ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 2ರಿಂದ ಆಗುಂಬೆ ಮೂಲಕ ಶಿವಮೊಗ್ಗ-ಉಡುಪಿ ಬಸ್ ಸಂಚಾರ

ಆಗುಂಬೆ ಮಾರ್ಗವಾಗಿ ಮೇ 2ರಿಂದ ಉಡುಪಿ-ಶಿವಮೊಗ್ಗ ಮಧ್ಯೆ ಕೆಎಸ್ಆರ್ ಟಿಸಿ ಬಸ್ ಸಂಚಾರ ಆರಂಭವಾಗಿದೆ. ಈ ಹಿಂದೆ ಕುಂದಾಪುರ ಮಾರ್ಗವಾಗಿ ಸುತ್ತಾಡಿ ಬರಬೇಕಿತ್ತು. ಈಗ ಆ ಸಮಸ್ಯೆ ಇಲ್ಲ. ಇನ್ನು ಬಸ್ಸಿನ ವೇಳಾಪಟ್ಟಿ ಸಹ ಈ ವರದಿಯಲ್ಲಿದೆ

|
Google Oneindia Kannada News

ಉಡುಪಿ, ಮೇ 11: ಕೆಎಸ್ಆರ್ ಟಿಸಿಯ ಮಂಗಳೂರು ವಿಭಾಗದ ಉಡುಪಿ ಘಟಕದಿಂದ ಮೇ 2ರಿಂದ ಉಡುಪಿ-ಶಿವಮೊಗ್ಗ ಮಾರ್ಗದಲ್ಲಿ ಬಸ್ ಸೇವೆ ಆರಂಭಿಸಲಾಗಿದೆ. ಈ ಬಸ್ ಗಳು ಉಡುಪಿಯಿಂದ ಶಿವಮೊಗ್ಗಕ್ಕೆ ಬೆಳಗ್ಗೆ 6.30ರಿಂದ ಅರಂಭಗೊಂಡು 7, 7.30, 8, 8.30, ಮಧ್ಯಾಹ್ನ 3, 3.30, 4, 4.30 ಹಾಗೂ 5.30ಕ್ಕೆ ಹೊರಡಲಿದೆ.

ಇನ್ನು ಶಿವಮೊಗ್ಗದಿಂದ ಉಡುಪಿಯ ಕಡೆಗೆ ಬೆಳಗ್ಗೆ 5, 6, 6.30, 7, 7.30, ಮಧ್ಯಾಹ್ನ 1.30, 2, 2.30, 3, 3.30ಕ್ಕೆ ಹೊರಡುತ್ತದೆ. ಇನ್ನೂ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಘಟಕ ವ್ಯವಸ್ಥಾಪಕರ ಮೊಬೈಲ್ ಫೋನ್ ಸಂಖ್ಯೆ 7760995407 ಅಥವಾ ಸಂಚಾರ ನಿಯಂತ್ರಕರ ಸಂಖ್ಯೆ 9663266400ಗೆ ಕರೆ ಮಾಡಬಹುದು.[ಯಾರಿಗೆ ಹೇಳೋಣ ಬಾಂಬೆ-ಮಂಗಳೂರು ಬಸ್ ಸಾರಥಿಗಳ ಪ್ರಾಬ್ಲಂ]

KSRTC bus service between Udupi-Shivamogga via Agumbe started from May 2nd

ಎರಡೂವರೆ ಕೋಟಿ ವಂಚನೆ ಆರೋಪ: ಕಾರ್ಕಳ ತಾಲೂಕಿನ ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನೌಕರನೊಬ್ಬ ಎರಡೂವರೆ ಕೋಟಿ ರುಪಾಯಿ ವಂಚನೆ ಮಾಡಿರುವುದಾಗಿ ದೂರು ದಾಖಲಾಗಿದೆ. ಪುಷ್ಪರಾಜ್ ಶೆಟ್ಟಿ ಎಂಬಾತನ ವಿರುದ್ಧ ಕೆರ್ವಾಶೆಯ ಜಯಕುಮಾರ್ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

English summary
KSRTC bus service between Udupi-Shivamogga via Agumbe started from May 2nd. Bus service providing by KSRTC Mangaluru unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X