ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಣಿಪಾಲ್‌ ಕಸ್ತೂರ್ಬಾ ಆಸ್ಪತ್ರೆ ಹೊರರೋಗಿ ವಿಭಾಗ ಸೇವೆ ಪುನರಾರಂಭ

|
Google Oneindia Kannada News

ಮಣಿಪಾಲ, 25 ಎಪ್ರಿಲ್: ಮಣಿಪಾಲ್‌ನಲ್ಲಿರುವ ಕಸ್ತೂರ್ಬಾ ಆಸ್ಪತ್ರೆಯಲ್ಲಿ ದಿನಾಂಕ 27 ರಿಂದ ಹೊರರೋಗಿ ವಿಭಾಗಗಳು ಎಂದಿನಂತೆ ಸೇವೆ ನೀಡಲಿವೆ ಎಂದು ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ ಶೆಟ್ಟಿ ತಿಳಿಸಿದ್ದಾರೆ. ಸಾರ್ವಜನಿಕರು ಮತ್ತು ರೋಗಿಗಳು ಈ ಸೇವಾ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದಿದ್ದಾರೆ.

ಕೊರೊನಾ ಲಾಕ್‌ಡೌನ್‌ನಿಂದ ಆಸ್ಪತ್ರೆಯ ಹೊರರೋಗಿ ವಿಭಾಗ ಸೇವೆಗಳು ಬಂದ್ ಆಗಿದ್ದವು. ಆದರೆ, ಸೋಮವಾರದಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಆಸ್ಪತ್ರೆಯ ಎಲ್ಲ ಹೊರ ರೋಗಿ ವಿಭಾಗಗಳು ಎಂದಿನಂತೆ ಸೇವೆಗೆ ಮುಕ್ತ ಎಂದು ಡಾ. ಅವಿನಾಶ ಶೆಟ್ಟಿ ಪ್ರಕಟಿಸಿದರು.

ಲಾಕ್ ಡೌನ್ ರಿಲೀಫ್: ಯಾವೆಲ್ಲ ಅಂಗಡಿಗಳು ಇಂದಿನಿಂದ ಓಪನ್.?ಲಾಕ್ ಡೌನ್ ರಿಲೀಫ್: ಯಾವೆಲ್ಲ ಅಂಗಡಿಗಳು ಇಂದಿನಿಂದ ಓಪನ್.?

ಈ ಸೇವೆಯನ್ನು ಪಡೆದುಕೊಳ್ಳಲು ಬರುವ ಪ್ರತಿಯೊಂದು ರೋಗಿಯು ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು, ಅದರ ನಂತರ ಸಂಬಂಧ ಪಟ್ಟ ವಿಭಾಗಗಳಿಗೆ ಕಳುಹಿಸಿಕೊಡಲಾಗುತ್ತದೆ. ಎಲ್ಲಾ ರೋಗಿಗಳು ಮತ್ತು ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

Manipal Kasturba Hospital OPD Services Will Reopen From April 27

ಆಸ್ಪತ್ರೆಗಳಿಗೆ ರೋಗಿಗಳೊಂದಿಗೆ ಅವರ ಮನೆಯವರು ಬರುವುದು ಸಾಮಾನ್ಯವಾಗಿರುತ್ತದೆ. ಆದರೆ, ಸದ್ಯಕ್ಕೆ ಒಬ್ಬ ರೋಗಿಗಳೊಂದಿಗೆ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರೋಗಿಯ ಜೊತೆಗೆ ಹೆಚ್ಚು ಜನರು ಆಸ್ಪತ್ರೆ ಒಳಗೆ ಹೋಗುವ ಹಾಗಿಲ್ಲ.

ಇದರೊಂದಿಗೆ, ಟೆಲಿ ಮೆಡಿಸಿನ್ ಮೂಲಕ ವೈದ್ಯರ ಸಮಾಲೋಚನಾ ಸೇವೆಯು ಬೆಳಿಗ್ಗೆ 9 ರಿಂದ ಮಧ್ಯಾಹ್ನ 4ರವರೆಗೆ ಲಭ್ಯವಿದೆ. ಸಾರ್ವಜನಿಕರು 080-47192235 ಗೆ ಕರೆಮಾಡಬಹುದು ಎಂದು ಡಾ. ಅವಿನಾಶ ಶೆಟ್ಟಿ ವಿನಂತಿ ಮಾಡಿದ್ದಾರೆ.

English summary
Manipal Kasturba Hospita OPD (out patient department) services will reopen from April 27th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X