ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download
LIVE

ಬೃಂದಾವನ ಸೇರಿ ಕೃಷ್ಣನಲ್ಲಿ ಐಕ್ಯರಾದ 'ಯತಿ ಶ್ರೇಷ್ಠ' ಪೇಜಾವರ ಶ್ರೀ

|
Google Oneindia Kannada News

ಉಡುಪಿ, ಡಿಸೆಂಬರ್ 29: ಉಡುಪಿ ಕೃಷ್ಣ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಆರೋಗ್ಯ ಗಂಭೀರ ಸ್ಥಿತಿ ತಲುಪಿದ್ದು, ಅವರನ್ನು ಮಣಿಪಾಲದ ಆಸ್ಪತ್ರೆಯಿಂದ ಮಠಕ್ಕೆ ಸ್ಥಳಾಂತರಿಸಲಾಗಿದೆ.

ಶ್ರೀಗಳ ಆರೋಗ್ಯ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಶ್ರೀಗಳ ಕೊನೆಯ ಇಚ್ಛೆಯಂತೆ ಅವರನ್ನು ಜೀವರಕ್ಷಕ ಸಾಧನಗಳೊಂದಿಗೆ ಉಡುಪಿ ಮಠಕ್ಕೆ ಸ್ಥಳಾಂತರಿಸಲಾಗಿದ್ದು, ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

LIVE Updates About Pejawar Mutt Seer Vishwesha Teertha Swamiji

88 ವರ್ಷದ ಉಡುಪಿ ಶ್ರೀಗಳು ಉಸಿರಾಟದ ಸಮಸ್ಯೆಯಿಂದಾಗಿ ಡಿಸೆಂಬರ್ 20 ರಂದು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದಲೂ ದಿನೇ-ದಿನೇ ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು.

ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯ ಹಿರಿಯ ವೈದ್ಯರು ಶ್ರೀಗಳ ಆರೋಗ್ಯ ಸುಧಾರಣೆಗೆ ತೀವ್ರ ಪರಿಶ್ರಮ ಪಟ್ಟು ನಿನ್ನೆ ಕೈಚೆಲ್ಲಿದ್ದು, ಶ್ರೀಗಳು ಅಂತಿಮ ಕ್ಷಣಗಳನ್ನು ಕಳೆಯಲೆಂದು ಮಠಕ್ಕೆ ಕರೆದುಕೊಂಡು ಬರಲಾಗಿದೆ.

Newest FirstOldest First
9:43 PM, 29 Dec

ಪೇಜಾವರ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿ ಅವರು ಬೃಂದಾವನದಲ್ಲಿ ನೆಲೆಗೊಂಡರು. ಬೃಂದಾವನದ ಮೇಲೆ ತುಳಸಿ ನೆಡಲಾಗುತ್ತದೆ.
9:28 PM, 29 Dec

ಶ್ರೀಗಳ ಬ್ರಹ್ಮ ರಂಧ್ರದ ಮೇಲೆ ತೆಂಗಿನ ಕಾಯಿ ಒಡೆಯಲಾಯಿತು. ತೆಂಗಿನ ಕಾಯಿ ಒಡೆಯುವ ಮೂಲಕ ಬ್ರಹ್ಮ ರಂಧ್ರ ತೆರೆಯಬೇಕೆಂಬುದು ನಂಬಿಕೆ.
9:11 PM, 29 Dec

ಬೃಂದಾವನದ ಗುಂಡಿಯೊಳಗೆ ಶ್ರೀಗಳ ಪಾರ್ಥಿವ ಶರೀರ ಕೂರಿಸಿ, ಹತ್ತಿಯನ್ನು ಹಾಕಿ, ಎಳ್ಳು, ಉಪ್ಪು, ಗಿಂಡಿ, ಸಾಲಿಗ್ರಾಮ, ತುಳಸಿಗಳನ್ನು ಗುಂಡಿಯ ಒಳಗೆ ಹಾಕಲಾಗುತ್ತಿದೆ.
9:07 PM, 29 Dec

