ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಂಡೂ ಹೋದ ಕೊಂಡೂ ಹೋದ ಸರ್ಕಾರ; ಕೋಟ ಶ್ರೀನಿವಾಸ್ ವ್ಯಂಗ್ಯ

|
Google Oneindia Kannada News

ಉಡುಪಿ, ಜುಲೈ 13: ರಾಜ್ಯದಲ್ಲಿ ಉಂಡೂ ಹೋದ ಕೊಂಡೂ ಹೋದ ಸರ್ಕಾರ ಇದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದ್ದಾರೆ. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಬಹುಮತ ಕಳೆದುಕೊಂಡಿದ್ದು ಖಚಿತವಾಗಿದೆ. ಬಹುಮತ ಇಲ್ಲದ ಪಕ್ಷವನ್ನು ಸದನದಲ್ಲಿ ಬಿಜೆಪಿ ಎದುರಿಸಬೇಕಾಗಿದೆ. ನೆಪಗಳನ್ನು ಹೇಳದೆ ಸಿಎಂ ಕುಮಾರಸ್ವಾಮಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಹೇಳಿದರು.

ಸುಪ್ರೀಂ ಕೋರ್ಟ್ ವ್ಯಾಪ್ತಿಯನ್ನು ಸ್ಪೀಕರ್ ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ವಿಶ್ವಾಸಮತ ಸಂದರ್ಭದಲ್ಲಿ ವಿಪಕ್ಷವಾಗಿ ನಡುರಾತ್ರಿ ಕೋರ್ಟ್ ಮೆಟ್ಟಿಲೇರಿದ್ದರು. 48 ಗಂಟೆಯಲ್ಲಿ ಸಾಬೀತು ಮಾಡುವ ನಿರ್ದೇಶನ ಪಡೆದಿದ್ದರು. ಅಂದು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿಲ್ವಾ. ಈಗ್ಯಾಕೆ ಸುಪ್ರೀಂ ಮಧ್ಯ ಪ್ರವೇಶಕ್ಕೆ ಆಕ್ಷೇಪ ಮಾಡ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

 ನಿಂಬೆಹಣ್ಣು ರೇವಣ್ಣನಿಂದ ವಾಮಾಚಾರ: ರೇಣುಕಾಚಾರ್ಯ ಟೀಕೆ ನಿಂಬೆಹಣ್ಣು ರೇವಣ್ಣನಿಂದ ವಾಮಾಚಾರ: ರೇಣುಕಾಚಾರ್ಯ ಟೀಕೆ

ಸರ್ಕಾರ ರಾಜೀನಾಮೆ ನೀಡಿರುವ ಶಾಸಕರ ಮೇಲೆ ಎಸಿಬಿ ಪ್ರಯೋಗ ಮಾಡಿ ಒತ್ತಡ ಹೇರಲು ಪ್ರಯತ್ನ ಮಾಡುತ್ತಿದೆ. ಎಸಿಬಿ ಮುಖ್ಯಸ್ಥನಾಗಿ ನಿಂಬಾಳ್ಕರ್ ಇದ್ದಾರೆ. ರಾಜೀನಾಮೆ ಕೊಟ್ಟ ಶಾಸಕರನ್ನು ಬಗ್ಗುಬಡಿಯಲು ಎಸಿಬಿ ಬಳಸುವ ಆತಂಕ ಇದೆ ಎಂದು ಹೇಳಿದರು.

kumaraswamy should resign immediately said kota srinivas poojary

ರೇವಣ್ಣ ಹಸ್ತಕ್ಷೇಪ ಮಾಡಿ ಸಾವಿರಾರು ಕೋಟಿ ದಂಧೆ ಮಾಡಿದ್ದಾರೆ. ಸ್ವತಃ ಶಾಸಕ ಮುನಿರತ್ನ ಈ ಬಗ್ಗೆ ಆರೋಪಿಸುತ್ತಿದ್ದಾರೆ. ಲೋಕೋಪಯೋಗಿ ಮಂತ್ರಿ 800 ಇಂಜಿನಿಯರ್ ಗಳ ವರ್ಗಾವಣೆ ಮಾಡಿದ್ದಾರೆ. ಬಹುಮತ ಕಳೆದುಕೊಂಡ ಸರ್ಕಾರದ ಮಂತ್ರಿಯಿಂದ ಅಕ್ರಮವಾಗಿದೆ ಎಂದು ಅವರು ಆರೋಪಿಸಿದರು.

ಈ ವರ್ಗಾವಣೆಯಲ್ಲಿ ರೇವಣ್ಣ ನೂರಾರು ಕೋಟಿ ಕಮಿಷನ್ ಹೊಡೆದ ಸಂಶಯ ಇದೆ. ಈ ನಡುವೆ ಪೊಲೀಸ್ ಇಲಾಖೆಯ ವರ್ಗಾವಣೆ ತಡೆಹಿಡಿಯಲಾಗಿದೆ. ಈ ಹಿನ್ನೆಲೆಯಲ್ಲಿ ಇಂಜಿನಿಯರ್ ಗಳ ವರ್ಗಾವಣೆಯನ್ನೂ ತಕ್ಷಣ ತಡೆಹಿಡಿಯಬೇಕು ಎಂದು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಕೋಟ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದ್ದಾರೆ.

ಮನವೊಲಿಕೆ ಸಕ್ಸಸ್!? ಒಂದು ಕಾಲು ಹಿಂದೆ ಇಟ್ಟರೇ ಎಂಟಿಬಿ ನಾಗರಾಜ್?ಮನವೊಲಿಕೆ ಸಕ್ಸಸ್!? ಒಂದು ಕಾಲು ಹಿಂದೆ ಇಟ್ಟರೇ ಎಂಟಿಬಿ ನಾಗರಾಜ್?

ಡಿಕೆಶಿ ಎಷ್ಟೇ ಒತ್ತಡ ತಂದ್ರೂ ಎಂಟಿಬಿ ಬದಲಾಗೋಲ್ಲ ಅನ್ನೋ ವಿಶ್ವಾಸ ಇದೆ. ಸಾ.ರಾ ಮಹೇಶ್ ಮತ್ತು ಈಶ್ವರಪ್ಪ ಭೇಟಿ ಕೇವಲ ಆಕಸ್ಮಿಕ. ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬೀಳ್ತೀವಾ? ಎಂದು ಹೇಳಿದ ಅವರು, ಸಿದ್ದರಾಮಯ್ಯಗೆ ವಿರೋಧ ಪಕ್ಷ ನಾಯಕನಾಗೋದೇ ಉತ್ತಮ ಅಂತನಿಸಿದೆ. ಕಾಂಗ್ರೆಸ್ ಉಳಿಸಿಕೊಳ್ಳಬೇಕೆಂದರೆ ಜೆಡಿಎಸ್ ಗೆ ನೀಡಿದ ಬೆಂಬಲ ವಾಪಸ್ ಪಡೆಯಲೇಬೇಕು ಎಂದರು.

ಬುಧವಾರ ವಿಶ್ವಾಸಮತ ಸಾಬೀತು ಅಸಾಧ್ಯ. ರಾಜ್ಯ ಸರ್ಕಾರ ಬೀಳುವುದು ಖಚಿತ ಎಂದು ಭವಿಷ್ಯ ನುಡಿದರು.

English summary
The government lost its majority. The BJP has to face a non-majority party in the House. CM Kumaraswamy should resign immediately said MLC Kota Srinivas Poojari,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X