ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೆರಿಕಾ ತಲುಪಿದ ಶ್ರೀಕೃಷ್ಣ, ಪ್ರತಿಷ್ಠಾಪನೆಗೆ ಕ್ಷಣಗಣನೆ

ನೂಜೆರ್ಸಿಯ ಎಡಿಸನ್ ನಲ್ಲಿ ಶ್ರೀ ಕೃಷ್ಣ ವೃಂದಾವನ ಸ್ಥಾಪನೆಯಾಗುತ್ತಿದ್ದು ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲಾದ ಶ್ರೀಕೃಷ್ಣ ಪ್ರತಿಮೆಯನ್ನು ಅಮೆರಿಕಾಗೆ ರವಾನಿಸಲಾದೆ.

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 7: ಅಮೆರಿಕಾದಲ್ಲಿ ಸ್ಥಾಪಿಸಲಾಗುತ್ತಿರುವ ಪುತ್ತಿಗೆ ಶಾಖಾ ಮಠಕ್ಕೆ ರವಾನೆಯಾಗಿದ್ದ ಶ್ರೀ ಕೃಷ್ಣನ ಪ್ರತಿಮೆ ತಲುಪಿದೆ. ನ್ಯೂಜೆರ್ಸಿಯ ಎಡಿಸನ್‌ನಲ್ಲಿ ಈ ಶಾಖಾ ಮಠವನ್ನು ಸ್ಥಾಪಿಸಲಾಗುತ್ತಿದೆ.

ನೂಜೆರ್ಸಿಯ ಎಡಿಸನ್ ನಲ್ಲಿ ಶ್ರೀ ಕೃಷ್ಣ ವೃಂದಾವನ ಸ್ಥಾಪನೆಯಾಗುತ್ತಿದ್ದು ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲಾದ ಶ್ರೀಕೃಷ್ಣ ಪ್ರತಿಮೆಯನ್ನು ಅಮೆರಿಕಾಗೆ ರವಾನಿಸಲಾಗಿದೆ. ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿಶ್ರೀಕೃಷ್ಣ ಪ್ರತಿಮೆ ಅಮೆರಿಕಾ ತಲುಪಿದೆ.[ಅಮೆರಿಕಾದ ಎಡಿಸನ್ ನಲ್ಲಿ ಕೃಷ್ಣಾವತಾರ]

Krishna idol safely reaches to New Jersey from Udupi

ಮೇ 8ರಂದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಉಪಸ್ಥಿತಿಯಲ್ಲಿ ನ್ಯೂಜೆರ್ಸಿಯ ಶ್ರೀಕೃಷ್ಣ ವೃಂದಾವನದಲ್ಲಿ ಸಾಲಿಗ್ರಾಮ ಶಿಲೆಯ ಶ್ರೀಕೃಷ್ಣ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ

ಅಮೆರಿಕಾದಲ್ಲಿ ತಲೆ ಎತ್ತಲಿರುವ ಈ ಪ್ರಥಮ ಕೃಷ್ಣ ಮಂದಿರದ ನಿರ್ಮಾಣ ಕಾರ್ಯಕ್ಕಾಗಿ ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಸುಮಾರು 35 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ 4.50 ಎಕರೆ ವಿಸ್ತೀರ್ಣವುಳ್ಳ ಅರಮನೆಯಂತಹ ಬೃಹತ್ ಚರ್ಚ್ ವೊಂದನ್ನು ಖರೀದಿಸಲಾಗಿತ್ತು. ಅಲ್ಲಿ ಈ ಸಾಲಿಗ್ರಾಮದಿಂದ ಕೆತ್ತನೆ ಮಾಡಿದ ಕಡೆಗೋಲು ಕೃಷ್ಣನ ಪ್ರತಿಷ್ಠಾಪನೆ ನಡೆಯಲಿದೆ.

ಶ್ರೀಕೃಷ್ಣ ವಿಗ್ರಹದ ವೈಶಿಷ್ಟ್ಯ

ಸುಮಾರು ಮೂರೂವರೆ ಅಡಿ ಎತ್ತರದ ಕುಡುಗೋಲುಧಾರಿ ಶ್ರೀಕೃಷ್ಣನ ವಿಗ್ರಹವನ್ನು ನೇಪಾಳದ ಗಂಡಕಿ ನದಿಯ ಗೋಶಾಲೆ ಬಳಿಯೊಂದರಲ್ಲಿ ದೊರಕಿದ ಸಾಲಿಗ್ರಾಮ ಶಿಲೆಯಿಂದ ಕೆತ್ತನೆ ಮಾಡಲಾಗಿದೆ. ಕರಾವಳಿಯ ಶಿಲ್ಪಿಗಳು ಆರು ತಿಂಗಳ ಕಾಲ ಶ್ರಮಪಟ್ಟು ಮೂರ್ತಿ ನಿರ್ಮಾಣದ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

English summary
The idol of Lord Sri Krishna sculpted in saligrama shile is now safely reached to New Jersey, United States of America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X