• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಸಾಯಿಖಾನೆಗೆ ಹಣವನ್ನು ಕೇಂದ್ರವೇ ಮಂಜೂರು ಮಾಡಿದೆ: ಐವನ್ ಡಿಸೋಜಾ

|

ಉಡುಪಿ, ಅಕ್ಟೋಬರ್. 08: ಕಸಾಯಿಖಾನೆಗೆ ಅನುದಾನ ಕೊಟ್ಟಿದ್ದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರದ ನೀತಿ ಪ್ರಕಾರ ಕಸಾಯಿ ಖಾನೆಗೆ ಹಣ ಮಂಜೂರು ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದ್ದಾರೆ.

ಉಡುಪಿಯ ಕಾಪುವಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸ್ಮಾರ್ಟ್ ಸಿಟಿ ಘೋಷಣೆ ಮಾಡಿದ್ದು ಕೇಂದ್ರ ಸರ್ಕಾರ. ಅದರ ಬೋರ್ಡ್ ಡೈರೆಕ್ಟರ್ ಗಳು ಕೇಂದ್ರದವರು. ಸಂಸದ ನಳಿನ್ ಕುಮಾರ್ ಇದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.

ಕಸಾಯಿಖಾನೆಗೆ 15 ಕೋಟಿ ರೂ.ನೀಡಿದ ಖಾದರ್: ಸ್ಪಷ್ಟನೆ ಕೇಳಿದ ಕಾರ್ಕಳ ಶಾಸಕ ಸುನಿಲ್ ಕುಮಾರ್

ಕಸಾಯಿಖಾನೆಗೆ ಹಣ ಕೇಂದ್ರವೇ ಮಂಜೂರು ಮಾಡಿದೆ ಎಂದು ಗಂಭೀರ ಆರೋಪ ಮಾಡಿರುವ ಐವನ್ ಡಿಸೋಜಾ, ಸ್ಮಾರ್ಟ್ ಸಿಟಿ ಒಂದು ಡೋಂಗಿ ಕಾನ್ಸೆಪ್ಟ್. ಸ್ಮಾರ್ಟ್ ಸಿಟಿ ಯೋಜನೆಯಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು.

'15 ಕೋಟಿ ರೂ.ವೆಚ್ಚದಲ್ಲಿ ಕಸಾಯಿಖಾನೆ ರಚಿಸಲು ಮುಂದಾಗಿರುವುದು ದುರಂತ'

ಜನರಿಗೆ ಮೋಸ ಮಾಡುವುದೇ ಕೇಂದ್ರ‌ ಸರ್ಕಾರದ ಉದ್ದೇಶ. ಸ್ಮಾರ್ಟ್ ಸಿಟಿ ಒಂದು ಕಂಪನಿ. ಜನರಿಗಾಗಿ ಇರುವ ಕಂಪನಿ ಅಲ್ಲ ಎಂದು ಅವರು ಕಿಡಿಕಾರಿದರು.

English summary
In Kapu MLC Ivan D'souza slams BJP leaders. He said According to the central government policy, the funds are allocated to the slaughterhouse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X