ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಕನ್ನಡಾಭಿಮಾನಿಯ ಪುತ್ರಿಯ ಹೆಸರು 'ಕನ್ನಡ ಶೆಟ್ಟಿ'!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 8: ಕರ್ನಾಟಕ ರಾಜ್ಯದಲ್ಲಿ ಹಿಂದಿ ಹೇರಿಕೆ ಕುರಿತು ಚರ್ಚೆ ಜೋರಾಗಿ ನಡೆದಿರುವ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ಕನ್ನಡಾಭಿಮಾನಿಯೊಬ್ಬರು ತಮ್ಮ ಪುತ್ರಿಗೆ "ಕನ್ನಡ ಶೆಟ್ಟಿ' ಎಂದು ನಾಮಕರಣ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದಿದ್ದಾರೆ.

ಇಂಟಿರಿಯರ್ ಡಿಸೈನಿಂಗ್ ಕಾಂಟ್ರಾಕ್ಟರ್ ಆಗಿರುವ ಕುಂದಾಪುರದ ಪ್ರತಾಪ್, ಬೆಂಗಳೂರಿನ ಬನ್ನೇರುಘಟ್ಟದಲ್ಲಿ ವಾಸವಾಗಿದ್ದಾರೆ. ಕೆಲಸದ ಪ್ರಯುಕ್ತ ಅವರು ತಮಿಳುನಾಡಿಗೆ ಹೋದಾಗಲೆಲ್ಲ ಅಲ್ಲಿನ ತಮಿಳು ವೆಲ್ವಿ, ತಮಿಳರಸನ್ ಮತ್ತು ತಮಿಳ್ ದೊರೈ ಹೆಸರುಗಳು ಅವರನ್ನು ಆಕರ್ಷಿಸಿಸುತ್ತಿದ್ದವು.

ಅಜ್ಜಿ ಆಸ್ತಿಯನ್ನೇ ಲಪಟಾಯಿಸಿದ ಮೊಮ್ಮಗಳು: ಉಡುಪಿಯಲ್ಲೊಂದು ಮನ ಕಲಕುವ ಘಟನೆಅಜ್ಜಿ ಆಸ್ತಿಯನ್ನೇ ಲಪಟಾಯಿಸಿದ ಮೊಮ್ಮಗಳು: ಉಡುಪಿಯಲ್ಲೊಂದು ಮನ ಕಲಕುವ ಘಟನೆ

ಕಳೆದ 25 ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲ ಕಂಡುಕೊಂಡಿರುವ ಪ್ರತಾಪ್ ಶೆಟ್ಟಿ ಅವರು ಬಹಿರಂಗವಾಗಿ ಎಲ್ಲಿಯೂ ಕನ್ನಡಾಭಿ ಮಾನವನ್ನು ಹೇಳಿಕೊಳ್ಳುವುದಿಲ್ಲ. ಆದರೆ ಕನ್ನಡ ಭಾಷೆಯ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದಾರೆ.

Udupi: Kundapura Couple Name Their Newborn Baby Girl Kannada Shetty After She Born In November Month

ಸಾಮಾನ್ಯವಾಗಿ ಇಂದಿನ ಕಾಲದಲ್ಲಿ ಮಗುವಿನ ಹೆಸರನ್ನು ಇಡೋದಕ್ಕೆ ಗೂಗಲ್ ನಲ್ಲಿ ಸರ್ಚ್ ಮಾಡುವವರೇ ಹೆಚ್ಚು. ಅದರಲ್ಲೂ ಅರ್ಥವಿಲ್ಲದ ಹೆಸರನ್ನು ಇಡುವವರು ಇನ್ನೊಂದಿಷ್ಟು ಜನ ಇದ್ದಾರೆ.

ತಮಿಳುನಾಡಿನ ಜನರ ಭಾಷಾಭಿಮಾನ ಹಾಗೂ ರಾಜ್ಯಾಭಿಮಾನದಿಂದ ಸ್ಫೂರ್ತಿ ಪಡೆದುಕೊಂಡ ಕನ್ನಡ ಪ್ರೇಮಿ ಪ್ರತಾಪ್, ನವೆಂಬರ್ ನಲ್ಲಿ ಜನಿಸಿದ ತನ್ನ ಮಗಳಿಗೂ ಏಕೆ ಭುವನೇಶ್ವರಿ ಅಥವಾ ಕನ್ನಡ ಎಂಬ ಹೆಸರಿಡಬಾರದು ಎಂಬ ಯೋಚನೆ ಬಂದಿದೆ.

Udupi: Kundapura Couple Name Their Newborn Baby Girl Kannada Shetty After She Born In November Month

Recommended Video

Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02

ಇದನ್ನೇ ತಮ್ಮ ಪತ್ನಿ ಜೊತೆ ಹೇಳಿಕೊಂಡಾಗ ಪತ್ನಿ ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಮಗಳಿಗೆ "ಕನ್ನಡ ಶೆಟ್ಟಿ' ಎಂದು ನಾಮಕರಣ ಮಾಡಿದ್ದಾರೆ.

English summary
Couple Named Their Newborn Baby Girl 'Kannada Shetty', in kundapura taluk, udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X