ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಪೆ ಮೀನುಗಾರರ ಮೇಲೆ ಮಹಾರಾಷ್ಟ್ರದ ಮೀನುಗಾರರಿಂದ ಹಲ್ಲೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 17: ಮಲ್ಪೆಯಿಂದ ತೆರಳಿದ ಮೀನುಗಾರರ ಮೇಲೆ ಮಹಾರಾಷ್ಟ್ರದ ರತ್ನಗಿರಿ ಮೀನುಗಾರರು ಹಲ್ಲೆ ನಡೆಸಿದ್ದು, ಆ ವೀಡಿಯೋ ಇದೀಗ ವೈರಲ್ ಆಗಿದೆ.

ಕಾಸರಕೋಡಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ‌, ಓರ್ವ ಕಣ್ಮರೆಕಾಸರಕೋಡಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ‌, ಓರ್ವ ಕಣ್ಮರೆ

ಮಲ್ಪೆಯಿಂದ ಮೀನುಗಾರಿಕೆಗೆಂದು ಬೋಟ್ ಮೂಲಕ ತೆರಳಿದ ಮೀನುಗಾರರು ಮಹಾರಾಷ್ಟ್ರದ ರತ್ನಗಿರಿಯ ಮೀನುಗಾರರ ಕಣ್ಣಿಗೆ ಬಿದ್ದಿದ್ದಾರೆ. ಈ ಸಂದರ್ಭ ಮೀನುಗಾರಿಕಾ ಗಡಿ ಒಳಗೆ ಪ್ರವೇಶಿಸಿದ್ದರಿಂದ ಹಲ್ಲೆ ನಡೆಸಲಾಗಿದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಮೀನುಗಾರಿಕಾ ಗಡಿಯಿದ್ದು, ಅಲ್ಲಿ ಬೇರೆ ರಾಜ್ಯದವರು ಮೀನುಗಾರಿಕೆ ನಡೆಸುವಂತಿಲ್ಲ. ಹೀಗಾಗಿ ಗಡಿ ದಾಟಿ ಬಂದ ಮೀನುಗಾರರ ಮೇಲೆ ದಾಳಿ ನಡೆಸಲಾಗಿದೆ.

ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ: ಪ್ರಶಂಸಿಸಿದ ಮೀನುಗಾರ ಮುಖಂಡರುಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ: ಪ್ರಶಂಸಿಸಿದ ಮೀನುಗಾರ ಮುಖಂಡರು

ದೊಣ್ಣೆ ಹಿಡಿದು ಬಂದ ರತ್ನಗಿರಿ ಮೀನುಗಾರರು ಹಲ್ಲೆಗೆ ಯತ್ನಿಸಿದ್ದಾರೆ. ಕರ್ನಾಟಕದ ಮೀನುಗಾರರ ಬೋಟ್ ನಲ್ಲಿದ್ದ ವೈರ್ ಲೆಸ್ ಜಿಪಿಎಸ್ ಕಸಿದುಕೊಳ್ಳಲಾಗಿದೆ. ಮಾತ್ರವಲ್ಲ, ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ಹಾಗೂ ಡೀಸೆಲ್ ಅನ್ನೂ ಕಸಿದುಕೊಳ್ಳಲಾಗಿದೆ.

Malpe Fishermen Attacked By Maharashtra Fishermen

ರತ್ನಗಿರಿಯ ಮೀನುಗಾರರು ಕರ್ನಾಟಕದ ಮೀನುಗಾರರನ್ನು ಅಟ್ಟಿಸಿಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗಿದ್ದು, ಈ ಒಂದು ಹಲ್ಲೆ ಪ್ರಕರಣ ಮತ್ತೆ ಉಭಯ ರಾಜ್ಯಗಳ ನಡುವೆ ಮೀನುಗಾರರ ಗಲಾಟೆಗೆ ಕಾರಣವಾಗುವ ಮುನ್ಸೂಚನೆಯನ್ನೂ ನೀಡಿದೆ.

English summary
Maharashtra's Ratnagiri fishermen attacked fishermen from Malpe. This video is going viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X