ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಶಾಸಕರ ಸಂಖ್ಯೆ 115ಕ್ಕೆ ಏರಿಕೆಯಾಗಲಿದೆ : ಶ್ರೀನಿವಾಸ ಪೂಜಾರಿ

|
Google Oneindia Kannada News

ಉಡುಪಿ, ಜನವರಿ 18 : 'ನಿಮ್ಮ ಶಾಸಕರನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ. ಈಗಿರುವ ಬಿಜೆಪಿ ಶಾಸಕರ ಸಂಖ್ಯೆ 106 ರಿಂದ 115ಕ್ಕೆ ಏರಿಕೆಯಾದರೆ ಅದಕ್ಕೆ ನೀವೇ ಹೊಣೆ' ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಶುಕ್ರವಾರ ಉಡುಪಿಯಲ್ಲಿ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. '104 ಇದ್ದ ಬಿಜೆಪಿ ಶಾಸಕರ ಸಂಖ್ಯೆ ಈಗ 106ಕ್ಕೆ ಏರಿಕೆಯಾಗಿದೆ' ಎಂದರು.

ಸಿದ್ದರಾಮಯ್ಯ ಕೈಗೂ ಸಿಕ್ಕಿಲ್ಲ ರಮೇಶ್ ಜಾರಕಿಹೊಳಿ!ಸಿದ್ದರಾಮಯ್ಯ ಕೈಗೂ ಸಿಕ್ಕಿಲ್ಲ ರಮೇಶ್ ಜಾರಕಿಹೊಳಿ!

'ನಿಮ್ಮ ಶಾಸಕರನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಿ. ಕಾಂಗ್ರೆಸ್ ಶಾಸಕರ ಬಗ್ಗೆ ಅವರಿಗೆ ಅನುಮಾನವಿದೆ. ಸಿಎಲ್‌ಪಿ ಸಭೆಯಲ್ಲಿ ಏನಾಗುತ್ತದೋ?' ಮುಂದೆ ನೋಡೋಣ ಎಂದು ತಿಳಿಸಿದರು.

ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ ಎಚ್.ಡಿ.ಕುಮಾರಸ್ವಾಮಿ!ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ ಎಚ್.ಡಿ.ಕುಮಾರಸ್ವಾಮಿ!

Kota Srinivas Poojary statement on operation kamala

'ನಿಮ್ಮ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ. ಬಿಜೆಪಿಯ ಈಗಿರುವ ಶಾಸಕರ ಸಂಖ್ಯೆ 106, 115ಕ್ಕೆ ಏರಿಕೆಯಾದರೆ ಅದಕ್ಕೆ ನೀವೇ ಹೊಣೆ' ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.

ಅಮಿತ್ ಶಾ ದೊಡ್ಡ ಸುಳ್ಳುಗಾರ, ಚಾಣಾಕ್ಷ ಅಲ್ಲ : ಕಾಂಗ್ರೆಸ್‌ ವ್ಯಂಗ್ಯಅಮಿತ್ ಶಾ ದೊಡ್ಡ ಸುಳ್ಳುಗಾರ, ಚಾಣಾಕ್ಷ ಅಲ್ಲ : ಕಾಂಗ್ರೆಸ್‌ ವ್ಯಂಗ್ಯ

ಬಿ.ಕೆ.ಹರಿಪ್ರಸಾದ್ : ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಕಾಂಗ್ರೆಸ್ ನಾಯಕರು ಜವಾಬ್ದಾರಿಯಿಂದ ಮಾತನಾಡಲಿ. ಬಿ.ಕೆ.ಹರಿಪ್ರಸಾದ್ ಅವರಿಗೆ ಮಾತಿನ ಮೇಲೆ ನಿಗಾ ಇರಲಿ' ಎಂದರು.

'ಆಪರೇಷನ್ ಕಮಲ ಮಾಡಲು ಹೊರಟಿದ್ದಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಹಂದಿ ಜ್ವರ ಬಂದಿದೆ' ಎಂದು ಬಿ.ಕೆ.ಹರಿಪ್ರಸಾದ್ ಅವರು ಗುರುವಾರ ಹೇಳಿಕೆ ನೀಡಿದ್ದರು.

English summary
Karnataka legislative council opposition leader Kota Srinivas Poojary said that, If BJP MLA's number 106 to 115 Congress in responsible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X