ಶ್ರೀಗಳು ತಮ್ಮ ಬೃಂದಾವನ ಎಲ್ಲಿ ಸ್ಥಾಪನೆ ಆಗಬೇಕೆಂದು ಮೊದಲೇ ಸೂಚಿಸಿದ್ದರೋ ಅದೇ ಜಾಗದಲ್ಲಿ ಬೃಂದಾವನ ನಿರ್ಮಾಣ ಮಾಡಲಾಗಿದೆ. ಬೃಂದಾವನದ ಗುಂಡಿಯೊಳಗೆ ಪಾರ್ಥಿವ ಶರೀರವನ್ನು ಇರಿಸಲಾಗಿದೆ.
9:02 PM, 29 Dec

ಬೃಂದಾವನಕ್ಕೆ ಪ್ರವೇಶ ಮಾಡುವ ಕಾರ್ಯ ಪ್ರಾರಂಭವಾಗಿದ್ದು, ಶ್ರೀಗಳ ಪಾರ್ಥಿವ ಶರೀರವನ್ನು ಬೃಂದಾವನದ ಗುಂಡಿಯ ಒಳಗೆ ಇಡಲಾಗಿದೆ. ಸುತ್ತಲೂ ನೆರೆದಿದ್ದ ಭಕ್ತಾದಿಗಳು 'ಜೈ ಶ್ರೀರಾಮ್' ಘೋಷಣೆಗಳನ್ನು ಕೂಗುತ್ತಿದ್ದಾರೆ.
8:21 PM, 29 Dec

ಬೃಂದಾವನಕ್ಕಾಗಿ ತೋಡಿದ ಗುಂಡಿಯ ಒಳಗೆ ಪೂಜೆ ಮಾಡಲಾಗುತ್ತಿದೆ. ಬೃಂದಾವನಕ್ಕಾಗಿ ತೋಡಿದ ಗುಂಡಿಯ ಒಳಗೆ ಪೂಜೆ ಮಾಡಲಾಗುತ್ತಿದೆ. ಪೂಜೆಯ ನಂತರ ಶ್ರೀಗಳ ಪಾರ್ಥಿವ ಶರೀರವನ್ನು ಗುಂಡಿಯ ಒಳಗೆ ಇಟ್ಟು ಮಣ್ಣು ಮುಚ್ಚಲಾಗುತ್ತದೆ.
7:32 PM, 29 Dec

ಬೃಂದಾವನ ಪ್ರವೇಶಕ್ಕೂ ಮುನ್ನಾ ಶ್ರೀಗಳ ಪಾರ್ಥಿವ ಶರೀರಕ್ಕೆ ಕೃಷ್ಣ ದರ್ಶನ ಮಾಡಿಸಲಾಗುತ್ತಿದೆ. ಅಂತಿಮವಾಗಿ ಶ್ರೀಗಳಿಗೆ ಕೃಷ್ಣದರ್ಶನ ಮಾಡಿಸಲಾಗುತ್ತಿದೆ. ಇದರ ನಂತರ ಶ್ರೀಗಳ ಪಾರ್ಥಿವ ಶರೀರವನ್ನು ಬೃಂದಾವನದೊಳಕ್ಕೆ ಇಡಲಾಗುತ್ತದೆ.
Advertisement
7:11 PM, 29 Dec

ಸಾಸಿವೆ, ಹತ್ತಿ, ಉಪ್ಪು, ಗಿಂಡಿ ಇನ್ನಿತರೆ ಪುಣ್ಯ ವಸ್ತುಗಳನ್ನು ಹಾಕಿ ಬೃಂದಾವನ ನಿರ್ಮಿಸಲಾಗಿದೆ. ಬೃಂದಾವನದ ಒಳಕ್ಕೆ ಜಪ ಮಾಡುವ ಭಂಗಿಯಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಇಡಲಾಗುತ್ತದೆ. ಹಾಗೆ ಇಡುವ ಮುನ್ನಾ ಶ್ರೀಗಳ ಬ್ರಹ್ಮರಂದ್ರಕ್ಕೆ ತೆಂಗಿನಕಾಯಿ ಇಡಲಾಗುತ್ತದೆ.
7:10 PM, 29 Dec

