ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಶ್ರೀಕೃಷ್ಣನ ಜಪ ಮಾಡಿ ಕಾಂಗ್ರೆಸ್‌ ಅನ್ನು ಜರಿದ ಮೋದಿ

By Manjunatha
|
Google Oneindia Kannada News

ಉಡುಪಿ, ಮೇ 01: ಚಾಮರಾಜನಗರದ ಬೃಹತ್ ಬಿಜೆಪಿ ಸಮಾವೇಶ ಮುಗಿಸಿ ನರೇಂದ್ರ ಮೋದಿ ಅವರು ಉಡುಪಿಗೆ ಆಗಮಿಸಿದ್ದಾರೆ.

* ಕನ್ನಡದಲ್ಲಿ ಭಾಷಣ ಆರಂಭಿಸಿದ ನರೇಂದ್ರ ಮೋದಿ, ಕೃಷ್ಣ ಜಪ ಮಾಡಿದ ಮೋದಿ
* ಹಿಂದಿ ಭಾಷಣದ ಕನ್ನಡ ಭಾಷಾಂತರ ಬೇಡ ಎಂದ ಕಾರ್ಯಕರ್ತರು, ಹಿಂದಿಯಲ್ಲಿ ಭಾಷಣ ಮುಂದುವರೆಸಿದ ಮೋದಿ
* ನಮ್ಮ ನಿಮ್ಮ ನಡುವಿನ ಪ್ರೀತಿಗೆ ಭಾಷೆ ಅಡ್ಡಿ ಪಡಿಸುವುದಿಲ್ಲ ಎಂದು ಚಪ್ಪಾಳೆ ಗಿಟ್ಟಿಸಿದ ಮೋದಿ
* ಪರುಶರಾಮ, ಶ್ರೀಕೃಷ್ಣ, ಪ್ರಕೃತಿ ಉಲ್ಲೇಖಗಳೊಂದಿಗೆ ಮುಂದುವರೆದ ಮೋದಿ ಮಾತು
* ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದ ಉಡುಪಿಯ ಗುರುರಾಜ್‌ನ ಉಲ್ಲೇಖಿಸಿದ ಮೋದಿ, ಗುರುರಾಜ್ ಉಡುಪಿಯ ಹೆಸರನ್ನು ವಿಶ್ವವಿಖ್ಯಾತಿ ಮಾಡಿದ್ದಾರೆ ಎಂದರು.
* ಉಡುಪಿ ಮತ್ತು ಜನಸಂಘದ ಸಂಬಂಧ ಇಂದು ನಿನ್ನೆಯದಲ್ಲ, ಅದು ಐತಿಹಾಸಿಕ ಪರಂಪರೆ.
* ಬ್ಯಾಂಕಿಂಗ್‌ ಕ್ಷೇತ್ರಕ್ಕೆ ವಿಶೇಷ ಯೋಗಧಾನ ಕೊಟ್ಟ ಉಡುಪಿಯ ದಿವಾನ್ ಶೆಟ್ಟಿ, ಹಾಜಿ ಸಾಹೇಬ್ ಅವರುಗಳನ್ನು ನೆನೆದ ಮೋದಿ

* ನಿರುದ್ಯೋಗ ಯುವಕರಿಗೆ, ರೈತರಿಗೆ ಬ್ಯಾಂಕ್‌ನ ಬಾಗಿಲುಗಳು ಬಂದ್ ಆಗಿದ್ದವು, ಆದರೆ ನಾವು ಬಂದು ಸಂಪೂರ್ಣ ಸ್ಥಿತಿಯನ್ನೇ ಬದಲಾಯಿಸಿಬಿಟ್ಟಿವಿ.

* ಮುದ್ರಾ ಯೋಜನೆಯಿಂದ 12000 ಕೋಟಿ ಸಾಲ ನೀಡಿದ್ದೇವೆ, ಕರ್ನಾಟಕವೊಂದರಲ್ಲಿ 1.50 ಜನರಿಗೆ ಸಾಲ ನೀಡಲಾಗಿದೆ.
* ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸೆಗೆ ಅವಕಾಶ ಇದೆಯೇ, ರಾಜಕೀಯ ವಿಷಯದಲ್ಲಿ ಭಿನ್ನ ಅಭಿಪ್ರಾಯ ಹೊಂದಿದವರನ್ನು ಕೊಲ್ಲಲಾಗುತ್ತದೆಯೇನು. ಆದರೆ 24 ಬಿಜೆಪಿಯ ಕಾರ್ಯಕರ್ತರನ್ನು ಕೊಲ್ಲಲಾಯಿತು.
* ಕರ್ನಾಟಕದ ಶಾಂತಿಯನ್ನು ಕಾಂಗ್ರೆಸ್‌ ಕದಡಿಬಿಟ್ಟಿದೆ, ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಹೆಸರಿಗೆ ಕಾಂಗ್ರೆಸ್ ಮಸಿ ಬಳಿದಿದೆ.

