ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್ ನಿಂದ ನಿಂತ ಕೋಳಿ ವ್ಯಾಪಾರ; ಉಡುಪಿ ವ್ಯಕ್ತಿ ಆತ್ಮಹತ್ಯೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 23: ಲಾಕ್ ಡೌನ್ ನಡುವೆ ಕೋಳಿ ಫಾರಂ ಉದ್ಯಮದಲ್ಲಾದ ನಷ್ಟದಿಂದಾಗಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಉಡುಪಿಯ ಅಮಾಸೆಬೈಲು ಗ್ರಾಮದ ಬೊಳ್ಮನೆ ನಿವಾಸಿ ಗಣೇಶ ನಾಯ್ಕ (37) ಆತ್ಮಹತ್ಯೆ ಮಾಡಿಕೊಂಡವರು. ಗಣೇಶ ನಾಯ್ಕ ಅವರು ಕೋಳಿ ಫಾರಂ ನಡೆಸುತ್ತಿದ್ದು, ಲಾಕ್ ಡೌನ್ ಆದಾಗಿನಿಂದ ಕೋಳಿಗಳ ವ್ಯಾಪಾರ ಸಂಪೂರ್ಣ ನಿಂತಿತ್ತು. ಕೋಳಿ ವ್ಯಾಪಾರವಾಗದೇ ನಷ್ಟ ಅನುಭವಿಸಿದ್ದರು. ಇವರಿಗೆ ಕೋಳಿ ಪೂರೈಸಿದ ಕಂಪನಿ ಕೋಳಿಗಳನ್ನು ದಫನ್ ಮಾಡುವಂತೆ ತಿಳಿಸಿದ್ದು, ಅದರಂತೆ ಗಣೇಶ ನಾಯ್ಕ ಅವರು ಎರಡು ಲಕ್ಷ ಮೌಲ್ಯದ ಸುಮಾರು 3000 ಕೋಳಿಗಳನ್ನು ದಫನ್ ಮಾಡಿದ್ದರು.

Man Committs Suicide For Loss In Chicken Business In Amasebailu

ವ್ಯವಹಾರದಲ್ಲಿ ಆದ ಈ ನಷ್ಟದಿಂದ ಮನನೊಂದು ಮಂಗಳವಾರ ಸಂಜೆ ಬೊಳ್ಮನೆ ಕ್ರಾಸ್ ಬಳಿ ಸರ್ಕಾರಿ ಕಾಡಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
A Man Committs Suicide For Loss In Chicken Business during this lockdown time in Amasebailu of udupi district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X