ಪ್ರಧಾನಿ ಮೋದಿ ಅವರು ಅಂತಿಮ ದರ್ಶನಕ್ಕೆ ಬರುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಈ ಮೊದಲೂ ಸಹ ವಿಶ್ವೇಶ ತೀರ್ಥರು ಪಂಚಮ ಪರ್ಯಾಯಕ್ಕೆ ಮೋದಿಗೆ ಆಹ್ವಾನಿ ನೀಡಿದ್ದರು, ಆಗಲೂ ಮೋದಿ ಬಂದಿರಲಿಲ್ಲ. ಸಿದ್ದಗಂಗಾ ಶ್ರೀಗಳು ಕಾಲವಾದಗಲೂ ಅವರು ಅಂತಿಮ ದರ್ಶನಕ್ಕೆ ಬಂದಿರಲಿಲ್ಲ.
7:06 PM, 29 Dec

ಸರ್ಕಾರಿ ಗೌರವ ವಂದನೆ ಮುಗಿದಿದ್ದು, ಅಂತಿಮ ವಿಧಿ-ವಿಧಾನಗಳು ಆರಂಭಗೊಂಡಿದೆ. ಕೆಲವೇ ನಿಮಿಷಗಳಲ್ಲಿ ಶ್ರೀಗಳ ಬೃಂದಾವನ ಪ್ರವೇಶ ಆಗಲಿದೆ.
6:50 PM, 29 Dec

ಸಾಸಿವೆ, ಹತ್ತಿ, ಉಪ್ಪು ಇನ್ನಿತರೆ ಪುಣ್ಯ ವಸ್ತುಗಳನ್ನು ಹಾಕಿ ಬೃಂದಾವನ ನಿರ್ಮಾಣ ಮಾಡಲಾಗಿದೆ.
6:44 PM, 29 Dec

ವಿದ್ಯಾಪೀಠದಲ್ಲಿ ಶ್ರೀಗಳ ಅಂತಿಮ ವಿಧಿ-ವಿಧಾನಕ್ಕೆ ಸಕಲ ಸಿದ್ಧತೆ ಈಗಾಗಲೇ ಪೂರ್ಣಗೊಂಡಿದ್ದು, ಕಿರಿಯ ಯತಿಗಳು, ಅಷ್ಟಮಠದ ಏಳು ಶ್ರೀಗಳು ವಿದ್ಯಾಪೀಠಕ್ಕೆ ಆಗಮಿಸಿದ್ದಾರೆ. ವಿಶ್ವ ಪ್ರಸನ್ನ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ಅಂತಿಮ ವಿಧಿ-ವಿಧಾನ ನಡೆಯಲಿದೆ.
Advertisement
6:41 PM, 29 Dec

ಶ್ರೀಗಳ ಪಾರ್ಥಿವ ಶರೀರವನ್ನು ವಿದ್ಯಾಪೀಠಕ್ಕೆ ತರಲಾಗಿದ್ದು, ಸರ್ಕಾರಿ ಗೌರವ ವಂದನೆಗಳನ್ನು ನೆರವೇರಿಸಲಾಗುತ್ತಿದೆ.
5:43 PM, 29 Dec

ಸಿಎಂ ಯಡಿಯೂರಪ್ಪ ಅವರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶ್ರೀಗಳ ಅಂತಿಮ ದರ್ಶನ ಪಡೆದರು. ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ಅಂತಿಮ ದರ್ಶನ ಪಡೆದರು.
4:45 PM, 29 Dec

ವಿದ್ಯಾಪೀಠ ದಲ್ಲಿ ಖಾಸಗಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತೇವೆ, ವಿಶ್ವ ಪ್ರಸನ್ನ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ಅಂತಿಮ ವಿಧಿ-ವಿಧಾನ ನಡೆಯಲಿದೆ. ಒಂದು ಮಾತು, ಒಂದು ನಗುವಿನಲ್ಲಿ ಎಲ್ಲರನ್ನು ಮಂತ್ರಮುಘ್ದಗೊಳಿಸುತ್ತಿದ್ದರು ಶ್ರೀಗಳು, ತಮ್ಮ ಮುಗ್ಧತೆಯಿಂದಲೇ ವಾಜಪೇಯಿಯಿಂದ ಹಿಡಿದು ಎಲ್ಲ ನಾಯಕರನ್ನು ಸೆಳೆಯುತ್ತಿದ್ದರು. ಅವರಿಗೆ ಗಲಾಟೆ ಅಂದ್ರೆ ಆಗುತ್ತಿರಲಿಲ್ಲ, ಶಾಂತಿ ಶಾಂತಿ ಅಂತಲೇ ಹೇಳುತ್ತಿದ್ದರು. ಇವರ ಅಗಲಿಕೆಯಿಂದ ಅಪರಿಮಿತ ಆಘಾತವಾಗಿದೆ ಎಂದು ಕೇಶವಾಚಾರ್ಯ ಹೇಳಿದ್ದಾರೆ.
4:42 PM, 29 Dec