* ದೇವೇಗೌಡರು ನಮ್ಮ ಮನೆಗೆ ಅವರ ಕಾರಿನ ಬಾಗಿಲನ್ನು ನಾನೇ ತೆಗೆಯುತ್ತೇನೆ, ಅವರು ಹೊರಡುವಾಗ ನಾನೇ ಹೋಗಿ ಅವರನ್ನು ಕಾರು ಹತ್ತಿಸುತ್ತೇನೆ
* ದೇವೇಗೌಡ ಅವರನ್ನು ಹೊಗಳಿ ಅಟ್ಟಕ್ಕೇರಿಸಿದ ನರೇಂದ್ರ ಮೋದಿ, ಅವರು ಮಣ್ಣಿನ ಮಗ, ಅವರ ಸೇವೆಯನ್ನು ದೇಶ ಮರೆಯುವಂತೆಯೇ ಇಲ್ಲ

* ಕಾಂಗ್ರೆಸ್ ಪಕ್ಷ ದೇವೇಗೌಡರನ್ನೇ ಅವಮಾನಿಸುತ್ತಿದೆ, ದೇವೇಗೌಡ ಅವರು ದೆಹಲಿಗೆ ಬಂದಾಗಲೆಲ್ಲಾ, ಅವರು ನನ್ನ ಸಮಯ ಕೇಳಿದಾಗಲೆಲ್ಲಾ ಅವರನ್ನು ನಾನು ಭೇಟಿ ಮಾಡಿದ್ದೇನೆ, ಅವರಿಗೆ ನನ್ನ ಸಂಪೂರ್ಣ ಗೌರವ ಅರ್ಪಿಸುತ್ತೇನೆ.

* ಕರ್ನಾಟಕದಲ್ಲಿ ಲೋಕಾಯುಕ್ತದ ಮೇಲೆ ಹಲ್ಲೆ ಆಯಿತು, ಇಲ್ಲಿನ ಪೊಲೀಸ್ ಅಧಿಕಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದರು.
* ಮಾಧ್ಯಮದವರು ಕರ್ನಾಟಕದಲ್ಲಿ ನಡೆದ ಕೆಲವು ವಿಷಯಗಳನ್ನು ತೋರಿಸದಿದ್ದರೂ ಸಾಮಾಜಿಕ ಜಾಲತಾಣಗಳು ಆ ಕೆಲಸ ಮಾಡಿವೆ.

* ಕರ್ನಾಟಕದಲ್ಲಿ ಲೋಕಾಯುಕ್ತದ ಮೇಲೆ ಹಲ್ಲೆ ಆಯಿತು, ಇಲ್ಲಿನ ಪೊಲೀಸ್ ಅಧಿಕಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದರು.
* ಮಾಧ್ಯಮದವರು ಕರ್ನಾಟಕದಲ್ಲಿ ನಡೆದ ಕೆಲವು ವಿಷಯಗಳನ್ನು ತೋರಿಸದಿದ್ದರೂ ಸಾಮಾಜಿಕ ಜಾಲತಾಣಗಳು ಆ ಕೆಲಸ ಮಾಡಿವೆ.
* ಲ್ಯಾಂಡ್ ಮಾಫಿಯಾ, ಸ್ಯಾಂಡ್ ಮಾಫಿಯಾ ಮಾಡುವವರಿಗೆ ಸರ್ಕಾರದ ಬೆಂಬಲ ಇರುವುದು ಇಲ್ಲಿನ ನಾಯಿ, ಬೆಕ್ಕುಗಳಿಗೂ ಗೊತ್ತಿದೆ. ಇಂತಹಾ ಮಾಫಿಯಾಗಳನ್ನು ಸಾಕುವ ಸರ್ಕಾರ ಇರಬೇಕಾ?.

* ಕರ್ನಾಟಕದಲ್ಲಿ ಸಮೃದ್ಧವಾದ ತೀರಗಳಿವೆ, ಸಾಗರ ಮಾಲ ಯೋಜನೆ ಮೂಲಕ ತೀರಗಳ ಅಭಿವೃದ್ಧಿ ಮಾಡುತ್ತಿದ್ದೇವೆ, ಮೀನುಗಾರ ಜೀವನ ಸುಧಾರಣೆ ಮಾಡುತ್ತಿದ್ದೇವೆ. ಅವರಿಗೆ ಸೂಕ್ತ ಮೂಲ ಸೌಕರ್ಯ ಒದಗಿಸುತ್ತಿದ್ದೇವೆ.

* ಎಲ್ಲ ಮತದಾರರ ಮನೆ ತಲುಪಿ, ಬಿಜೆಪಿ ಪರ ಪ್ರಚಾರ ಮಾಡಿ, ಮತದಾರರನ್ನು ಪೋಲಿಂಗ್ ಬೂತ್‌ ವರೆಗೂ ಕರೆತರುವ ಜವಾಬ್ದಾರಿ ನಿಮ್ಮದು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಮೋದಿ.

* ಸ್ವಚ್ಛ ಸುಂದರ ಕರ್ನಾಟಕ ನಿರ್ಮಿಸೋಣ, ಬನ್ನಿ ಎಲ್ಲರೂ ಕೈಜೋಡಿಸಿ, ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ, ಎಲ್ಲರಿಗೂ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿ ಮಾತು ಮುಗಿಸಿದ ನರೇಂದ್ರ ಮೋದಿ.

English summary
Prime minister arrives to Udupi after finishing Chamarajnagar BJP rally. He will address mass rally in Udupi and may goto Krinsha Mutt. Narendra Modi addressing many rally's in Karnataka today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X