ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಜಿಲ್ಲೆಯಲ್ಲಿ ಮಳೆ ಆರ್ಭಟ: ಚರಂಡಿಗೆ ಬಿದ್ದು ಮಹಿಳೆ ಸಾವು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್ 06: ಉಡುಪಿ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ನಗರದ ನಿಟ್ಟೂರು-ಹನುಮಂತ ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮಳೆ ನೀರು ಹರಿಯುತ್ತಿದ್ದ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ.

Recommended Video

Kabiniಯಲ್ಲಿ ಬಹಳ ಮಳೆ , ಪ್ರವಾಹದ ಭೀತಿಯಲ್ಲಿ Nanjangudu

ಕುಂದಾಪುರ ತಾಲ್ಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿಯೇ ಇದ್ದು, ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದಲ್ಲಿ ಮರವೊಂದು ಉರುಳಿ ಬಿದ್ದಿದೆ. ಬೃಹತ್ ಮರ ರಸ್ತೆ ಮೇಲೆ ಉರುಳಿ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ.

ಮಳೆಯಿಂದ ಕುಂದಾಪುರದಲ್ಲಿ ನೆರೆ; ಕುದ್ರು ನಡುಗಡ್ಡೆಯಲ್ಲಿ ಬಂಧಿಯಾದ ಜನಮಳೆಯಿಂದ ಕುಂದಾಪುರದಲ್ಲಿ ನೆರೆ; ಕುದ್ರು ನಡುಗಡ್ಡೆಯಲ್ಲಿ ಬಂಧಿಯಾದ ಜನ

ಕುಂದಾಪುರ ಜ್ಯೂನಿಯರ್ ಕಾಲೇಜ್ ಅವರಣದಲ್ಲಿ ಈ ಘಟನೆ ನಡೆದಿದ್ದು, ಜ್ಯೂನಿಯರ್ ಕಾಲೇಜ್ ಕಾಂಪೌಂಡ್ ಗೋಡೆ ಮೇಲೆ ಬಿದ್ದ‌ ಮರವನ್ನು ಪುರಸಭೆಯ ಸಿಬ್ಬಂದಿಗಳು ತೆರವು ಮಾಡುತ್ತಿದ್ದಾರೆ.

Monsoon Rain Continues In Udupi District

ಭಾರೀ ಮಳೆಯಿಂದಾಗಿ ವಾರಾಹಿ ನದಿ ಉಕ್ಕಿ ಹರಿಯುತ್ತಿದೆ. ವಾರಾಹಿ ಆಣೆಕಟ್ಟು ಈಗಾಗಲೇ ಬಹುತೇಕ ಭರ್ತಿಗೊಂಡಿದ್ದು, ನೀರಿನ ಒಳ ಹರಿವು ಇದೇ ರೀತಿ ಮುಂದುವರೆದರೆ ಆಣೆಕಟ್ಟಿಗೆ ಅಪಾಯವಾಗುವ ಸಾಧ್ಯತೆ ಇದೆ. ನದಿ ಪಾತ್ರದಲ್ಲಿರುವ ಜನರಿಗೆ ಜಾಗರೂಕರಾಗಿರುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಅಗತ್ಯ ಬಿದ್ದರೆ ಈ ಪ್ರದೇಶದ ಜನ-ಜಾನುವಾರುಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ.

English summary
The Warahi River is overflowing due to heavy rains. The Warahi Dam is already nearly full, and the dam could be Dangered if the water flow continues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X