ಪೇಜಾವರ ಶ್ರೀಗಳ ಪಾರ್ಥಿವ ಶರೀರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿದರು.
4:14 PM, 29 Dec

ನ್ಯಾಷನಲ್ ಕಾಲೇಜು ಮೈದಾನಕ್ಕೆ ವಿಶ್ವೇಶ ತೀರ್ಥ ಸ್ವಾಮೀಜಿಗಳ ಪಾರ್ಥಿವ ಶರೀರವನ್ನು ತರಲಾಗಿದೆ. ಮೈದಾನದಲ್ಲಿ ಎರಡು ಗಂಟೆ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ವಿದ್ಯಾಪೀಠದಲ್ಲಿ ಅಂತಿಮ ವಿಧಿ-ವಿಧಾನ ನೆರವೇರಿಸಲಾಗುವುದು.
1:58 PM, 29 Dec

ಪೇಜಾವರ ಶ್ರೀ ಗಳ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಅಪಾರ ಭಕ್ತರಿಗೆ ದುಖಃ ಭರಿಸುವ ಶಕ್ತಿ ದೇವರು ನೀಡಲಿ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
1:37 PM, 29 Dec

ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಾರ್ಥಿವ ಶರೀರಕ್ಕೆ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಸರ್ಕಾರದ ಪರವಾಗಿ ಗೌರವ ಸಲ್ಲಿಸಿದರು.
1:25 PM, 29 Dec

ವಿಶ್ವೇಶ ತೀರ್ಥರ ಬೃಂದಾವನ ನಿರ್ಮಾಣಕ್ಕೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಸಿದ್ಧತೆ ನಡೆದಿದೆ.
12:44 PM, 29 Dec

ಆರ್.ಅಶೋಕ್ ತೀವ್ರ ಸಂತಾಪ

ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ನಿಧನಕ್ಕೆ ಕಂದಾಯ ಸಚಿವರಾದ ಆರ್.ಅಶೋಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಶ್ರೀಗಳ ನಿಧನದ ಸುದ್ದಿ ಕೇಳಿ ತುಂಬಾ ನೋವಾಗಿದೆ. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಸಮಸ್ತ ಭಕ್ತರಿಗೆ ದು:ಖ ಭರಿಸುವ ಶಕ್ತಿಯನ್ನು ನೀಡುವಂತಾಗಲಿ.’ ಎಂದು ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ
12:42 PM, 29 Dec

ಪೇಜಾವರ ಶ್ರೀಗಳು ಹಿಂದೂ ಸಮಾಜಕ್ಕೆ ಬಹುದೊಡ್ಡ ಶಕ್ತಿಯಾಗಿದ್ದರು:ಶೆಟ್ಟರ್

ಪೇಜಾವರ ಶ್ರೀಗಳು ಹಿಂದೂ ಸಮಾಜಕ್ಕೆ ಒಂದು ಬಹುದೊಡ್ಡ ಶಕ್ತಿಯಾಗಿದ್ದರು.ಹಿಂದೂ ಸಮಾಜಕ್ಕೆ ಯಾವುದೇ ಧಕ್ಕೆಯಾದರೆ ಅದರ ವಿರುದ್ಧ ಧ್ವನಿ ಎತ್ತುವ ಮೂಲಕ ಪ್ರಾಶಸ್ತ್ಯ ನೀಡುತ್ತಿದ್ದರು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಪೇಜಾವರ ಶ್ರೀಗಳು ವಿಧಿವಶರಾದ ಹಿನ್ನೆಲೆಯಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಅಗಲಿಕೆ ಹಿಂದೂ ಸಮಾಜಕ್ಕೆ, ದೇಶಕ್ಕೆ ತುಂಬಲಾರದ ನಷ್ಟ ತಂದಿದೆ
12:42 PM, 29 Dec

