ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತಷ್ಟು ದೇವಸ್ಥಾನಗಳು ಆನ್ ಲೈನ್ ಸೇವಾ ವ್ಯಾಪ್ತಿಗೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 23: ನಾಲ್ಕನೇ ಹಂತದ ಲಾಕ್ ಡೌನ್ ನಲ್ಲೂ ದೇವಸ್ಥಾನಗಳನ್ನು ತೆರೆಯಲು ಅವಕಾಶ ನೀಡಿಲ್ಲದ್ದರಿಂದ ಭಕ್ತರಿಗೆ ಆನ್‌ಲೈನ್‌ನಲ್ಲೇ ದೇವರ ದರ್ಶನ ಮಾಡಿಸಲು ವ್ಯವಸ್ಥೆ ಮಾಡುವ ಕುರಿತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದರು.

Recommended Video

ದೇವಸ್ಥಾನಕ್ಕೆ ಹೋಗ್ಬೆಕಾಗಿಲ್ಲ ಇನ್ಮುಂದೆ ದೇವ್ರೇ ನಿಮ್ಮ ಮನೆಗೆ ಬರ್ತಾನೆ | Oneindia Kannada

ಇದೀಗ ಮತ್ತಷ್ಟು ದೇವಸ್ಥಾನಗಳನ್ನು ಆನ್ ಲೈನ್ ಸೇವೆಯ ವ್ಯಾಪ್ತಿಗೆ ಇಲಾಖೆ ತರಲಾಗುತ್ತಿದೆ ಎಂದು ಹೇಳಿದ್ದಾರೆ. "ಆನ್ ಲೈನ್ ಸೇವೆ ಒದಗಿಸಿರುವ ಕುರಿತು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಆನ್ ಲೈನ್ ಸೇವೆ ನಮ್ಮ ಇಲಾಖೆಯಲ್ಲಿ ಈ ಮೊದಲೇ ಇದೆ. ಕೊಲ್ಲೂರು ದೇವಸ್ಥಾನದಲ್ಲಿ ಕಳೆದ ವರ್ಷ ಮೂರು ಸಾವಿರ ಆನ್ ಲೈನ್ ಸೇವೆಗಳು ಬಂದಿವೆ. ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಆನ್ ಲೈನ್ ಸೇವೆಯಿದೆ. ಕಳೆದ ವರ್ಷ ಆನ್ ಲೈನ್ ಸೇವೆಯಿಂದ 49.50 ಲಕ್ಷ ರುಪಾಯಿ ಜಮಾ ಆಗಿದೆ" ಎಂದು ಮಾಹಿತಿ ನೀಡಿದರು.

ಕೊರೊನಾಕ್ಕೆ ಕಂಗೆಟ್ಟ ದೇವರುಗಳು: ಆನ್‌ಲೈನ್‌ನಲ್ಲೇ ದರ್ಶನ ನೀಡಲು ತಯಾರಿ!ಕೊರೊನಾಕ್ಕೆ ಕಂಗೆಟ್ಟ ದೇವರುಗಳು: ಆನ್‌ಲೈನ್‌ನಲ್ಲೇ ದರ್ಶನ ನೀಡಲು ತಯಾರಿ!

More Temples To Add For Online Puja Service Said Kota Srinivasa Pujari

ಲಾಕ್ ಡೌನ್ ನಿಂದ ಭಕ್ತರಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹರಕೆ ಹೊತ್ತ ಭಕ್ತರಿಗೆ ಆನ್ ಲೈನ್ ಸೇವೆಯಿಂದ ಅನುಕೂಲವಾಗಲಿದೆ. ಭಕ್ತರಿಗೆ ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ, ಅವರ ಕೋರಿಕೆ ಹಿನ್ನೆಲೆಯಲ್ಲಿ ಆನ್ ಲೈನ್ ಆರಂಭಿಸಿದ್ದೇವೆ. ಲಾಕ್ ಡೌನ್ ವರೆಗಾದರೂ ಆನ್ ಲೈನ್ ಸೇವೆ ಅಗತ್ಯವಿದೆ. ದೇವಸ್ಥಾನಗಳಿಗೆ ಬಾಗಿಲು ಹಾಕಿದೆ, ಪೂಜೆ ಆಗುತ್ತಿಲ್ಲ ಎಂದು ಸುದ್ದಿಯಾಗುತ್ತಿದೆ. ಎಲ್ಲಾ ದೇವಸ್ಥಾನಗಳನ್ನು ಸಾಂಪ್ರದಾಯಿಕ ಪೂಜೆ ನಡೆಯುತ್ತದೆ" ಎಂದು ಹೇಳಿದ್ದಾರೆ.

ಲಾಕ್ ಡೌನ್ ಮುಗಿದ ನಂತರವೇ ದೇವಸ್ಥಾನ ತೆರೆಯುವ ಅನಿವಾರ್ಯತೆ ಇದೆ ಎಂದೂ ತಿಳಿಸಿದ್ದಾರೆ.

English summary
"We will add few more temples to online puja service" said minister srinivasa pujari in udupi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X