ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಪಾಹ್ ವೈರಸ್ ಪತ್ತೆ ಹಚ್ಚಿದ್ದು ಉಡುಪಿಯ ಮಣಿಪಾಲದ ವೈದ್ಯರು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 23: ಕೇರಳದಲ್ಲಿ ಹತ್ತು ಮಂದಿಯನ್ನು ಬಲಿ ಪಡೆದಿರುವ ಮಾರಕ ನಿಪಾಹ್ ವೈರಸ್ ಅನ್ನು ಅತ್ಯಂತ ಕ್ಷಿಪ್ರವಾಗಿ ಪತ್ತೆ ಹಚ್ಚಿದ್ದು, ಉಡುಪಿಯ ಮಣಿಪಾಲದ ವೈದ್ಯರು. ಅಪರೂಪದ ಈ ಕಾಯಿಲೆ ಬಗ್ಗೆ ಮಾಹಿತಿ ಬಂದ ಕೇವಲ ಹತ್ತೇ ತಾಸಿನಲ್ಲಿ ಮಣಿಪಾಲದ ವೈದ್ಯರ ತಂಡ ಈ ಕಾಯಿಲೆಯನ್ನು ಗುರುತಿಸುವಲ್ಲಿ ಯಶ ಕಂಡಿದೆ.

ಹೀಗಾಗಿ ನಿಪಾಹ್ ವೈರಸ್ ಕರ್ನಾಟಕ ಕರಾವಳಿಗೂ ಹಬ್ಬುವುದನ್ನು ತಡೆಯಲು ಸಾಧ್ಯವಾಗಿದೆ. ಮಣಿಪಾಲ್ ಸೆಂಟರ್ ಫಾರ್ ವೈರಸ್ ರೀಸರ್ಚ್ ನ ಡಾ.ಅರುಣ್ ಕುಮಾರ್ ಈ ಕಾಯಿಲೆ ಚಿಕಿತ್ಸೆಯ ನೇತೃತ್ವ ವಹಿಸಿದ್ದಾರೆ. ಗಮನಾರ್ಹ ಸಂಗತಿ ಅಂದ್ರೆ ನಿಪಾಹ್ ದಂತಹ ವೈರಸ್ ರೋಗಗಳನ್ನು ಪತ್ತೆ ಹಚ್ಚಲು ಬೇಕಾದ ಪ್ರಯೋಗಾಲಯ ಮಣಿಪಾಲದ ಕೆಎಂಸಿ ಬಿಟ್ಟರೆ , ಪುಣೆಯಲ್ಲಿ ಮಾತ್ರ ಇದೆ.

ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?

ಹೀಗಾಗಿ ಮಣಿಪಾಲಕ್ಕೆ ಬಂದ ಸ್ಯಾಂಪಲ್ ನ್ನು ಅತ್ಯಂತ ಕ್ಷಿಪ್ರವಾಗಿ ಪತ್ತೆ ಹಚ್ಚಲು ಸಾಧ್ಯವಾಯಿತು. ಮೇ .18 ರಂದು ಮೊದಲ ಬಾರಿಗೆ ಮಣಿಪಾಲದ ವೈದ್ಯರ ತಂಡ ಈ ಕಾಯಿಲೆಯನ್ನು ಪತ್ತೆ ಹಚ್ಚಿತ್ತು.

Manipal doctors of Udupi detected very rapidly nipah virus.

ಸಾಯುವ ಮುನ್ನ ನರ್ಸ್ ಲಿನಿ ಹೇಳಿದ ಮಾತುಗಳೇನು!?ಸಾಯುವ ಮುನ್ನ ನರ್ಸ್ ಲಿನಿ ಹೇಳಿದ ಮಾತುಗಳೇನು!?

ಇದೀಗ ನಿಪಾ ಮಂಗಳೂರಿನ ಇಬ್ಬರಿಗೂ ತಗುಲಿರುವ ಶಂಕೆ ಇದ್ದು, ಈ ಇಬ್ಬರ ಗಂಟಲು ದ್ರವ ಮಾದರಿಯನ್ನು ಹೆಚ್ಚಿನ ತಪಾಸಣೆಗಾಗಿ ಮಣಿಪಾಲದ ಕೆಎಂಸಿಗೆ ಕಳಿಸಿ ಕೊಡಲಾಗಿದೆ. ಮಣಿಪಾಲದಲ್ಲಿ ಸುಸಜ್ಜಿತ ಲ್ಯಾಬ್ ಇರುವ ಕಾರಣದಿಂದ ಕೇರಳ ಗಡಿಯಲ್ಲಿರುವ ಕರಾವಳಿ ಕರ್ನಾಟಕದ ಜನ ಹೆಚ್ಚು ಆತಂಕ ಪಡುವ ಅಗತ್ಯ ಇಲ್ಲ.

English summary
Manipal doctors of Udupi detected very rapidly nipah virus. The team of Manipal doctors managed to identify the disease in about ten hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X