ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ವಿಶೇಷ; 151 ಅನಾಥ ಶವದ ಅಂತ್ಯ ಸಂಸ್ಕಾರ ಮಾಡಿದ ನಾಗರಿಕ ಸಮಿತಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 20; ನಿಜವಾದ ಅರ್ಥದಲ್ಲಿ 24*7 ಸಮಾಜ ಸೇವೆಯಲ್ಲಿ ತೊಡಗಿರುವ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಇಂದು ತನ್ನ ಸೇವೆಯಲ್ಲಿ ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಿತು.

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ 4 ಅಪರಿಚಿತ ಶವಗಳ ಅಂತ್ಯಸಂಸ್ಕಾರವನ್ನು ನಡೆಸುವ ಮೂಲಕ ಸಮಿತಿಯು ನೂರೈವತ್ತಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯಸಂಸ್ಕಾರ ಮಾಡಿದ ಅಪರೂಪದ ಮಾನವೀಯ ಸಾಧನೆಗೆ ಭಾಜನವಾಯಿತು.

ಉಡುಪಿ; ರಸ್ತೆ ಗುಂಡಿ ಮುಚ್ಚಲು ಆಗ್ರಹ, ಗಿಡ ನೆಟ್ಟು ಪ್ರತಿಭಟನೆ ಉಡುಪಿ; ರಸ್ತೆ ಗುಂಡಿ ಮುಚ್ಚಲು ಆಗ್ರಹ, ಗಿಡ ನೆಟ್ಟು ಪ್ರತಿಭಟನೆ

ನಿತ್ಯಾನಂದ ಒಳಕಾಡು ಇದರ ಹಿಂದಿನ ರೂವಾರಿ. ನಿರ್ಗತಿಕರು, ಬಡವರು, ರೋಗಿಗಳಿಗಾಗಿ ಉಚಿತ ಅಂಬ್ಯುಲೆನ್ಸ್ ಸೇವೆ ನೀಡುತ್ತಿರುವ ಜಿಲ್ಲಾ ನಾಗರಿಕ‌ ಸಮಿತಿಯು, ಹಲವು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಉಡುಪಿ; ಕಟಪಾಡಿಯಲ್ಲಿ ಓವರ್ ಪಾಸ್‌ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ ಉಡುಪಿ; ಕಟಪಾಡಿಯಲ್ಲಿ ಓವರ್ ಪಾಸ್‌ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ

 Nagarika Samithi Performed 151 Orphan Dead Bodies Last Rites

ಅನಾರೋಗ್ಯಕ್ಕೀಡಾದ ನಿರ್ಗತಿಕರ ಸೇವೆ, ವಾರಸುದಾರರಿಲ್ಲದ ಶವಗಳ ವಿಲೇವಾರಿ ಕಾರ್ಯವನ್ನು ಹಲವು ಸಮಯಗಳಿಂದ ಮಾಡುತ್ತಾ ಬಂದಿದೆ. ಇಂದು ಒಂದೇ ದಿನ ಜಿಲ್ಲಾ ನಾಗರೀಕ ಸಮಿತಿ 4 ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸಿತು.

ಉಡುಪಿ; ಕೊಲೆ ಆರೋಪ, ಗ್ರಾಮ ಪಂಚಾಯತಿ ಅಧ್ಯಕ್ಷನ ಬಂಧನ ಉಡುಪಿ; ಕೊಲೆ ಆರೋಪ, ಗ್ರಾಮ ಪಂಚಾಯತಿ ಅಧ್ಯಕ್ಷನ ಬಂಧನ

ಬೀಡಿನಗುಡ್ಠೆ ದಫನ ಭೂಮಿಯಲ್ಲಿ ಕಾನೂನಿನ ಪ್ರಕ್ರಿಯೆಗಳು ನಡೆದ ಬಳಿಕ ಪೊಲೀಸರ ಸಮಕ್ಷಮದಲ್ಲಿ ಗೌರವಪೂರ್ವಕವಾಗಿ ಈ ಕಾರ್ಯ ನೆರವೇರಿಸಲಾಗಿದೆ. ಇದು ನಾಗರಿಕ ಸಮಿತಿಯು ನಡೆಸಿರುವ ಇದುವರೆಗಿನ 151ನೇ ಅನಾಥ ಶವಗಳ ಅಂತ್ಯಸಂಸ್ಕಾರವಾಗಿದೆ.

 Nagarika Samithi Performed 151 Orphan Dead Bodies Last Rites

ಶವಗಳ ದಫನ ಕಾರ್ಯದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಮಾಜಸೇವಕ ಕ್ರಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಹಾಗೂ ಅವರ ಅಭಿಮಾನಿ ಬಳಗದ ಸದಸ್ಯರು, ರಾಮದಾಸ್ ಪಾಲನ್, ಸಾಜಿ ಅಜ್ಜರಕಾಡು ಭಾಗಿಗಳಾದರು.

Recommended Video

Ramesh Jarkiholi ಸಿಡಿ ಪ್ರಕರಣಕ್ಕೆ ಪದ್ಮಶ್ರೀ Indira Jaising | Oneindia Kannada

ನಗರ ಠಾಣೆಯ ಪೊಲೀಸ್ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ವಿಶ್ವಜಿತ್, ಆದರ್ಶ್ ಕಾನೂನು ಪ್ರಕ್ರಿಯೆ ನಡೆಸಿದರು. ಜಿಲ್ಲಾಸರ್ಜನ್ ಮಧುಸೂದನ್ ನಾಯಕ್, ಪ್ಲವರ್ ಸ್ಟಾಲ್ ವಿಷ್ಣು, ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಸುಶೀಲಾ ರಾವ್ ಉಡುಪಿ, ಹಾಗೂ ನಗರಾಡಳಿತದವರು ಈ ಮಾನವೀಯ ಕಾರ್ಯಕ್ಕೆ ಸಹಕರಿಸಿದ್ದಾರೆ.

English summary
Udupi Zilla Nagarika Samithi performed 151 orphan dead bodies last rites. Social worker Nityananda Volakadu behind the social activities of samithi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X