ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯ ಮಟ್ಟುಗುಳ್ಳ ಕೃಷಿಕರಿಗೆ ಉಪ್ಪು ನೀರ ಶಾಪ!

By ರಹೀಂ ಉಜಿರೆ
|
Google Oneindia Kannada News

ಉಡುಪಿ, ಏಪ್ರಿಲ್ 12; ಉಡುಪಿಯ ಅಪರೂಪದ ಬೆಳೆಗೆ ಈಗ ಉಪ್ಪು ನೀರು ಶಾಪವಾಗಿ ಪರಿಣಮಿಸಿದೆ. ಹೊರ ದೇಶಕ್ಕೂ ರಫ್ತಾಗುವ ಬಹು ಬೇಡಿಕೆಯ ಮಟ್ಟು ಗುಳ್ಳ, ಗಿಡ ಸಹಿತ ಮಣ್ಣಲ್ಲೇ ಕೊಳೆತು ಹೋಗುತ್ತಿದೆ.

ಉಡುಪಿ ಜಿಲ್ಲೆಯ ಹೊರವಲಯದ ಮಟ್ಟು ಪ್ರದೇಶದಲ್ಲಿ ಬೆಳೆಯುವ 'ಮಟ್ಟು ಗುಳ್ಳ' ಪೇಟೆಂಟ್ ಪಡೆದ ತರಕಾರಿ. ಕರಾವಳಿ ಮಾತ್ರವಲ್ಲದೇ ದೇಶ ವಿದೇಶದಲ್ಲಿ ಮಟ್ಟುಗುಳ್ಳಕ್ಕೆ ವಿಶೇಷ ಬೇಡಿಕೆ ಇದೆ. ಆದರೆ ಈಗ ಕರಾವಳಿಯ ಹೆಮ್ಮೆಯ ಮಟ್ಟುಗುಳ್ಳದ ಗಿಡಗಳು ಸತ್ತು, ಗುಳ್ಳಗಳು ಕೊಳೆತು ಹೋಗುತ್ತಿವೆ.

ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ, ರೈತ ಸಂಘದಿಂದ ರಾಜ್ಯವ್ಯಾಪಿ ಪ್ರತಿಭಟನೆ ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ, ರೈತ ಸಂಘದಿಂದ ರಾಜ್ಯವ್ಯಾಪಿ ಪ್ರತಿಭಟನೆ

ಮಟ್ಟುಗುಳ್ಳ ಕೊಳೆತು ಹೋಗಲು ಮುಖ್ಯ ಕಾರಣ ಉಪ್ಪುನೀರು. ಹೌದು, ಪಕ್ಕದಲ್ಲೇ ಹರಿಯುವ ಪಿನಾಕಿನಿ ನದಿಯ ಉಪ್ಪು ನೀರು ಬೆಳೆಗಳತ್ತ ಹರಿದು ಗುಳ್ಳ ಬೆಳದ ಪ್ರದೇಶಗಳಿಗೆ ನುಗ್ಗಿವೆ. ಕಳೆದ ಸಲ ಸುರಿದ ಭಾರೀ ಮಳೆಗೆ ಗುಳ್ಳದ ಗಿಡಗಳು ಕೊಳೆತು ಹೋಗಿದ್ದವು.

5 ಎಕರೆ ಜಮೀನು ಲೀಸ್‌ಗೆ ಪಡೆದು ದಾಳಿಂಬೆ ಬೆಳೆದು 'ಸಿರಿವಂತ'ನಾದ ರೈತ5 ಎಕರೆ ಜಮೀನು ಲೀಸ್‌ಗೆ ಪಡೆದು ದಾಳಿಂಬೆ ಬೆಳೆದು 'ಸಿರಿವಂತ'ನಾದ ರೈತ

2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಸುರಿದ ಮಳೆಗೆ ಪಿನಾಕಿನಿ ತುಂಬಿ ಹರಿದಿತ್ತು. ಆಗ ಸುಮಾರು 62 ರೈತರು 40 ಎಕರೆ ಪ್ರದೇಶದಲ್ಲಿ ನೆಟ್ಟಿದ್ದ ಮಟ್ಟುಗುಳ್ಳ ಸಸಿಗಳಿಗೆ ನೀರಿನಲ್ಲಿ ಅವೃತವಾಗಿದ್ದವು. ಗಿಡಗಳು ಕೊಳೆತು ನಾಟಿ ಮಾಡಿದ ಗಿಡ ಹೇಗಿದೆ? ಎಂದು ನೋಡಲು ಸಹ ಸಿಕ್ಕಿರಲಿಲ್ಲ.

