯ ಧಾರ್ಮಿಕ ಐತಿಹ್ಯವನ್ನು ಮೋದಿ ತೆರೆದಿಟ್ಟರು.

ದಿವಾನ್ ಶೆಟ್ಟಿ ಅವರ ಸ್ಮರಣೆ

ದಿವಾನ್ ಶೆಟ್ಟಿ ಅವರ ಸ್ಮರಣೆ

ಉಡುಪಿಯ ಇತಿಹಾಸದ ವಿಷಯ ತೆಗೆದರು, ಅವರು ಉಡುಪಿಯು ಬ್ಯಾಂಕಿಂಗ್ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಪ್ರಸ್ತಾಪ ಮಾಡಿದರು. ಬ್ಯಾಂಕಿಂಗ್‌ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಉಡುಪಿಯವರಾದ ದಿವಾನ್ ಶೆಟ್ಟಿ, ಹುಸೇನ್ ಸಾಬ್ ಅವರ ಹೆಸರು ನೆನೆದ ಮೋದಿ ಅವರು ಕೇಂದ್ರ ಬ್ಯಾಂಕಿಂಗ್‌ ಕ್ಷೇತ್ರವನ್ನು ಜನರಿಗೆ ತಲುಪಿಸಿದ ಬಗೆಯನ್ನು ವಿವರಸಿದರು. ಸ್ಥಳೀಯತೆಯನ್ನು ಆಧಾರವಾಗಿಟ್ಟುಕೊಂಡು ತಮ್ಮ ಸರ್ಕಾರದ ಸಾಧನೆಯನ್ನು ಪರಿಣಾಮಕಾರಿಗಿ ಮೋದಿ ಪ್ರೇಕ್ಷಕರಿಗೆ ಧಾಟಿಸಿದರು.

ಯುವಕರಿಂದ ಭಾರಿ ಕರತಾಡನ

ಯುವಕರಿಂದ ಭಾರಿ ಕರತಾಡನ

ಯುವಕರನ್ನು ಮಾತಿನ ಮೂಲಕ ಸೆಳೆಯುವುದು ಮೋದಿಗೆ ಕರಗತ. ಉಡುಪಿಯಲ್ಲಿ ಅದಕ್ಕಾಗಿ ಬಳಸಿದ್ದು ಅವರು ಕ್ರೀಡೆಯನ್ನು ಮತ್ತು ಶಿಕ್ಷಣವನ್ನು. ಇತ್ತೀಚೆಗಷ್ಟೆ ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಕ್ರೀಡಾಕೂಟದ ಮೊದಲ ಪದಕ ಗೆದ್ದುಕೊಟ್ಟ ಗುರುರಾಜ್‌ ಅವರನ್ನು ಮಾತಿನಲ್ಲಿ ತಂದ ಅವರು ಯುವಜನರಿಂದ ಅಪಾರ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು.

ಮಕ್ಕಳ ಮೂಲಕ ಪೋಷಕರಿಗೆ ಗುರಿ

ಮಕ್ಕಳ ಮೂಲಕ ಪೋಷಕರಿಗೆ ಗುರಿ

ಉಡುಪಿಯ ವಿಶೇಷತೆ ಅದರ ಶಿಕ್ಷಣ ಪದ್ಧತಿ ಅದರ ಬಗ್ಗೆ ಉಡುಪಿಗರಿಗೆ ಅಪಾರ ಹೆಮ್ಮೆ ಇದನ್ನೂ ತಮ್ಮ ಮಾತಿನಲ್ಲಿ ತಂದ ಮೋದಿ. ಉಡುಪಿಯ ಬುದ್ಧಿವಂತ ಮಕ್ಕಳನ್ನು ಹಾಡಿ ಹೊಗಳಿದರು. 'ನಿಮ್ಮ ಮಕ್ಕಳನ್ನು ನೋಡಿದರೆ ಹೆಮ್ಮೆ ಆಗುತ್ತದೆ' ಎಂದು ಪೋಷಕರನ್ನು ಮಕ್ಕಳ ಮೂಲಕ ತಲುಪಿದರು.

ದೇವೇಗೌಡರು ಮನೆಗೆ ಬಂದಾಗ ಅವರ ಕಾರಿನ ಬಾಗಿಲು ತೆಗೆಯುತ್ತೇನೆ: ಮೋದಿದೇವೇಗೌಡರು ಮನೆಗೆ ಬಂದಾಗ ಅವರ ಕಾರಿನ ಬಾಗಿಲು ತೆಗೆಯುತ್ತೇನೆ: ಮೋದಿ

ಜನಸಂಘದೊಂದಿಗಿನ ನಂಟು ತೆರೆದಿಟ್ಟ ಮೋದಿ

ಜನಸಂಘದೊಂದಿಗಿನ ನಂಟು ತೆರೆದಿಟ್ಟ ಮೋದಿ

ಉಡುಪಿ ಹಾಗೂ ಬಿಜೆಪಿಗೆ ಇರುವ ಹಳೆಯ ನಂಟೊಂದನ್ನು ಮತ್ತೆ ಉಡುಪಿ ಜನತೆಗೆ ನೆನಸಿದ ಮೋದಿ ನಲವತ್ತು ವರ್ಷದ ಹಿಂದೆಯೇ ಉಡುಪಿ ಜನತೆ ಬಿಜೆಪಿಯ ಮಾತೃ ಪಕ್ಷವಾದ ಜನಸಂಘವನ್ನು ಗೆಲ್ಲಿಸಿದ್ದರು ಇನ್ನು ಈ ಬಾರಿ ಗೆಲ್ಲಿಸದೇ ಇರುವರೇ ಎಂದು. ಬಿಜೆಪಿಯೊಂದಿಗೆ ಉಡುಪಿಗೆ ಇರುವ ಸಂಬಂಧವನ್ನು ಜನರಿಗೆ ತಿಳಿ ಹೇಳಿದರು.

ಉಡುಪಿ ಮಾತಿನಲ್ಲಿ ಆಪ್ತಪೆ ಹೆಚ್ಚಿತ್ತು

ಉಡುಪಿ ಮಾತಿನಲ್ಲಿ ಆಪ್ತಪೆ ಹೆಚ್ಚಿತ್ತು

ಉಡುಪಿಯ ಬಗ್ಗೆ ಬಹಳಷ್ಟು ವಿಷಯವನ್ನು ಮಾತನಾಡಿದ ಮೋದಿ ಅವರು ಉಡುಪಿಯನ್ನು ಹೊಗಳುತ್ತಲೇ ಕಾಂಗ್ರೆಸ್‌ ಅನ್ನು ಅವಕಾಶ ಸಿಕ್ಕಾಗೆಲ್ಲಾ ಕುಟುಕಿದರು. ಒಟ್ಟಿನಲ್ಲಿ ಉಡುಪಿಗೆ ಮುಂಚೆ ಚಾಮರಾಜನಗರದಲ್ಲಿ ಮೋದಿ ಅವರು ಮಾತನಾಡಿದ ರೀತಿಗೂ ಉಡುಪಿಯಲ್ಲಿ ಮಾತನಾಡಿದ ರೀತಿಗೂ ಬಹಳ ವ್ಯತ್ಯಾಸವಿತ್ತು. ಉಡುಪಿಯಲ್ಲಿ ಆಡಿದ ಮಾತಿನಲ್ಲಿ ಆತ್ಮೀಯತೆ ಇತ್ತು.

English summary
Prime minister Narendra Modi praises Udupi in its speech in BJP rally. He said Udupi people are viser than any other district people of the state. He reminds god Krishna, Kanakdasa. great people Divan Shetty and others of Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X