ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

86 ಕೋವಿಡ್ ಪ್ರಕರಣ ಪತ್ತೆ: ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ಮಣಿಪಾಲ ಎಂಐಟಿ ಕ್ಯಾಂಪಸ್

|
Google Oneindia Kannada News

ಉಡುಪಿ, ಮಾರ್ಚ್ 18: ಒಂದೇ ವಾರದಲ್ಲಿ 86 ಕೋವಿಡ್ ಪ್ರಕರಣ ಪತ್ತೆಯಾದ ಕಾರಣ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ಅನ್ನು ಕಂಟೈನ್ಮೆಂಟ್ ವಲಯವೆಂದು ಉಡುಪಿ ಜಿಲ್ಲಾಡಳಿತ ಘೋಷಣೆ ಮಾಡಿದೆ.

ಮಾರ್ಚ್ 11 ಮತ್ತು 17ರ ನಡುವೆ 86 ಕೋವಿಡ್-19 ಪ್ರಕರಣಗಳು ಕ್ಯಾಂಪಸ್‌ನಲ್ಲಿ ದಾಖಲಾದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಪೈಕಿ ಮಾರ್ಚ್ 15ರಂದು 17 ಕೊರೊನಾ ಪ್ರಕರಣಗಳು ಮತ್ತು ಮಾರ್ಚ್ 16ರಂದು 25 ಕೊರೊನಾ ಪ್ರಕರಣಗಳು ವರದಿಯಾಗಿವೆ. ಮಾರ್ಚ್ 17ರಂದು 27 ಪ್ರಕರಣ ದೃಢಪಟ್ಟಿವೆ.

ಮಂಗಳೂರು: 51 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ದೃಢ; ಕಾಲೇಜ್ ಸೀಲ್ಡೌನ್ಮಂಗಳೂರು: 51 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ದೃಢ; ಕಾಲೇಜ್ ಸೀಲ್ಡೌನ್

ಮಾರ್ಚ್ 17ರಂದು ಉಡುಪಿ ಜಿಲ್ಲೆಯಲ್ಲಿ 33 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಮಣಿಪಾಲದ ಎಂಐಟಿಯಲ್ಲಿ 27 ಪ್ರಕರಣ ಪತ್ತೆಯಾಗಿವೆ.

MIT-Manipal Campus Declared Containment Zone After 86 Covid-19 Cases Reported

ಎಂಐಟಿ ಕ್ಯಾಂಪಸ್‌ನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಹೊರ ರಾಜ್ಯದ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಪ್ರಾಥಮಿಕ ಸಂಪರ್ಕಿತರಲ್ಲೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಸಾರ್ವಜನಿಕರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ, ಎಂಐಟಿ ಕ್ಯಾಂಪಸ್ ಸುತ್ತ ಕಂಟೈನ್ಮೆಂಟ್ ಜೋನ್ ಘೋಷಣೆ ಮಾಡಲಾಗಿದೆ ಎಂದು ಉಡುಪಿ ಡಿಎಚ್ಒ ಡಾ.ಸುಧೀರ್ ಚಂದ್ರಸೂಡಾ ಮಾಹಿತಿ ನೀಡಿದ್ದಾರೆ.

Recommended Video

ಆರೋಗ್ಯಾಧಿಕಾರಿಗಳ ತುರ್ತು ಸಭೆ ಕರೆದ ಆರೋಗ್ಯ ಸಚಿವ ಸುಧಾಕರ್ | Oneindia Kannada

English summary
The Udupi district Administration has declared Manipal Institute of Technology campus as a containment zone since 86 Covid-19 cases were reported in a single week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X