ವಿಜಯನಗರ: ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ವಿಜಯನಗರ: ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ

ಕಷ್ಟಪಟ್ಟು ಬೆಳೆದ ರೈತರು

ಕಷ್ಟಪಟ್ಟು ಬೆಳೆದ ರೈತರು

ಪ್ರವಾಹದ ಬಳಿಕ ರೈತರು ಕಷ್ಟ ಪಟ್ಟು, ಪುನಃ ಗುಳ್ಳ ಬೆಳೆದಿದ್ದರು. ಆದರೆ ಉಪ್ಪು ನೀರು ನುಗ್ಗಿದ ಪರಿಣಾಮ, ಇನ್ನೇನು ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಾಟ ಆಗಬೇಕಿದ್ದ ಮಟ್ಟುಗುಳ್ಳ ಸರ್ವನಾಶವಾಗಿದೆ. ಹೀಗಾಗಿ ಈ ಭಾಗದ ಕೃಷಿಕರ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಪವಾದ ಉಪ್ಪು ನೀರು

ಶಾಪವಾದ ಉಪ್ಪು ನೀರು

ಮಟ್ಟುಗುಳ್ಳಕ್ಕೆ ಈ ಸಮಸ್ಯೆಯೇನೂ ಇಂದು ನಿನ್ನೆಯದೇನಲ್ಲ. ಕಳೆದ ಹಲವು ವರ್ಷಗಳಿಂದಲೂ ಈ ಭಾಗದ ಗುಳ್ಳ ಕೃಷಿಕರಿಗೆ ಉಪ್ಪು ನೀರೇ ಶಾಪವಾಗಿ ಪರಿಣಮಿಸಿದೆ. ಆದರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಈ ಸಮಸ್ಯೆ ತಲೆದೋರಿದೆ.

ತಡೆಗೋಡೆ ನಿರ್ಮಾಣ ಮಾಡಿ

ತಡೆಗೋಡೆ ನಿರ್ಮಾಣ ಮಾಡಿ

ಬಹಳ ವರ್ಷಗಳಿಂದ ಈ ಭಾಗದ ಕೃಷಿಕರು ಪಿನಾಕಿನಿ ನದಿಗೆ ಶಾಶ್ವತ ತಡೆಗೋಡೆ ನಿರ್ಮಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ನದಿಯ ಮಧ್ಯದಲ್ಲಿ ಇರುವ ಕುದ್ರು ಜಾಗವನ್ನು ತೆರವುಗೊಳಿಸಿದರೆ ಸಮಸ್ಯೆ ಪರಿಹಾರ ಆಗುತ್ತದೆ ಎಂಬುದು ಇವರ ಬೇಡಿಕೆಯಾಗಿದೆ. ಆದರೆ ಸ್ಥಳೀಯ ಆಡಳಿತಕ್ಕೆ, ಜನಪ್ರತಿನಿಧಿಗಳಿಗೆ ಈ ಭಾಗದ ಕೃಷಿಕರ ಕೂಗು ಕೇಳಿಸುತ್ತಲೇ ಇಲ್ಲ.

Recommended Video

Kumba Mela 2021 : ಎಷ್ಟು ಹೇಳಿದ್ರು ಜನ ಬುದ್ದಿ ಕಲಿತಿಲ್ಲ! | Oneindia Kannada
ಮಾರುಕಟ್ಟೆ ವ್ಯವಸ್ಥೆ ಭರವಸೆ

ಮಾರುಕಟ್ಟೆ ವ್ಯವಸ್ಥೆ ಭರವಸೆ

ವಿಧಾನಸಭೆ ಅಧಿವೇಶನದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಜಿಎ ಟ್ಯಾಗ್ ಹೊಂದಿದ ಉತ್ಪನ್ನಗಳಿಗೆ ವಿಮಾನ, ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಮಳಿಗೆ ತೆರೆದು ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದರು. ಈ ಉತ್ಪನ್ನಗಳ ಪಟ್ಟಿಯಲ್ಲಿ ಚನ್ನಪಟ್ಟಣದ ಬೊಂಬೆ, ನವಲಗುಂದ ಜಮಖಾನ, ಉಡುಪಿಯ ಮಲ್ಲಿಗೆ, ಮಟ್ಟುಗುಳ್ಳ ಬದನೆಕಾಯಿ ಸೇರಿವೆ.

English summary
Udupi district farmers who busy in Mattu Gulla farming facing problem with the salt water of Pinakini river. Mattu Gulla is a variety of green brinjal grown in and around the village of Matti in Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X