ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ವಿಕಲಚೇತನ ಯುವತಿಗೆ ಬಾಳ ಸಂಗಾತಿಯಾದ ಯುವಕ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 24: ಉಡುಪಿಯ ಯುವತಿಯೋರ್ವಳ ಕಾಲುಗಳೆರಡು ಬಲಹೀನವಾದರೂ ಅದೃಷ್ಟಬಲ ಮಾತ್ರ ಚೆನ್ನಾಗಿದೆ. ದುಬೈನಲ್ಲಿ ಉದ್ಯೋಗ ಮಾಡುತ್ತಿರುವ ಸಂದೀಪ್ ಎಂಬ ಯುವಕ ತಾನೇ ಮುಂದೆ ಬಂದು ಈ ಯುವತಿಯ ಬಾಳಿಗೆ ಬೆಳಕಾಗಿದ್ದಾನೆ.

ಉಡುಪಿಯ ಸುನೀತಾ ಪೊಲೀಯೋ ಪೀಡಿತೆ. ತನ್ನ ಎರಡೂ ಕಾಲುಗಳ ಬಲ ಕಳೆದುಕೊಂಡಿದ್ದಳು. ಪಿಯುಸಿವರಗೆ ಓದಿಕೊಂಡು ತಂದೆ-ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡಾ ದೌರ್ಭಾಗ್ಯಕ್ಕೆ ಈಡಾದರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಳು. ಆದರೆ ಕಾಲು ಕಿತ್ತುಕೊಂಡು ಕಷ್ಟ ಕೊಟ್ಟ ದೇವರು ಮದುವೆಯ ವಿಚಾರದಲ್ಲಿ ಮಾತ್ರ ಈಕೆಯ ಕೈ ಬಿಡಲಿಲ್ಲ.

 13 ವರ್ಷದಿಂದ ಪ್ರೀತಿಸಿ ಮದುವೆ ದಿನವೇ ನಾಪತ್ತೆಯಾದ ವರ 13 ವರ್ಷದಿಂದ ಪ್ರೀತಿಸಿ ಮದುವೆ ದಿನವೇ ನಾಪತ್ತೆಯಾದ ವರ

ಈ ಯುವತಿಯನ್ನು ಮದುವೆಯಾಗುವ ಮೂಲಕ ಭಾಗ್ಯದ ಬಾಗಿಲು ತೆರೆದವರು ಸಂದೀಪ್ ಎಂಬ ಯುವಕ. ದುಬೈ ನಲ್ಲಿ ಉದ್ಯೋಗ ಮಾಡುತ್ತಿರುವ ಸಂದೀಪ್, ತಾನೇ ಮುಂದೆ ಬಂದು ಈಕೆಯ ಬಾಳ ಸಂಗಾತಿಯಾಗಿ, ಆಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ. ಮನೆಯವರ ಒಪ್ಪಿಗೆಯಂತೆ ಈ ಅಪರೂಪದ ಮದುವೆಗೆ ಉಡುಪಿಯ ಕಂಬಳ್ಳಿ ದೇವಸ್ಥಾನ ಸಾಕ್ಷಿಯಾಯಿತು.

Udupi: Man Redefines Love As He Marries Woman With No Legs

Recommended Video

Samsung ಭಾರತದಲ್ಲಿ ನೂತನವಾಗಿ 5 ಸಾವಿರ ಕೋಟಿ ಹೂಡಿಕೆ | Oneindia Kannada

ಮದುಮಗಳು ನಡೆಯಲು ಆಗದೆ ವಾಕಿಂಗ್ ಸ್ಟಿಕ್ ತರಹದ್ದನ್ನು ಹಿಡಿದೇ ಹಸೆಮಣೆಗೆ ನಡೆದು ಬಂದಳು. ವರ ಸಂದೀಪ್ ಅತ್ಯಂತ ಲವಲವಿಕೆಯಿಂದಲೇ ಈಕೆಯ ಕುತ್ತಿಗೆಗೆ ತಾಳಿ ಕಟ್ಟುವ ಮೂಲಕ ಪೊಲಿಯೋ ಪೀಡಿತೆಗೆ ಬಾಳು ಕೊಟ್ಟ. ಈ ಅಪರೂಪದ ಮದುವೆಗೆ ಸೇರಿದ ಜನರು ವಧು-ವರರು ನೂರ್ಕಾಲ ಬಾಳಲಿ ಎಂದು ಆಶೀರ್ವದಿಸಿದರು.

English summary
Sandeep, a young man who works in Dubai, has come forward and Marries Woman With No Legs in Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X