ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಎಮರ್ಜೆನ್ಸಿ: ನಾಳೆ 24 ಸಾವಿರ ವೈದ್ಯಕೀಯ ಸಿಬ್ಬಂದಿಗೆ ರಜೆ?

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 31: ಕೊರೊನಾ ವೈರಸ್ ಎಮರ್ಜೆನ್ಸಿ ಇರುವ ಸಂದರ್ಭದಲ್ಲಯೇ ನಾಳೆ ರಾಜ್ಯದ 24,000 ನ್ಯಾಶನಲ್ ಹೆಲ್ತ್ ಮಷಿನ್(ಎನ್ಎಚ್ಎಂ) ವೈದ್ಯಕೀಯ ಸಿಬ್ಬಂದಿಗಳಿಗೆ ರಜೆ ಕೊಡಬೇಕಿದೆ. ಒಂದು ದಿನ ರಜೆ ಕೊಡದೆ ಬೇರೆ ದಾರಿ ಇಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಎಪ್ರಿಲ್ 1 ಕ್ಕೆ ಕೆಲಸಕ್ಕೆ ಬರುತ್ತೇವೆ, ಆದರೆ ಸಂಬಳ ಕೊಡಿ ಎಂದು ಸಿಬ್ಬಂದಿಗಳು ಕೇಳಿದ್ದಾರೆ. ರಜೆ ಮತ್ತು ಸಂಬಳ ಕೊಡುವ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ತಿಳಿಸಿದರು.

ದೇಶಾದ್ಯಂತ ಕೊರೋನಾ ವೈರಸ್ ಬಾಧಿಸಿರುವ ಸಂದರ್ಭದಲ್ಲಿ ಕಾನೂನು, ಕಾಯಿದೆ, ನಿಯಮ ಅಂತ ನೋಡಿಕೊಂಡು ಇರಲು ಸಾಧ್ಯವಿಲ್ಲ. ಇದು ವಾದ ಮಾಡುವ ಸಮಯವೂ ಅಲ್ಲವೆಂದರು.

Medical Staff On Leave Tomorrow In Between Corona Emergency

ತುರ್ತು ಸಮಯದಲ್ಲಿ ರಾಜ್ಯಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ಗೊಂದಲವನ್ನು ನಿವಾರಿಸಲಾಗುವುದು ಎಂದು ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಡುಪಿಯಲ್ಲಿ ಹೇಳಿದ್ದಾರೆ.

ಕಾಂಟ್ರ್ಯಾಕ್ಟ್ ರಿನಿವಲ್ ಮಾಡಲು ರಜೆ ಎನ್ಎಚ್ಎಂ ಕೊಡಲಿದೆ. ನಾಳೆ ಏಪ್ರಿಲ್ 1 ಕ್ಕೆ 24 ಸಾವಿರ ವೈದ್ಯಕೀಯ ಸಿಬ್ಬಂದಿಗಳಿಗೆ ರಜೆ ಕೊಡಬೇಕಿದೆ. ಇದನ್ನು ಸರ್ಕಾರ ಯಾವ ನಿಭಾಯಿಸಲಿದೆ ಎಂಬುದನ್ನು ನೋಡಬೇಕಿದೆ.

English summary
The 24,000 medical staff of the state will have to leave tomorrow while the coronavirus is in an emergency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X