ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಣಿಪಾಲ-ಕೆಐಎಎಲ್‌ನಡುವೆ ಜ.3ರಿಂದ ಫ್ಲೈ ಬಸ್ ಸೇವೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 23 : ಕೆಎಸ್ಆರ್‌ಟಿಸಿ ಕೆಐಎಎಲ್‌-ಮಣಿಪಾಲ ಮಾರ್ಗದಲ್ಲಿ ಫ್ಲೈ ಬಸ್ ಓಡಿಸಲಿದೆ. ಜನವರಿ 3ರಿಂದ ಬಸ್ ಸಂಚಾರ ನಡೆಸಲಿದ್ದು, 1250 ರೂ. ದರ ನಿಗದಿ ಮಾಡಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಉಡುಪಿಯ ಜಿಲ್ಲೆಯ ಮಣಿಪಾಲ್ ನಡುವೆ ಫ್ಲೈ ಬಸ್ ಸಂಪರ್ಕ ಕಲ್ಪಿಸಲಿದೆ.

ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿದಿನ ರಾತ್ರಿ 10ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 6.45ಕ್ಕೆ ಮಣಿಪಾಲಕ್ಕೆ ತಲುಪಲಿದೆ. ಮಣಿಪಾಲದಿಂದ ರಾತ್ರಿ 8.15ಕ್ಕೆ ಹೊರಟು ಬೆಳಗ್ಗೆ 6ಕ್ಕೆ ಕೆಐಎಎಲ್ ತಲುಪಲಿದೆ.

ಬಸ್ಸಿನಲ್ಲೇ ಆಹಾರ, ಟಾಯ್ಲೆಟ್; ರಸ್ತೆಗಿಳಿದ ಐಶಾರಾಮಿ 'ಐರಾವತಬಸ್ಸಿನಲ್ಲೇ ಆಹಾರ, ಟಾಯ್ಲೆಟ್; ರಸ್ತೆಗಿಳಿದ ಐಶಾರಾಮಿ 'ಐರಾವತ

KSRTC to start flybus service to Manipal from Bengaluru International Airport

ಪಿಕ್‌ಅಪ್‌ಗೆ ಅವಕಾಶ : ಕೆಎಸ್ಆರ್‌ಟಿಸಿ ಕೆಐಎಎಲ್-ಮಡಿಕೇರಿ ಮಾರ್ಗದ ಫ್ಲೈ ಬಸ್‌ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಬಳಿ ಪಿಕ್ ಅಪ್‌ಗೆ ಅವಕಾಶ ನೀಡಿದೆ. ಜನವರಿ 3ರಿಂದ ಇನ್ಫೋಸಿಸ್‌ ಬಳಿ ಬಸ್ ಏರಬಹುದಾಗಿದೆ.

ಬೆಂಗಳೂರು-ಶ್ರೀಹರಿಕೋಟಾ ನಡುವೆ ಕೆಎಸ್ಆರ್‌ಟಿಸಿ ಐರಾವತ ಬಸ್ ಸೇವೆಬೆಂಗಳೂರು-ಶ್ರೀಹರಿಕೋಟಾ ನಡುವೆ ಕೆಎಸ್ಆರ್‌ಟಿಸಿ ಐರಾವತ ಬಸ್ ಸೇವೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲು ಕೆಎಸ್ಆರ್‌ಟಿಸಿ 2013ರಲ್ಲಿ ಫ್ಲೈ ಬಸ್ ಸೇವೆಯನ್ನು ಆರಂಭಿಸಿದೆ.

ಇವು ಐಷಾರಾಮಿ ಬಸ್‌ಗಳಾಗಿದ್ದು, ಉಪಹಾರ ಮತ್ತು ಶೌಚಾಲಯದ ಸೌಲಭ್ಯವನ್ನು ಬಸ್ ಹೊಂದಿದೆ. ನಗರ ಸಂಚಾರ ದಟ್ಟಣೆಗೆ ಸಿಲುಕದೇ ಈ ಬಸ್‌ಗಳು ನೇರವಾಗಿ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಪ್ರಯಾಣ ಬೆಳೆಸಲಿವೆ.

English summary
Karnataka State Road Transport Corporation will start flybus service to Manipal from Kempegowda International Airport, Bengaluru from January 3, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X