ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಮಠದಲ್ಲಿ ತಪ್ತ ಮುದ್ರಾಧಾರಣೆ; ನೂರಾರು ಭಕ್ತರ ಆಗಮನ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 20; ಮಾಧ್ವ ಸಂಪ್ರದಾಯದಲ್ಲಿ ತಪ್ತ ಮುದ್ರಾಧಾರಣೆ ವಿಶೇಷ ಮಹತ್ವ ಪಡೆದಿದೆ. ಮಠಾಧೀಶರ ಮೂಲಕ ತಪ್ತ ಮುದ್ರೆ ಹಾಕಿಸಿಕೊಂಡರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎನ್ನುವುದು ಭಕ್ತರ ನಂಬಿಕೆ.

ಮಾದ್ವ ಮತದ ಮೂಲಕೇಂದ್ರವಾಗಿರುವ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನೂರಾರು ಭಕ್ತರು ಮುದ್ರಾಧಾರಣೆ ಮಾಡಿಸಿಕೊಂಡರು. ಮಠದ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಈಶಪ್ರಿಯ ತೀರ್ಥರಿಂದ ಭಕ್ತರು ಮುದ್ರೆ ಧಾರಣೆ ಮಾಡಿಸಿಕೊಂಡರು.

 ತಪ್ತ ಮುದ್ರಾಧಾರಣೆ: ಶೀರೂರು ಮಠದ ಭಕ್ತರಲ್ಲಿ ಮಡುಗಟ್ಟಿದ ದುಃಖ ತಪ್ತ ಮುದ್ರಾಧಾರಣೆ: ಶೀರೂರು ಮಠದ ಭಕ್ತರಲ್ಲಿ ಮಡುಗಟ್ಟಿದ ದುಃಖ

ಉಡುಪಿ ಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆ ಎನ್ನುವ ವಿಶೇಷ ಸಂಪ್ರದಾಯವಿದೆ. ಪರ್ಯಾಯ ಮಠಾಧೀಶರಿಂದ ಮುದ್ರೆ ಹಾಕಿಸಿಕೊಂಡರೆ ರೋಗ ರುಜಿನಗಳು ದೂರವಾಗಿ, ಕೃಷ್ಣನ ಅನುಗ್ರಹ ಪ್ರಾಪ್ತಿ ಆಗುತ್ತದೆ ಎನ್ನುವುದು ಗೋಪಾಲನ ಭಕ್ತರ ನಂಬಿಕೆಯಾಗಿದೆ.

ಉಡುಪಿ; ಸ್ಫೋಟಕ ತಿರುವು ಪಡೆದ ವಿಶಾಲ ಗಾಣಿಗ ಕೊಲೆ ಕೇಸ್!ಉಡುಪಿ; ಸ್ಫೋಟಕ ತಿರುವು ಪಡೆದ ವಿಶಾಲ ಗಾಣಿಗ ಕೊಲೆ ಕೇಸ್!

Large Number Of People Witness For Tapta Mudra Dharana

ಸರ್ವಜ್ಞ ಪೀಠಾರೂಢ ಯತಿಗಳಲ್ಲಿ ಆಚಾರ್ಯ ಮಧ್ವರು ಸನ್ನಿಹಿತರಾಗಿರುತ್ತಾರೆ ಎಂಬ ನಂಬಿಕೆ ಕೂಡಾ ಇದೆ. ಕೇವಲ ಯತಿಗಳಿಂದ ಮಾತ್ರ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕೆಂಬ ಪದ್ಧತಿ ಕೂಡ ಇದೆ. ವಿಷ್ಣುವಿನ ಆಯುಧಗಳಾದ ಶಂಖ ಮತ್ತು ಚಕ್ರದ ಚಿಹ್ನೆಗಳನ್ನು ಬಿಸಿಯಿಂದ ಕಾದ ಲೋಹದ ಮೂಲಕ ಮೈಮೇಲೆ ಧರಿಸುವ ಸಂಪ್ರದಾಯ ಇದೆ.

ಬಸವನಗುಡಿಯ ಉತ್ತರಾಧಿಮಠದಲ್ಲಿ ತಪ್ತ ಮುದ್ರಾಧಾರಣೆ ಬಸವನಗುಡಿಯ ಉತ್ತರಾಧಿಮಠದಲ್ಲಿ ತಪ್ತ ಮುದ್ರಾಧಾರಣೆ

ಬ್ರಹ್ಮಾದಿ ದೇವತೆಗಳು ಕೂಡಾ ಮುದ್ರಾಧಾರಣೆ ಮಾಡಿಕೊಳ್ಳುತ್ತಾರೆ. ಶ್ರೀ ಮಧ್ವಚಾರ್ಯರು ಈ ದಿನವೇ ಸ್ವರ್ಗದಲ್ಲಿ ಎಲ್ಲಾ ದೇವತೆಗಳಿಗೆ ಮುದ್ರಾಧಾರಣೆ ಮಾಡಿಸುತ್ತಾರೆ ಎಂಬ ಕಥೆಯಿದೆ. ಪುರುಷರು ಪಂಚಮುದ್ರೆಯನ್ನು ಇರಿಸಿಕೊಂಡರೆ, ಮಹಿಳೆಯರು ಎಡತೋಳಿಗೆ ಶಂಖ ಮತ್ತು ಬಲತೋಳಿಗೆ ಚಕ್ರಮುದ್ರೆ ಇರಿಸಿಕೊಳ್ಳುತ್ತಾರೆ.

Large Number Of People Witness For Tapta Mudra Dharana

ರೋಧಿಸುತ್ತಲೇ ಮುದ್ರೆ ಇರಿಸಿಕೊಳ್ಳುವ ಮಕ್ಕಳು ಮತ್ತು ವೃದ್ಯಾಪ್ಯದಲ್ಲೂ ಬಿಸಿಲೋಹವನ್ನು ಮೈಮೇಲೆ ಇರಿಸಿಕೊಳ್ಳುವ ಇಳಿವಯಸ್ಸಿನವರ ಹುಮ್ಮಸ್ಸು ಮುದ್ರಾಧಾರಣೆಯ ವಿಶೇಷ. ಸುದರ್ಶನ ಹೋಮಕುಂಡದಲ್ಲಿ ಶಂಖ, ಚಕ್ರದ ಲೋಹದ ಅಚ್ಚು ಇರಿಸಿ ಮುದ್ರಾಧಾರಣೆ ಮಾಡುವುದರಿಂದ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

ಉಡುಪಿಯ ಅಷ್ಟಮಠಾಧೀಶರು ಕೂಡಾ ವಿವಿಧೆಡೆ ತೆರಳಿ ಈ ದಿನ ಭಕ್ತರಿಗೆ ಮುದ್ರಾಧಾರಣೆ ಮಾಡುತ್ತಾರೆ. ಮುದ್ರೆಧಾರಣೆಯಿಂದ ಸರ್ವ ರೋಗ ರುಜಿನಗಳು ನಿವಾರಣೆಯಾಗಿ ಲೋಕ ಕಲ್ಯಾಣ ಆಗುತ್ತೆ ಎನ್ನುವ ನಂಬಿಕೆ ಭಕ್ತರದ್ದು.

English summary
The ritual of Tapta Mudra Dharana was held at the Sri Krishna Mutt Udupi on July 20, 2021. Large number of people witnessed for the ritual.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X