ಪೇಜಾವರ ಶ್ರೀಗಳ ನಿಧನಕ್ಕೆ ಹೊರಟ್ಟಿ ಸಂತಾಪ

ಉಡುಪಿ ಕೃಷ್ಣಮಠದ ಪೇಜಾವರ ಶ್ರೀಗಳ ನಿಧನ‌ ನಾಡಿಗೆ ನೋವನ್ನು ತಂದಿದೆ. ರಾಜ್ಯ ಹಾಗೂ ದೇಶಕ್ಕೆ ದೊಡ್ಡ ನಷ್ಟವಾಗಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
12:41 PM, 29 Dec

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
12:40 PM, 29 Dec

ಬೆಂಗಳೂರಿನತ್ತ ಪೇಜಾವರ ಶ್ರೀಗಳ ಪಾರ್ಥಿವ ಶರೀರ

ಏರ್‌ಲಿಫ್ಟ್‌ ಮೂಲಕ ಪೇಜಾವರ ಶ್ರೀಗಳ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತಿದ್ದು, ಮೊದಲು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ.
12:36 PM, 29 Dec

ಏರ್‌ಲಿಫ್ಟ್‌ ಮೂಲಕ ಪೇಜಾವರ ಶ್ರೀಗಳ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದ್ದು, ಮೊದಲು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ.
12:03 PM, 29 Dec

ಪೀಠದಲ್ಲಿ ಕುಳ್ಳಿರಿಸಿ ರಥಬೀದಿ ಮೂಲಕ ಅಜ್ಜರ ಕಾಡು ಮೈದಾನದತ್ತ ಶ್ರೀಗಳ ಪಾರ್ಥಿವ ಶರೀರ
11:50 AM, 29 Dec

ಉಡುಪಿಯ ಅಜ್ಜರ ಕಾಡು ಸ್ಟೇಡಿಯಂನಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
11:24 AM, 29 Dec

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಂದ ಸಂತಾಪ

ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳು ಕೃಷ್ಣೈಕ್ಯರಾದರು ಎಂಬ ವಿಷಯ ತೀವ್ರ ಆಘಾತವನ್ನುಂಟುಮಾಡಿದೆ. ಸಮಾಜದ ಅಸಮಾನತೆಗಳ ವಿರುದ್ಧ ಧ್ವನಿಯಾಗಿದ್ದ ಶ್ರೀಗಳ ಚಿಂತನೆಗಳು ನಮ್ಮೆಲ್ಲರಿಗೂ ಮಾದರಿ. ಶ್ರೀಗಳ ಭಕ್ತವೃಂದಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
11:23 AM, 29 Dec

ಕುಮಾರಸ್ವಾಮಿ ಸಂತಾಪ

ಶ್ರೀಗಳ ಅಗಲಿಕೆಯಿಂದ ನಾಡಿನ ಭಕ್ತ ವೃಂದ ಅಪಾರ ಶೋಕಸಾಗರದಲ್ಲಿ ಮುಳುಗಿದೆ. ಶ್ರೀಮಂತ ಪರಂಪರೆಯ ಸಂತರೊಬ್ಬರ ಕೊಂಡಿ ಕಳಚಿದಂತಾಗಿದೆ. ಕೃಷ್ಣನಲ್ಲಿ ಲೀನವಾದ ಪೇಜಾವರ ಶ್ರೀಗಳ ಆತ್ಮ ಚಿರಶಾಂತಿ ಹೊಂದಲಿ. ಭಾವಪೂರ್ಣ ಶ್ರದ್ಧಾಂಜಲಿ. ಪರಮಪೂಜ್ಯ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಸದಾ ಜೀವನೋತ್ಸಾಹದ ಚಿಲುಮೆಯಂತಿದ್ದ ಶ್ರೀ ಗಳು ಸಮಾಜಮುಖಿ ನಿಲುವಿನ ಶ್ರೇಷ್ಠ ಸಂತರಾಗಿದ್ದರು. ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಶ್ರೀಗಳ ನಿಧನದಿಂದ ನಾಡು ಬಡವಾಗಿದೆ.
READ MORE

English summary
Pejawar Mutt Seer Vishwesha Teertha Swamiji's passed away in Udupi Krishna Mutt on December 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X