ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಹೆಗಡೆ ನಾಲಿಗೆ ಹಿಡಿತದಲ್ಲಿರಲಿ ಎಂದ ಎಂಎಲ್‌ಸಿ ಭೋಜೇಗೌಡ

|
Google Oneindia Kannada News

ಉಡುಪಿ, ಜೂನ್‌ 30: ನಾಲಗೆ ಹರಿತವಿದೆ ಎಂದ ಮಾತ್ರಕ್ಕೆ ಹರಿಬಿಡುವುದು ಸರಿಯಲ್ಲ, ನಿಯಂತ್ರಣದಲ್ಲಿಟ್ಟುಕೊಳ್ಳಿ ಎಂದು ರಾಜ್ಯವಿಧಾನ ಪರಿಷತ್‌ ಸದಸ್ಯ ಭೇಜೇಗೌಡ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯಲ್ಲಿ ಶನಿವಾರ ಮಾತನಾಡಿದ ಅವರು, ನಿಮಗಿಂತ ಹೆಚ್ಚು ಚುಚ್ಚು ಮಾತುಗಳನ್ನು ಆಡಲು ನಮಗೂ ಬರುತ್ತಿದೆ, ನೀವು ನಿಮ್ಮ ನಾಲಗೆಯನ್ನು ನಿಯಂತ್ರಣದಲ್ಲಿಡದಿದ್ದರೆ ನಾವು ನಮ್ಮ ನಾಲಗೆ ಹರಿಬಿಡಕಾಗುತ್ತದೆ, ನಮ್ಮ ನಾಲಗೆಯೂ ಹರಿತವಿದೆ ಎಂದಿದ್ದಾರೆ.

ಅನಂತ್‌ಕುಮಾರ್ ಹೆಗ್ಡೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆನಂದ್ ಅಸ್ನೋಟಿಕರ್ ಅನಂತ್‌ಕುಮಾರ್ ಹೆಗ್ಡೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆನಂದ್ ಅಸ್ನೋಟಿಕರ್

ನಮ್ಮ ಸರ್ಕಾರವನ್ನು ಯಾರಿಂದಲೂ ನಿಯಂತ್ರಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಆಹ್ವಾನ ನೀಡುತ್ತಿರುವುದು ಸರಿಯಲ್ಲ. ಬಿಜೆಪಿ ಅಭ್ಯರ್ಥಿಗಳು ಮೊದಲ ತಮ್ಮ ಕ್ಷೇತ್ರಗಳಲ್ಲಿ ನೆರೆ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಲಿ. ಅಲ್ಲಿ ಉಂಟಾದ ನಷ್ಟಗಳ ಬಗ್ಗೆ ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿ.

MLC Bhojegowda warns union minister Hegde on his words

ಟೀಕೆ ಮಾಡುವುದೊಂದೇ ಕಾಯಕವಾಗದಿರಲಿ. ಸಂಸದರು ತಮ್ಮ ಕೆಲಸವನ್ನು ನಿರ್ವಹಿಸಿದರೆ ಸರ್ಕಾರದಿಂದ ಪರಿಹಾರ ಒದಗಿಸುವ ಕೆಲಸ ನಾವು ಮಾಡುತ್ತೇವೆ. ಯಾವುದೇ ಸರ್ಕಾರ ವಿರಲಿ ಭಿನ್ನಾಭಿಪ್ರಾಯ ಸಹಜ. ಗಂಡ-ಹೆಂಡ್ತಿ ಮಧ್ಯೇನೆ ಭಿನ್ನಾಭಿಪ್ರಾಯ ಇರುತ್ತೆ.

ಇನ್ನೂ ಮರಾಮಾರಿ ಚುನಾವಣೆ ಎದುರಿಸಿ ಗೆದ್ದವರು ನಾವು. ಹೀಗಿಬೇಕಾದರೆ ಭಿನ್ನಾಭಿಪ್ರಾಯ ಬರುವುದು ಸಹಜ ಎಂದರು. ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಬಗ್ಗೆ ಸಮಾಲೋಚನಕ್ಕಾಗಿ ಆಗಮಿಸಿದ ಭೋಜೆಗೌಡರು, ಒಂದು ದಿನಗಳ ಕಾಲ ಜಿಲ್ಲೆಯಲ್ಲಿ ಕಳೆಯಲಿದ್ದಾರೆ.

English summary
Legislative council member Bhojegowda warns union minister Ananth Kumar Hegde on latter using words about Congress and JDS MLAs and said the union minister should have common sense of using words in public domain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X