ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ 24 ಗಂಟೆಗಳಲ್ಲಿ ಭಾರೀ ಗಾಳಿಯೊಂದಿಗೆ ಅಪ್ಪಳಿಸಲಿದೆ "ಮಹಾ" ಚಂಡಮಾರುತ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 31: ಕರಾವಳಿಯಲ್ಲಿ ಕ್ಯಾರ್ ಚಂಡಮಾರುತದ ಬೆನ್ನಲ್ಲೇ "ಮಹಾ" ಚಂಡಮಾರುತ ಅಪ್ಪಳಿಸುವ ಸೂಚನೆ ದೊರೆತಿದೆ. ವಾರದ ಹಿಂದಷ್ಟೇ 'ಕ್ಯಾರ್' ಚಂಡಮಾರುತ ಕರಾವಳಿ ಜನರನ್ನು ಆತಂಕಕ್ಕೀಡು ಮಾಡಿತ್ತು. ಇದೀಗ ಮುಂದಿನ 24ಗಂಟೆಗಳಲ್ಲಿ ಮಹಾ ಚಂಡಮಾರುತ ಅಪ್ಪಳಿಸಲಿರುವುದಾಗಿ ತಿಳಿದುಬಂದಿದೆ.

48 ಗಂಟೆಗಳಲ್ಲಿ ಕರ್ನಾಟಕಕ್ಕೆ ಅಪ್ಪಳಿಸಲಿದೆ 'ಮಹಾ' ಚಂಡಮಾರುತ48 ಗಂಟೆಗಳಲ್ಲಿ ಕರ್ನಾಟಕಕ್ಕೆ ಅಪ್ಪಳಿಸಲಿದೆ 'ಮಹಾ' ಚಂಡಮಾರುತ

ಮಹಾ ಚಂಡಮಾರುತದ ಕಾರಣ, ನವೆಂಬರ್ 4ರವರೆಗೂ ಮೀನುಗಾರಿಕೆಗೆ ತೆರಳದಂತೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೋಸ್ಟ್​ ಗಾರ್ಡ್​ ಆಪರೇಟಿಂಗ್ ಕೇಂದ್ರದಿಂದ ಸೂಚನೆ ದೊರೆತಿದೆ. ಈ ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಸಮುದ್ರದಲ್ಲಿ ಭಾರೀ ಗಾಳಿ ಬೀಸುವ ಸಾಧ್ಯತೆಯಿರುವುದನ್ನು ತಿಳಿಸಿದೆ. 15 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಕರಾವಳಿ ಕಾವಲು ಪೊಲೀಸರು ಮೀನುಗಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಲಕ್ಷದ್ವೀಪ ಬಳಿ ವಾಯುಭಾರ ಕುಸಿತ ಹಿನ್ನೆಲೆ ಕರಾವಳಿ ತೀರಕ್ಕೆ ಮಹಾ ಚಂಡಮಾರುತ ಅಪ್ಪಳಿಸಲಿದ್ದು, ಇದರಿಂದಾಗಿ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

Maha Cyclone Effect In Karavali Districts In Next 24 Hours

ಕೇರಳ, ಕರ್ನಾಟಕದ ಕೇಂದ್ರ ಪೂರ್ವ ಅರಬ್ಬಿ ಸಮುದ್ರದಲ್ಲಿ ಮಹಾ ಚಂಡಮಾರುತ ಕಾಣಿಸಿಕೊಂಡಿದೆ. ಪಶ್ಚಿಮ ಕೇಂದ್ರ, ಉತ್ತರ ಪಶ್ಚಿಮ ಅರಬ್ಬಿ ಸಮುದ್ರದಲ್ಲೂ ಕ್ಯಾರ್ ಚಂಡಮಾರುತದ ಪ್ರಭಾವ ಮುಂದುವರೆದಿದೆ.

English summary
After the kyar cyclone, "maha" cyclone is ready to hit karavali district. It is expected to hit in next 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X